ನಾವು ವಿಫಲವಾದಾಗ, ದೇವರು ನಮ್ಮ ಮಟ್ಟಕ್ಕೆ ಇಳಿಯುತ್ತಾರೆ ಆದರೆ ಅದು ತೀರ್ಪಿನಿಂದಲ್ಲ, ಬದಲಿಗೆ ಕರುಣೆಯಿಂದ/ದಯೆಯಿಂದ.
ದೇವರ ಅಸಾಧಾರಣ ದಯೆ, ಪ್ರೀತಿ ಮತ್ತು ಕೃಪೆಯಿಂದ ಆತನು ಮನುಷ್ಯನ ರೂಪದಲ್ಲಿ ಇಳಿದು ಬಂದು ನಾವು ಜೀವಿಸಲು ಸಾಧ್ಯವಾಗದ ಪರಿಪೂರ್ಣ ಜೀವನವನ್ನು ನಡೆಸಿದರು. ದೇವರು ಪರಿಪೂರ್ಣತೆಯನ್ನು ಬಯಸುತ್ತಾರೆ ಮತ್ತು ಆತನು ನಮಗಾಗಿ ಪರಿಪೂರ್ಣನಾದನು. ಯೇಸುವು ಶರೀರಧಾರಿಯಾಗಿದ್ದ ದೇವರು ಮತ್ತು ನಾವು ತೆಗೆದುಕೊಳ್ಳಲು ಅರ್ಹರಾಗಿರುದ್ದ ದೇವರ ಕೋಪವನ್ನು ಆತನು ತೆಗೆದುಕೊಂಡನು. ನಾನು ಶಿಕ್ಷೆಗೆ ಅರ್ಹನಾಗಿದ್ದೇನೆ, ಆದರೆ ದೇವರು ನನಗಾಗಿ ತನ್ನ ಪ್ರೀತಿಯ ಮತ್ತು ಪರಿಪೂರ್ಣ ಮಗನನ್ನು ಜಜ್ಜಲ್ಪಡುವಂತೆ ಮಾಡಿದರು. ಅದುವೇ ದಯೆಯಾಗಿದೆ..
ದೇವರು ನಮ್ಮ ವಿಷಯದಲ್ಲಿ ದೀರ್ಘಶಾಂತಿ, ಸಹನೆಯುಳ್ಳವರು. ಯಾರೊಬ್ಬನೂ ನಾಶವಾಗಬೇಕೆಂಬುದು ಅವರ ಇಚ್ಛೆಯಲ್ಲ; ಎಲ್ಲರೂ ಪಶ್ಚಾತ್ತಾಪಪಟ್ಟು ತಮಗೆ ಅಭಿಮುಖರಾಗಬೇಕೆಂಬುದೇ ಅವರ ಅಪೇಕ್ಷೆ.
ನಮಗೆ ಅರ್ಹವಾದದ್ದನ್ನು ನೀಡುವ ಬದಲು, ದೇವರು ಮತ್ತೆ ಮತ್ತೆ ದಯೆ ತೋರಿಸಿದ್ದಾರೆ, ನಮ್ಮ ಜವಾಬ್ದಾರಿಯನ್ನು ಕಸಿದುಕೊಳ್ಳಲು ಅಲ್ಲ, ಆದರೆ ಪಶ್ಚಾತ್ತಾಪ ಪಡಲು ಮತ್ತು ರಕ್ಷಣೆಹೊಂದಿಕೊಳ್ಳಲು ನಮಗೆ ಒಂದು ಅವಕಾಶವನ್ನು ನೀಡಲು.
ಯೇಸು ಕ್ರಿಸ್ತನಲ್ಲಿ ಮಾತ್ರ ನಂಬಿಕೆ ಇಡುವವರಿಗೆ ದೇವರು ರಕ್ಷಣೆಯನ್ನು ನೀಡುತ್ತಾರೆ. ವಿಶ್ವಾಸದಿಂದ ಯೇಸುವು ನಮ್ಮ ಪಾಪಗಳಿಗಾಗಿ ಸತ್ತರು ಎಂದು ನಾವು ನಂಬುತ್ತೇವೆ ಮತ್ತು ಆತನು ಮಾತ್ರವೇ ಸ್ವರ್ಗಕ್ಕೆ ಏಕೈಕ ಮಾರ್ಗವಾಗಿದ್ದಾನೆ. ನಾವು ಆ ಆಶೀರ್ವಾದಕ್ಕೆ ಅರ್ಹರೇ? ಖಂಡಿತ ಇಲ್ಲ. ನಮ್ಮ ಕರುಣಾಮಯಿ ದೇವರಿಗೆ ಮಹಿಮೆ ಸಲ್ಲಿಸಿ. ಅವರು ಎಲ್ಲಾ ಸ್ತುತಿಗೆ ಅರ್ಹರು. ನಮ್ಮ ರಕ್ಷಣೆಗಾಗಿ ನಾವು ಕೆಲಸ ಮಾಡಬೇಕಾಗಿಲ್ಲ. ನಾವು ಆತನಿಗೆ ಪ್ರೀತಿ, ಕೃತಜ್ಞತೆ ಮತ್ತು ಗೌರವದಿಂದ ವಿಧೇಯರಾಗುತ್ತೇವೆ..
ಆದರೆ, ಕರುಣೆಯನ್ನು ನಿರಾಕರಿಸುವವರಿಗೆ ನ್ಯಾಯತೀರ್ಪು ಸಿಗುತ್ತದೆ..
ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು. ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ..
’’ತಂದೆಯಾದ ದೇವರಿಂದಲೂ ಆ ತಂದೆಯ ಮಗನಾಗಿರುವ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯು ಕರುಣೆಯು ಮತ್ತು ಶಾಂತಿಯು ಸತ್ಯದಲ್ಲಿಯೂ ಪ್ರೀತಿಯಲ್ಲಿಯೂ ನಿಮ್ಮೊಂದಿಗಿರಲಿ.….’’(2 ಯೋವಾನ್ನ 1:3)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good