ನಾನು ಹೇಳುವುದನ್ನು ನಾನು ಹೊಂದಿಕೊಳ್ಳುತ್ತೇನೆ, ಯೇಸುವಿನ ನಾಮದಲ್ಲಿ (ಯೋವಾನ್ನ 14:13)
ನಾನು ಬಲಶಾಲಿಯಾಗಿದ್ದೇನೆ (ಎಫೆಸಿ 6:10)
ನಾನು ಆರೋಗ್ಯಶಾಲಿಯಾಗಿದ್ದೇನೆ (1 ಪೇತ್ರ 2:24)
ನಾನು ಆಶೀರ್ವದಿಸಲ್ಪಟ್ಟಿದ್ದೇನೆ (ಎಫೆಸಿ 1:3)
ನಾನು ಶಕ್ತಿಶಾಲಿಯಾಗಿದ್ದೇನೆ (ಯೆಶಾಯ 40:29)
ನಾನು ಅಭಿಷೇಕಿಸಲ್ಪಟ್ಟಿದ್ದೇನೆ (1 ಯೋವಾನ್ನ 2:20)
ನಾನು ಬಿಡುಗಡೆ ಹೊಂದಿದವನಾಗಿದ್ದೇನೆ (ಯೋವಾನ್ನ 8:36)
ನಾನು ದೇವರ ಪ್ರಿಯನಾದವನಾಗಿದ್ದೇನೆ (ಮಾರ್ಕ 1:11)
ನಾನು ದೇವರಿಂದಲೂ ಮತ್ತು ಜನರಿಂದಲೂ ಸಹಾಯವನ್ನು ಹೊಂದಿದವನಾಗಿದ್ದೇನೆ (ಆದಿಕಾಂಡ 39:23)
ನಾನು ಏನನ್ನು ಕಾಣಲು ಬಯಸುತ್ತೇನೊ ಅದನ್ನು ನುಡಿಯುತ್ತೇನೆ ನಾನು ಏನನ್ನು ನೋಡುತ್ತಿದ್ದೇನೊ ಅದನ್ನಲ್ಲ (2 ಕೊರಿಂಥಿ 4:18)
ನಾನು ಅಮೂಲ್ಯವಾದ ಬೀಜವಾಗಿದ್ದೇನೆ (ಲೂಕಾ 8:15)
ನಾನು ನನ್ನ ದೇವರ ಮನೆಯ ಒಳ್ಳೆಯ ನೆಲದಲ್ಲಿ ಬಿತ್ತಲ್ಪಟ್ಟಿದ್ದೇನೆ (ಕೀರ್ತನೆ 92:13)
ನಾನು ನನ್ನ ಪ್ರಭುವಿನ ಅಂಗಳದಲ್ಲಿರುವ ತಾಳೆ ಮರದ ಹಾಗೆ ಫಲಭರಿತನಾಗಿರುತ್ತೇನೆ (ಕೀರ್ತನೆ 92:13)
ನಾನು ಸಕಾಲದಲ್ಲಿ ಫಲ ನೀಡುವವನಾಗಿದ್ದೇನೆ (ಕೀರ್ತನೆ 1:3)
ನಾನು ಪ್ರಭುವಿನಲ್ಲಿ ಪಚ್ಚೆ ಪಸಿರುಗಳಿಂದ ತುಂಬಿರುವವನಾಗಿದ್ದೇನೆ (ಕೀರ್ತನೆ 92:14)
ನಾನು ವೃದ್ಧಾಪ್ಯದಲ್ಲಿಯೂ ತಾಜಾ ಹಾಗೂ ಸಮೃದ್ಧಿಯುಳ್ಳವನಾಗಿರುತ್ತೇನೆ (ಕೀರ್ತನೆ 92:14)
ನನ್ನ ಎಲೆಗಳು ಒಣಗುವುದಿಲ್ಲ ಮತ್ತು ನಾನು ಮಾಡುವ ಎಲ್ಲಾ ಕಾರ್ಯಗಳು ಸಮೃದ್ಧಿಯನ್ನು ಹೊಂದುತ್ತವೆ,ಯೇಸುವಿನ ನಾಮದಲ್ಲಿ (ಕೀರ್ತನೆ 1:3)
ಎಲ್ಲಾ ಕಾರ್ಯಗಳು ನನ್ನ ಒಳಿತಿಗಾಗಿ ಆಗುತ್ತಿವೆ,ಯೇಸುವಿನ ನಾಮದಲ್ಲಿ (ರೋಮ 8:28)
