ನೀವು ಆಶೀರ್ವದಿಸಲ್ಪಡಲು ಸಾಧ್ಯವಿಲ್ಲ, ನೀವು ಚೆನ್ನಾಗಿರಲು ಸಾಧ್ಯವಿಲ್ಲ, ನಿಮ್ಮ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ ಎಂಬ ಎಲ್ಲಾ ಕಾರಣಗಳನ್ನು ದೇವರಿಗೆ ಹೇಳಬೇಡಿ..
ನೀವು ಅದನ್ನು ಮಾನವ ದೃಷ್ಟಿಕೋನದಿಂದ ಮಾತ್ರ ನೋಡುತ್ತಿದ್ದೀರಿ – ಹೊಸ ದೃಷ್ಟಿಕೋನವನ್ನು ಹೊಂದಿರಿ..
ದೇವರು ಅದನ್ನು ನೋಡುವ ರೀತಿಯಲ್ಲಿ ನೋಡಿ ಮತ್ತು ಅವರು ತನ್ನ ವಾಕ್ಯದಲ್ಲಿ ಏನು ಹೇಳಿದ್ದಾರೋ ಅದನ್ನು ನಂಬಲು ಆಯ್ಕೆಮಾಡಿಕೊಳ್ಳಿ..
ನಿಮ್ಮ ನಂಬಿಕೆಯನ್ನು ವಿಸ್ತರಿಸಿ! ನಿಮ್ಮ ವಿಶ್ವಾಸವನ್ನು ವಿಸ್ತರಿಸಿ!
ದೇವರು ನಿಮ್ಮನ್ನು ವಿಸ್ತರಿಸಲು ಬಯಸುವ ವಿಧಾನಗಳಿಗೆ ಬಂದಾಗ ಈ ಕೆಳಗಿನವುಗಳನ್ನು ಪರಿಗಣಿಸಿ:
ನೀವು ಏನನ್ನಾದರೂ ಮಾಡಬೇಕೆಂದು ದೇವರು ಬಯಸಬಹುದು.
ನೀವು ಏನನ್ನಾದರೂ ಮಾಡುವುದನ್ನು ನಿಲ್ಲಿಸಬೇಕೆಂದು ದೇವರು ಬಯಸಬಹುದು.
ನಿಮಗೆ ಏನನ್ನಾದರೂ ಕೊಡಬೇಕೆಂದು ದೇವರು ಬಯಸಬಹುದು.
ನಿಮಗೆ ಏನನ್ನಾದರೂ ಹೇಳಬೇಕೆಂದು ದೇವರು ಬಯಸಬಹುದು.
ನೀವು ಏನನ್ನಾದರೂ ಹೇಳುವುದನ್ನು ನಿಲ್ಲಿಸಬೇಕೆಂದು ದೇವರು ಬಯಸಬಹುದು.
ನೀವು ಏನನ್ನಾದರೂ ಮಾರಾಟ ಮಾಡಬೇಕೆಂದು ದೇವರು ಬಯಸಬಹುದು.
ನೀವು ಏನನ್ನಾದರೂ ಖರೀದಿಸಬೇಕೆಂದು ದೇವರು ಬಯಸಬಹುದು. (ಸಂಭಾವ್ಯವಾಗಿ ಅಗತ್ಯವಿರುವ ವ್ಯಕ್ತಿಗೆ ಅಥವಾ ಪ್ರಾರ್ಥನಾತಂಡಕ್ಕೆ)
ನೀವು ಏನನ್ನಾದರೂ ಪ್ರಾರಂಭಿಸಬೇಕೆಂದು ದೇವರು ಬಯಸಬಹುದು.
ನೀವು ಏನನ್ನಾದರೂ ಕೊನೆಗೊಳಿಸಬೇಕೆಂದು ದೇವರು ಬಯಸಬಹುದು.
ನೀವು ಯಾರನ್ನಾದರೂ ಪ್ರೀತಿಸಬೇಕೆಂದು ದೇವರು ಬಯಸಬಹುದು.
ದೇವರು ಇಂದು ನಿಮ್ಮನ್ನು ವಿಸ್ತರಿಸಲು ಬಯಸುತ್ತಾರೆ! ಅವರಿಗೆ ನೀವು ಮುಕ್ತವಾಗಿರಿ! ನಿಮಗೆ ಸಹಾಯ ಮಾಡಲು ನಿಮ್ಮ ತರಬೇತುದಾರರಾದ ಪವಿತ್ರಾತ್ಮರನ್ನು ನೀವು ಹೊಂದಿದ್ದೀರಿ..
ನೀವು ಸೂಚನೆಗಳನ್ನು ಅನುಸರಿಸಿದಂತೆ ದೇವರು ನಿಮಗೆ ಅಸಾಧ್ಯವಾದ ವಿಷಯಗಳನ್ನು ಸಾಧ್ಯವಾಗಿಸಲು ಬಯಸುತ್ತಾರೆ..
”ಯೇಸು, “ಮಾನವರಿಗೆ ಅಸಾಧ್ಯವಾದುದು ದೇವರಿಗೆ ಸಾಧ್ಯ,” ಎಂದು ಹೇಳಿದರು…..” (ಲೂಕ 18:27)
March 31
Now to him who is able to do immeasurably more than all we ask or imagine, according to his power that is at work within us, to him be glory