ಕ್ರಿಸ್ತನ ಶಿಲುಬೆ ನಮಗೆ ವಿಜಯೋತ್ಸವವಾಗಿದೆ..!
ಕ್ರಿಸ್ತನ ಶಿಲುಬೆಯು ಪಾಪದ ಮೇಲೆ ದೇವರ ತೀರ್ಪಿನ ಕುರಿತು ಪ್ರಕಟಗೊಂಡ ಸತ್ಯವಾಗಿದೆ..
ದೇವರು ಮತ್ತು ಪಾಪಿಯಾಗಿದ್ದ ಮನುಷ್ಯನು ಬಹುದೊಡ್ಡ ಘರ್ಷಣೆಯೊಂದಿಗೆ ವಿಲೀನಗೊಂಡ(ಒಂದಾದ) ಮತ್ತು ಜೀವಕ್ಕೆ ದಾರಿ ತೆರೆಯಲ್ಪಟ್ಟ ಸ್ಥಳವೆಂದರೆ ಅದು ಶಿಲುಬೆಯಾಗಿದೆ. ಆದರೆ ಘರ್ಷಣೆಯ ಎಲ್ಲಾ ವೆಚ್ಚ ಮತ್ತು ನೋವು ದೇವರ ಹೃದಯದಿಂದ ಹೀರಿಕೊಳ್ಳಲ್ಪಟ್ಟಿತು.
ಹುತಾತ್ಮತೆಯ ಕಲ್ಪನೆಯನ್ನು ಕ್ರಿಸ್ತನ ಶಿಲುಬೆಯೊಂದಿಗೆ ಎಂದಿಗೂ ಸಂಯೋಜಿಸಬೇಡಿ. ಇದು ಅತ್ಯುನ್ನತ ವಿಜಯವಾಗಿತ್ತು, ಮತ್ತು ಅದು ನರಕದ ಅಡಿಪಾಯವನ್ನು ಅಲ್ಲಾಡಿಸಿತು.
ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಸಾಧಿಸಿದ್ದಕ್ಕಿಂತ ಹೆಚ್ಚು ಖಚಿತವಾದ ಮತ್ತು ನಿರಾಕರಿಸಲಾಗದ ಸಮಯ ಅಥವಾ ಶಾಶ್ವತತೆ ಬೇರೆ ಯಾವುದೂ ಇಲ್ಲ – ಇಡೀ ಮಾನವ ಜನಾಂಗವನ್ನು ದೇವರೊಂದಿಗೆ ಸರಿಯಾದ ಸಂಬಂಧಕ್ಕೆ ಮರಳಿ ತರಲು ಅವರು ಸಾಧ್ಯವಾಗಿಸಿದರು.
ಅವರು ವಿಮೋಚನೆಯನ್ನು ಮಾನವ ಜೀವನದ ಅಡಿಪಾಯವನ್ನಾಗಿ ಮಾಡಿದರು; ಅಂದರೆ ಪ್ರತಿಯೊಬ್ಬ ವ್ಯಕ್ತಿಯು ದೇವರೊಂದಿಗೆ ಸಹಭಾಗಿತ್ವವನ್ನು ಹೊಂದಲು ಆತನು ಒಂದು ಮಾರ್ಗವನ್ನು ಮಾಡಿದರು.
ಶಿಲುಬೆಯು ಯೇಸುವಿಗೆ ಮಾತ್ರ ಹಾಗೆಯೇ ಸಂಭವಿಸಿದ ಸಂಗತಿಯಲ್ಲ- ಆತನು ಸಾಯಲು ಬಂದನು; ಆತನು ಬರುವುದರಲ್ಲಿ ಶಿಲುಬೆಯು ಆತನ ಉದ್ದೇಶವಾಗಿತ್ತು. ಆತನು “ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ವಧಿಸಲ್ಪಟ್ಟ ಕುರಿಮರಿ” (ಪ್ರಕಟಣೆ 13:8)
ಶಿಲುಬೆಯಿಲ್ಲದೆ ಕ್ರಿಸ್ತನ ಜೀವಂತರೂಪಕ್ಕೆ (ಶರೀರಧಾರಿ) ಅರ್ಥವಿಲ್ಲ.
ಬೇರ್ಪಡಿಸಿಕೊಳ್ಳುವುದರ ಬಗ್ಗೆ ಎಚ್ಚರದಿಂದಿರಿ ”ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು…” ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು” ( 1 ತಿಮೋಥಿ 3:16; 2 ಕೊರಿಂಥಿ 5:21)
ಶರೀರಧಾರಿಯಾಗಿ ಬಂದ ಉದ್ದೇಶ ವಿಮೋಚನೆಯಾಗಿತ್ತು. ದೇವರು ಶರೀರದಲ್ಲಿ ಬಂದದ್ದು ಪಾಪವನ್ನು ಹೋಗಲಾಡಿಸಲು, ತನಗಾಗಿ ಏನನ್ನಾದರೂ ಸಾಧಿಸಲು ಅಲ್ಲ.
ಶಿಲುಬೆಯೆಂದರೆ ದೇವರು ತನ್ನ ಸ್ವಭಾವವನ್ನು ಪ್ರದರ್ಶಿಸಿರುವುದಾಗಿದೆ. ಇದು ಯಾವುದೇ ಮತ್ತು ಪ್ರತಿಯೊಬ್ಬ ವ್ಯಕ್ತಿಯು ದೇವರೊಂದಿಗೆ ಐಕ್ಯತೆಯನ್ನು ಪ್ರವೇಶಿಸುವ ದ್ವಾರವಾಗಿದೆ.
ರಕ್ಷಣೆಯನ್ನು ಪಡೆಯುವುದು ತುಂಬಾ ಸುಲಭ ಕಾರಣವೇನೆಂದರೆ ಅದು ದೇವರಿಗೆ ಬಹಳ ವೆಚ್ಚವಾಯಿತು.
ಆತನ ಯಾತನೆ ಸಂಕಟವೇ ನಮ್ಮ ರಕ್ಷಣೆಯ ಸರಳತೆಗೆ ಆಧಾರವಾಗಿತ್ತು.
’’ನಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ ಬಾಧೆ ಅನುಭವಿಸಿ ಸತ್ತನು. ನೀತಿವಂತನಾಗಿದ್ದ ಆತನು ಅಪರಾಧಿಗಳಿಗಾಗಿ ಪ್ರಾಣಕೊಟ್ಟನು. ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು. ಆತನ ದೇಹವು ಕೊಲ್ಲಲ್ಪಟ್ಟಿತು, ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು…..’’ (1 ಪೇತ್ರ 3:18)
February 23
And let us consider how we may spur one another on toward love and good deeds. Let us not give up meeting together, as some are in the habit of