ಆಲೋಚನೆಗಳು ನಮ್ಮ ತಲೆಯಲ್ಲಿ ಸುತ್ತುತ್ತಿರುವಾಗ (ಸುತ್ತಲೂ ತಿರುಗುತ್ತಿರುತ್ತವೆ) ನಾವು ಅವುಗಳನ್ನು ನಿಜದಂತೆ ಪರಿಗಣಿಸುವ ತಪ್ಪನ್ನು ಮಾಡುತ್ತೇವೆ..
ನಾವು ಯೋಚಿಸುವುದು ಯಾವಾಗಲೂ ನಿಖರವಾಗಿರುವುದಿಲ್ಲ – ಆಗ ನಾವು ಅದನ್ನು ದೇವರ ವಾಕ್ಯಕ್ಕೆ ಸರಿಯಾಗಿ ಜೋಡಿಸಬೇಕು ಮತ್ತು ಅವುಗಳನ್ನು ಸೆರೆಹಿಡಿಯಬೇಕು.
ನೀವು ಪವಿತ್ರ ಗ್ರಂಥವನ್ನು ಚೆನ್ನಾಗಿ ಅರಿತಿರುವಾಗ, ಈ ಪ್ರಕ್ರಿಯೆಯು ಸುಲಭವಾಗುತ್ತದೆ..
ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಪವಿತ್ರ ಗ್ರಂಥದ ವಾಕ್ಯವನ್ನು ನಿಮ್ಮ ಮುಂದೆ ಇರಿಸಿ. ಅದನ್ನು ನೋಡಿ, ನುಡಿಯಿರಿ, ನೆನಪಿನಲ್ಲಿಡಿ, ನಿಮ್ಮ ಆಲೋಚನೆಗಳನ್ನು ಸೆರೆಹಿಡಿಯಲು ಪ್ರತಿದಿನವೂ ನಿಮಗೆ ಅಗತ್ಯವಿರುವಷ್ಟು ಬಾರಿ ಅದನ್ನು ಯೋಚಿಸಿರಿ..
ವಾಕ್ಯವನ್ನು ರೆಕಾರ್ಡ್ ಮಾಡಿ, ಅದನ್ನು ಪುನರಾವರ್ತಿತವಾಗಿ ಪ್ಲೇ ಮಾಡಿ ಮತ್ತು ಅದನ್ನು ಪ್ಲೇ ಮಾಡಿ ಕೇಳುವಾಗ ಅದನ್ನೇ ಮತ್ತೆ ನೀವು ನುಡಿಯಿರಿ..
ನಿಮ್ಮ ನಕಾರಾತ್ಮಕ ಸ್ವ-ಮಾತುಕತೆಯನ್ನು ದೇವರ ವಾಕ್ಯದಿಂದ ಅಥವಾ ದೇವರಿಂದಲೇ ದೃಢೀಕರಿಸಿ..
ದೇವರ ಶಕ್ತಿಯು ಎಲ್ಲಕ್ಕಿಂತ ಪ್ರಬಲವಾಗಿದೆ ಮತ್ತು ಆ ನಕಾರಾತ್ಮಕ ಆಲೋಚನೆಗಳ ವಿರುದ್ಧ ಹೋರಾಡಲು ನೀವು ಆತನ ಅಸ್ತ್ರವನ್ನು ಬಳಸಿದಾಗ, ನೀವು ಗೆಲ್ಲುತ್ತೀರಿ!..
ಪವಿತ್ರ ಗ್ರಂಥದ ದೃಢೀಕರಣಗಳು ಕ್ರಿಸ್ತನಿಗೆ ವಿಧೇಯರಾಗಲು ನಮ್ಮ ಆಲೋಚನೆಗಳನ್ನು ಸೆರೆಹಿಡಿಯಲು ವಾಕ್ಯಗಳನ್ನು ಬಳಸುತ್ತವೆ.
ಇದರರ್ಥ ಶತ್ರು, ಸೈತಾನನ ಸುಳ್ಳನ್ನು ತಿರುಗಿಸುವುದು ಮತ್ತು ಅದನ್ನು ದೇವರ ವಾಕ್ಯದ ಸತ್ಯದಿಂದ ಬದಲಾಯಿಸುವುದಾಗಿದೆ..
’’ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು……’’ (ಜ್ಞಾನೋಕ್ತಿ 4:23)
May 2
Therefore, since we have been justified through faith, we have peace with God through our Lord Jesus Christ… —Romans 5:1. The cost of peace is always high. Jesus’ enormous sacrifice