ನೀವು ಏನನ್ನು ವಿರೋಧಿಸುತ್ತೀರೋ ಅದು ಮುಂದುವರಿಯುತ್ತದೆ..!
ಪ್ರಲೋಭನೆಯನ್ನು ಜಯಿಸಲು ಪ್ರಮುಖವಾದ ಅಂಶವೆಂದರೆ: ಅದನ್ನು ಹೋರಾಡಬೇಡಿ. ಸುಮ್ಮನೆ ಗಮನವನ್ನು ಮರುಕೇಂದ್ರೀಕರಿಸಿ..
ಇದು ನಿಮ್ಮ ಆಲೋಚನೆಗಳೆಲ್ಲವನ್ನೂ ಕುದಿಸುತ್ತವೆ – ಆದ್ದರಿಂದ ಒಂದು ಆಲೋಚನೆಯು ನಿಮ್ಮನ್ನು ಪ್ರಚೋದಿಸಿದಾಗ, ನಿಮ್ಮ ಆಶೀರ್ವಾದಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ವಿವೇಚನೆಯನ್ನು ಹೊಂದಿರಿ ಮತ್ತು ಆಗ ಅದನ್ನು ದೂರವಿಡಲು ಬೇಕಾದಷ್ಟು ಪ್ರೇರಣೆ/ಉತ್ತೇಜನವನ್ನು ನೀವು ಹೊಂದುವಿರಿ ..!!
ನಿಮ್ಮ ಗಮನವನ್ನು ಸೆಳೆಯುವ ಯಾವುದೇ ವಿಷಯವು ನಿಮ್ಮನ್ನೂ ಸೆಳೆಯುತ್ತದೆ. ಪಾಪಕ್ಕಾಗಿ ಇರುವ ಯುದ್ಧವು ಯಾವಾಗಲೂ ಮನಸ್ಸಿನಲ್ಲಿ ಪ್ರಾರಂಭವಾಗುತ್ತದೆ.
ಅದಕ್ಕಾಗಿಯೇ ಬೈಬಲ್ ನ ಕೀರ್ತನೆ 119: 6 ರಲ್ಲಿ ಹೀಗೆ ಹೇಳುತ್ತದೆ “ನಿನ್ನ ಆಜ್ಞೆಗಳ ಬಗ್ಗೆ ನಾನು ಲಕ್ಷ್ಯವಿಡುವುದರಿಂದ ಮೂರ್ಖತನವನ್ನು ನಾನು ಮಾಡದಂತೆ ಅವು ತಡೆಯುತ್ತದೆ.” ಏಕೆ? ಏಕೆಂದರೆ ನೀವು ದೇವರ ಸತ್ಯದ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮನ್ನು ಪಾಪಕ್ಕೆ ಕರೆದೊಯ್ಯುವ ವಿಷಯಗಳ ಬಗ್ಗೆ ನೀವು ಯೋಚಿಸುವುದಿಲ್ಲ..
ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಇದು ನಿಜ – ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ. ನೀವು ದೈವೀಕ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ, ಅದು ನಿಮ್ಮನ್ನು ಆ ದಿಕ್ಕಿನಲ್ಲಿಯೇ ಎಳೆಯುತ್ತದೆ..
ನೀವು ಯಾವುದರ ಮೇಲೆ ಗಮನ ಕೇಂದ್ರೀಕರಿಸುತ್ತೀರೋ ಅದು ನಿಮ್ಮ ಲಕ್ಷ್ಯವನ್ನು ಸೆಳೆಯುತ್ತದೆ. ನಿಮ್ಮ ಲಕ್ಷ್ಯವನ್ನು ಸೆಳೆಯುವ ಯಾವುದೇ ವಿಷಯವು ನಿಮ್ಮನ್ನೂ ಸೆಳೆಯುತ್ತದೆ.
ನಿಮ್ಮ ಮನಸ್ಸನ್ನು ಬದಲಾಯಿಸುವುದೇ ಇದಕ್ಕೆ ಪ್ರಮುಖ ಕೀಲಿಯಾಗಿದೆ.
ಪ್ರಲೋಭನೆಯು ಯಾವಾಗಲೂ ಊಹಿಸಬಹುದಾದ ಮಾದರಿಯನ್ನು ಅನುಸರಿಸುತ್ತದೆ: ಗಮನ, ಪ್ರಚೋದನೆ ಮತ್ತು ಕ್ರಿಯೆ. ನಿಮ್ಮ ಮನಸ್ಸು ಸಿಕ್ಕಿಬೀಳುತ್ತದೆ, ನಿಮ್ಮ ಮನಸ್ಸು ಒದ್ದಾಡಲ್ಪಡುತ್ತದೆ ಮತ್ತು ನಂತರ ನೀವು ಅದರ ಮೇಲೆ ಕಾರ್ಯನಿರ್ವಹಿಸುತ್ತೀರಿ.
ನಿಮ್ಮ ಸಂದರ್ಭಗಳನ್ನು ನೀವು ಯಾವಾಗಲೂ ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಯಾವಾಗಲೂ ನೀವು ಹೇಗೆ ಭಾವಿಸುತ್ತೀರಿ ಅದನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ನೀವು ಯೋಚಿಸುವುದನ್ನು ನೀವು ನಿಯಂತ್ರಿಸಬಹುದು. ಅದು ಯಾವಾಗಲೂ ನಿಮ್ಮ ಆಯ್ಕೆಯಾಗಿದೆ. ಮತ್ತು ನೀವು ಯೋಚಿಸುವ ವಿಧಾನವನ್ನು ನೀವು ಬದಲಾಯಿಸಿದರೆ, ಅದು ನಿಮ್ಮ ಭಾವನೆಯನ್ನು ಬದಲಾಯಿಸುತ್ತದೆ ಮತ್ತು ಅದು ನೀವು ವರ್ತಿಸುವ ವಿಧಾನವನ್ನೂ ಬದಲಾಯಿಸುತ್ತದೆ..
‘’ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ……’’ (ಮತ್ತಾಯ 6:13)
March 31
Now to him who is able to do immeasurably more than all we ask or imagine, according to his power that is at work within us, to him be glory