ಕ್ರಿಸ್ತಯೇಸುವಿನಲ್ಲಿ ನಾನು ಎಲ್ಲಾ ಆಧ್ಯಾತ್ಮಿಕ ಆಶೀರ್ವಾದಗಳನ್ನು ಸ್ವೀಕರಿಸಿರುವವನಾಗಿದ್ದೇನೆ (ಎಫೆಸಿ 1:3)
ನಾನು ಜೀವಿಸುವ ಆತ್ಮನಾಗಿದ್ದೇನೆ
ನನ್ನ ಆತ್ಮವು ಪ್ರಾಣವನ್ನು ಹೊಂದಿದೆ
ನನ್ನ ಆತ್ಮ ಮತ್ತು ಪ್ರಾಣಗಳು ಭೌತಿಕ ಶರೀರದಲ್ಲಿ ನೆಲೆಸಿವೆ
ನನ್ನ ಆತ್ಮವು ನನ್ನ ಪ್ರಾಣಕ್ಕೆ ಆದೇಶಿಸುತ್ತದೆ, ನನ್ನ ಪ್ರಾಣವು ಅದಕ್ಕೆ ಕಿವಿಗೊಡುತ್ತದೆ, ಅದನ್ನು ಸ್ವೀಕರಿಸುತ್ತದೆ ಮತ್ತು ನನ್ನ ದೇಹಕ್ಕೆ ಸೂಚನೆಗಳನ್ನು ನೀಡುತ್ತದೆ ಮತ್ತು ಆಗ ನನ್ನ ಶರೀರವು ಅದಕ್ಕೆ ವಿಧೇಯವಾಗುತ್ತದೆ
ಯೇಸುವಿನ ನಾಮದಲ್ಲಿ, ನಾನು ನನ್ನ ದೇಹಕ್ಕೆ ದೇವರ ಅಮರವಾದ ಜೀವವು ಸ್ಪಷ್ಟವಾದುದು ಮತ್ತು ಅದು ಯಾವಾಗಲೂ ನನ್ನ ಜೀವನದಲ್ಲಿ ವ್ಯಕ್ತವಾಗುತ್ತಿದೆ ಎಂದು ನುಡಿಯುತ್ತೇನೆ,
ನಾನು ನನ್ನ ಶರೀರದ ಪ್ರತಿಯೊಂದು ವಿವರಣೆಗಳಿಗೆ ಜೀವವನ್ನು ನುಡಿಯುತ್ತೇನೆ
ನಾನು ನನ್ನ ಮನಸ್ಸಿಗೆ ಕ್ರಿಸ್ತರ ಮನಸ್ಸಿನ ಹಾಗೆ ಪರಿಪೂರ್ಣವಾಗಿರುವಂತೆ ನುಡಿಯುತ್ತೇನೆ ಮತ್ತು ನೀನು ದೇವರ ವಾಕ್ಯದಿಂದ ಸರಿ ಹೊಂದು ಎಂದು ನಿನಗೆ ಆದೇಶಿಸಿತ್ತೇನೆ
ನಾನು ನನ್ನ ಟೆಂಡನ್ ಗಳು ಮತ್ತು ನರಗಳಿಗೆ ಜೀವವನ್ನು ನುಡಿಯುತ್ತೇನೆ
ನಾನು ನನ್ನ ಸ್ನಾಯಗಳು ಮತ್ತು ಸ್ನಾಯುಪದರಗಳಿಗೆ ಶಕ್ತಿಯನ್ನು ನುಡಿಯುತ್ತೇನೆ
ನಾನು ನನ್ನ ಹೃದಯಕ್ಕೆ ಹುರುಪನ್ನು ನುಡಿಯುತ್ತೇನೆ
ನಾನು ನನ್ನ ಶ್ವಾಸಕೋಶ ಮತ್ತು ಅದರ ಅಂಗಾಂಶಗಳಿಗೆ ಸರಿಯಾದ ಉಸಿರಾಟ ಮತ್ತು ಸಂಚಲನೆಯ ಅನುಪಾತವನ್ನು ಪಾಲಿಸಲು ನುಡಿಯುತ್ತೇನೆ
ನನ್ನ ಮೂತ್ರಕೋಶ, ಲಿವರ್ ಮತ್ತು ಪ್ಯಾಂಕ್ರಿಯಾಸ್ ಗಳಿಗೆ ಪರಿಪೂರ್ಣತೆಯನ್ನು ನುಡಿಯುತ್ತೇನೆ
ನನ್ನ ರಕ್ತದ ಪ್ರತಿಯೊಂದು ಕಣದಲ್ಲಿಯೂ ಜೀವವಿದೆ
ನನ್ನ ಮೂಳೆಗಳು, ಕೀಲುಗಳು ಮತ್ತು ಅಸ್ಥಿಮಜ್ಜೆಗಳು ಜೋಡಣೆಗೊಂಡಿವೆ, ಹಾಗೂ ಶಕ್ತಿಭರಿತವಾಗಿಯೂ ಮತ್ತು ಸದೃಢವಾಗಿಯೂ ಇವೆ
