ದೇವರು ನೀವಿರುವಂತೆಯೇ ನಿಮ್ಮನ್ನು ಬಳಸಿಕೊಳ್ಳಲು ಬಯಸುತ್ತಾರೆ..!
ಇತರ ಜನರ ಯಶಸ್ಸಿನ ಮೆಟ್ರಿಕ್‌ಗಳು (ದಕ್ಷತೆ, ಕಾರ್ಯಕ್ಷಮತೆ, ಪ್ರಗತಿ, ಗುಣಮಟ್ಟ ಅಥವಾ ಪ್ರಕ್ರಿಯೆಯನ್ನು ನಿರ್ಣಯಿಸಬಹುದಾದ ಮಾಪನದ ಮಾನದಂಡಗಳು) ನಿಮ್ಮದಾಗಲು ಬಿಡಬೇಡಿ..
ಪ್ರತಿಯೊಬ್ಬರೂ ಮೇಧಾವಿಗಳು, ಆದರೆ ಮರವನ್ನು ಏರುವ ಸಾಮರ್ಥ್ಯದಿಂದ ನೀವು ಮೀನನ್ನು ನಿರ್ಣಯಿಸುವುದಾದರೆ ಅದು ತನ್ನ ಇಡೀ ಜೀವನವನ್ನು ಅದನ್ನೇ ನಂಬುತ್ತಾ ಕಳೆಯುತ್ತದೆ ಇದು ಮೂರ್ಖತನ..
ಆದ್ದರಿಂದ ಇತರರು ಏನು ಮಾಡುತ್ತಿದ್ದಾರೆ ಎಂಬುದಕ್ಕೆ, ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಹೋಲಿಸಿಕೊಳ್ಳುವುದರ ಮೂಲಕ ಯಶಸ್ಸನ್ನು ಅಳೆಯಲಾಗುವುದಿಲ್ಲ.
ದೇವರು ನಿಮಗೆ ನೀಡಿರುವ ಸಾಮರ್ಥ್ಯದಿಂದ ನೀವು ಏನು ಮಾಡುತ್ತೀರಿ ಎಂಬುದರ ಮೂಲಕ ಅದನ್ನು ಅಳೆಯಲಾಗುತ್ತದೆ..!
ಕರ್ತನಲ್ಲಿ ನಮ್ಮ ವಿಶ್ವಾಸ ಮತ್ತು ದೃಢ ಭರವಸೆಯನ್ನು ಬೆಳೆಸುವ ಮತ್ತು ಉಪಯೋಗಿಸುವುದರ ಮೂಲಕ ನಮ್ಮ ಜೀವನದಲ್ಲಿ ಆತನ ಚಿತ್ತವನ್ನು ಪೂರೈಸಲು ನಾವು ಬಲಗೊಳ್ಳಬಹುದು – ಇದು ಯಶಸ್ಸಿನ ನಿಜವಾದ ಅಳತೆಯಾಗಿದೆ..!!
’’ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ….’’ (ಎಫೆಸಿ 2:10)
January 7
I will sing to the Lord all my life; I will sing praise to my God as long as I live. May my meditation be pleasing to him, as I rejoice in