ಸುಜ್ಞಾನದ ಲೋಕಕ್ಕೆ ಪ್ರವೇಶ ಪ್ರಾರಂಭವಾಗುವುದೇ ವಿಶ್ವಾಸದಿಂದ..!
ನಾವು ನಮ್ಮ ಕಲ್ಪನೆಯ ವ್ಯಾಪ್ತಿಯಿಂದ ಮಾತ್ರ ಸೀಮಿತರಾಗಿದ್ದೇವೆ – ಆದ್ದರಿಂದ ಯೋಚಿಸಿ ಮತ್ತು ದೊಡ್ಡದಾದವುಗಳನ್ನು ನಂಬಿರಿ, ಏಕೆಂದರೆ ನಮ್ಮ ಆಲೋಚನೆಗಳ ಸ್ಥಿತಿಸ್ಥಾಪಕತ್ವವು (ಹಿಗ್ಗಿಸುವ ಸಾಮರ್ಥ್ಯವು) ನಮ್ಮ ಪ್ರಗತಿಯ/ಏಳಿಗೆಯ ಅಥವಾ ನಾವು ನಿರೀಕ್ಷಿಸುತ್ತಿರುವ ಮಹತ್ವದ ತಿರುವಿನ ಗಡಿಗಳನ್ನು ನಿರ್ಧರಿಸುತ್ತದೆ..
ನೀವು ಏನೆಂದು ಯೋಚಿಸುತ್ತೀರೋ ಅದುವೇ ನೀವಾಗಿದ್ದೀರಿ ಮತ್ತು ನಿಮ್ಮ ಫಲಗಳ ಮೂಲವು/ಬೇರು ನಿಮ್ಮ ಆಲೋಚನೆಗಳಾಗಿವೆ..
ನೀವು ಯೋಚಿಸುವ ವಿಧಾನವನ್ನು ಬದಲಾಯಿಸಿಕೊಳ್ಳುವುದು ನಿಮ್ಮ ದೃಷ್ಟಿಕೋನವನ್ನು (ಹೊರನೋಟ, ವರ್ತನೆ, ಮನಸ್ಸಿನ ಚೌಕಟ್ಟು) ಬದಲಾಯಿಸುತ್ತದೆ, ಅದು ನೀವು ಲೋಕದಲ್ಲಿ ಹೇಗೆ ವರ್ತಿಸುತ್ತೀರಿ ಎಂಬುದನ್ನು ಬದಲಾಯಿಸುತ್ತದೆ..
ತಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಲು ಯೇಸು ಜನರಿಗೆ ಸವಾಲು ಹಾಕಿದರು.
ನೀವು ದೇವರ ವಾಕ್ಯದಿಂದ ದೊಡ್ಡದನ್ನು ಯೋಚಿಸಿದಾಗ ಮತ್ತು ನಂಬಿದಾಗ ನೀವು ದೊಡ್ಡದಾದವುಗಳನ್ನು ಮತ್ತು ದೈವಿಕ ಫಲಿತಾಂಶಗಳನ್ನು ಸಾಧಿಸುವಿರಿ..
ಎಲ್ಲಿ ವಿಶ್ವಾಸ ಇರುತ್ತದೋ ಅಲ್ಲಿ ಜಯವಿದೆ..!!
‘’ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ……’’ ( 2 ಕೊರಿಂಥ 2:14)
March 31
Now to him who is able to do immeasurably more than all we ask or imagine, according to his power that is at work within us, to him be glory