ನಮ್ಮ ದೇವರು ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾಗಿದ್ದಾರೆ. – ನಮಗೆ ಹಳೆಯ ಪೀಳಿಗೆಯ(ಪೂರ್ವಜರ) ಜ್ಞಾನ, ಮಧ್ಯಮ ಪೀಳಿಗೆಯ ಸಂಪನ್ಮೂಲಗಳು ಮತ್ತು ಯುವ ಪೀಳಿಗೆಯ ಉತ್ಸಾಹವು ಬೇಕಾಗಿದೆ, ದೇವರು ನಮಗಾಗಿ ಮುಂಚಿತವಾಗಿ ಸಿದ್ಧಪಡಿಸಿದ ಕಾರ್ಯಗಳಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವವರಾಗಿದ್ದಾರೆ.
Re-fire, never RETIRE..! ಅಂದರೆ ಮತ್ತೆ ಉಜ್ವಲಿಸಿ ಎಂದಿಗೂ ನಿವೃತ್ತಿಹೊಂದಬೇಡಿ..!
ಒಬ್ಬರಿಗಿಂತ ಇಬ್ಬರು ಉತ್ತಮರು, ಏಕೆಂದರೆ ಅವರು ಪರಸ್ಪರ ಯಶಸ್ವಿಯಾಗಲು ಸಹಾಯ ಮಾಡಬಹುದು. ಒಬ್ಬರು ಬಿದ್ದರೆ, ಇನ್ನೊಬ್ಬರು ಕೈಚಾಚಿ ಸಹಾಯ ಮಾಡಬಹುದು. ಆದರೆ ಒಬ್ಬಂಟಿಯಾಗಿ ಬೀಳುವವನು ನಿಜವಾದ ತೊಂದರೆಯಲ್ಲಿದ್ದಾನೆ..
ಒಳ್ಳೆದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.
’’ಇಡೀ ದೇಹವು ಕ್ರಿಸ್ತಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲುಗಂಟು಼ಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನು ಪಡೆಯುತ್ತದೆ…….’’(ಎಫೆಸಿ 4:16)