ನನ್ನ ಮೇಲಿನ ಮತ್ತು ಕೆಳಗಿನ ಸಂಪೂರ್ಣ ಅವಯವಗಳು (ಕೈಕಾಲುಗಳು) ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ
ನನ್ನ ಕಣ್ಣುಗಳು ಸ್ಪಷ್ಟವಾದ ಹಾಗೂ ಪರಿಪೂರ್ಣವಾದ ದೃಷ್ಟಿಯನ್ನು ಹೊಂದಿವೆ ಮತ್ತು
ನನ್ನ ಕಿವಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ
ನನ್ನ ಚರ್ಮವು ಈಗ ತಾನೆ ಹುಟ್ಟಿದ ಮಗುವಿನ ಹಾಗೆಯೂ ಹಾಗೂ ದೇವರ ಸೌಂದರ್ಯದ ಹಾಗೆಯೂ ಕೋಮಲವಾಗಿ ಹಾಗೂ ಆರೋಗ್ಯವಾಗಿಯೂ ಇದೆ
ನನ್ನ ಕೂದಲಿನ ಅಂಗಾಂಶಗಳು ಬಲವಾಗಿವೆ. ನನ್ನ ಕೂದಲಿಗೆ ಸೂಕ್ತ ಸ್ಥಳದಲ್ಲಿ ಇರುವಂತೆ ಆದೇಶಿಸುತ್ತೇನೆ ಮತ್ತು ಎಲ್ಲಿ ಬೆಳವಣಿಗೆಯ ಅವಶ್ಯಕತೆ ಇದೆಯೋ ಆ ಅಂಗಾಂಶಗಳಿಗೆ ನಾನು ಬೆಳವಣಿಗೆಯನ್ನು ಆದೇಶಿಸುತ್ತೇನೆ
ನನ್ನ ಹಲ್ಲುಗಳು, ವಸಡುಗಳು,ದವಡೆ ಮೂಳೆಗಳು ಮತ್ತು ಅಲ್ಲಿನ ರಕ್ತ ಸಂಚಲನೆಗಳೆಲ್ಲವೂ ಆರೋಗ್ಯವಾಗಿಯೂ, ಬಲವಾಗಿಯೂ ಮತ್ತು ಪರಿಪೂರ್ಣವಾಗಿಯೂ ಇವೆ
ನನ್ನ ಎಲ್ಲಾ ಹಾರ್ಮೋನುಗಳು ಮತ್ತು ನರಗಳ ರಾಸಾಯನಿಕ ವಾಹಕಗಳು ಪರಸ್ಪರ ಪರಿಪೂರ್ಣವಾದ ಸೌಹಾರ್ದತೆಯಲ್ಲಿ ಇವೆ ಮತ್ತು ತಮ್ಮ ಕಾರ್ಯಗಳನ್ನು ಸಾಧಾರಣವಾಗಿ ನಿರ್ವಹಿಸುತ್ತಾ ಇವೆ.
ನನ್ನ ಜೀರ್ಣ ವ್ಯವಸ್ಥೆಯು ಜೀರ್ಣಿಸಲು, ,ಹೀರಲು ಮತ್ತು ಸೇವಿಸಿದ ಎಲ್ಲಾ ಆಹಾರವನ್ನು ಸಂಯೋಜಿಸಲು ಸಮರ್ಥವಾಗಿದೆ ಮತ್ತು ಜೀರ್ಣಕ್ರಿಯೆಯ ತ್ಯಾಜ್ಯ ವಸ್ತುಗಳು ನಿಯಮಿತವಾಗಿ ವಿಸರ್ಜಿಸಲ್ಪಡುತ್ತವೆ
ತಿನ್ನುವುದರಲ್ಲಿ, ತಂತ್ರಜ್ಞಾನ, ಮಾಧ್ಯಮ, ವಿಳಂಬ ಪ್ರವೃತ್ತಿ, ಹರಟೆ, ಸೋಮಾರಿತನ, ಅತಿಯಾದ ನಿದ್ದೆ ಮತ್ತು ನಿರಾಸಕ್ತಿಯಲ್ಲಿ ಎಲ್ಲಾ ರೀತಿಯ ಅತಿಯಾದ ಆಸೆಯನ್ನು ನಾನು ಸೆರೆಹಿಡಿದು ಕ್ರಿಸ್ತನಿಗೆ ವಿಧೇಯವಾಗುವಂತೆ ಮಾಡುತ್ತೇನೆ. ಯೇಸು ಹೇಗಿದ್ದರೋ ನಾನು ಹಾಗೆಯೆ ಇದ್ದೇನೆ!
ದೇವರು ಸೃಷ್ಟಿಸಿರುವ ಎಲ್ಲವೂ ನನಗೆ ಜೀವ ಮತ್ತು ಆರೋಗ್ಯಕರವಾಗಿದೆ, ಆದ್ದರಿಂದ ಆಹಾರ, ಧೂಳು, ಪ್ರಾಣಿಗಳು ಇತ್ಯಾದಿಗಳಿಂದ ಉಂಟಾಗುವ ಅಲರ್ಜಿಗಳು ನನ್ನ ಮೇಲೆ ಯಾವುದೇ ಅಧಿಕಾರವನ್ನು ಹೊಂದಿಲ್ಲ. ದೇವರು ನನಗೆ ಇಡೀ ಭೂಮಿಯ ಮೇಲೆ ದೊರೆತನವನ್ನು ನೀಡಿದ್ದಾರೆ
ನನ್ನ ಸಂತಾನೋತ್ಪತ್ತಿಯ ವ್ಯವಸ್ಥೆಯು ಬೇಕಾದಷ್ಟು ಮತ್ತು ಉತ್ತಮವಾದ ಚಲನೆಯನ್ನು ಹೊಂದಿರುವ ಒಳ್ಳೆಯ ವೀರ್ಯಾಣುಗಳನ್ನು ಉತ್ಪಾದಿಸಿ ಶೇಖರಿಸುತ್ತಾ ಇದೆ
ನನ್ನ ಸಂತಾನೋತ್ಪತ್ತಿಯ ವ್ಯವಸ್ಥೆಯು ಸಮಯಕ್ಕೆ ಸರಿಯಾಗಿ ಅಂಡಾಶಯಗಳನ್ನು ಉತ್ಪಾದಿಸುತ್ತದೆ, ಭ್ರೂಣವನ್ನು ಹೆರಿಗೆಯ ಸಮಯದವರೆಗೂ ಸಂರಕ್ಷಿಸಿ ಪೋಷಿಸುತ್ತದೆ
ನನ್ನ ಶರೀರದ ಪ್ರತಿಯೊಂದು ಅಂಗಾಂಗವೂ,ಪ್ರತಿಯೊಂದು ಅಂಗಾಂಶವೂ ಅದನ್ನು ದೇವರು ಯಾವ ಕಾರ್ಯವನ್ನು ಮಾಡಲು ಸೃಷ್ಟಿಸಿದರೊ ಆ ಕಾರ್ಯವನ್ನು ಅದು ಪರಿಪೂರ್ಣವಾಗಿ ಮಾಡುತ್ತಿದೆ ಮತ್ತು ನಾನು ನನ್ನ ದೇಹದಲ್ಲಿ ಯಾವುದೇ ರೀತಿಯ ಅಸಮರ್ಪಕವಾದ ಕ್ರಿಯೆ ಮತ್ತು ಅಸಮರ್ಪಕವಾದ ರಚನೆಯನ್ನು ವರ್ಜಿಸುತ್ತೇನೆ,ಯೇಸುವಿನ ನಾಮದಲ್ಲಿ.
ನನ್ನ ಸಂಪೂರ್ಣ ಮಾನವ ಅಂಗರಚನೆ, ಚಯಾಪಚಯ ಕ್ರಿಯೆ ಮತ್ತು ಶರೀರ ರಚನೆಯು ಕ್ರಿಸ್ತ ಯೇಸುವಿನಲ್ಲಿ ಪರಿಪೂರ್ಣವಾಗಿದೆ. ಅಲ್ಲೇಲ್ಲೂಯ! ಆಮೆನ್.
ಪಿತ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಸುತ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಪವಿತ್ರಾತ್ಮ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಮಹೋನ್ನತದಿ ದೇವರಿಗೆ ಸ್ತುತಿಯೂ ಮತ್ತು ಮಹಿಮೆಯೂ ಸಲ್ಲಲಿ ಶಾಲೋಮ್