ಮಾನವ ಸ್ವಭಾವದ ಮಣ್ಣಿನಲ್ಲಿ ಬಿತ್ತಿದ ಬೀಜಕ್ಕಿಂತ ಬೇರೆ ಯಾವುದೇ ಬೀಜವು ಬೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಮಾನವ ಸ್ವಭಾವವು ದೇವರಿಗೆ ತನ್ನನ್ನು ತಾನು ತಗ್ಗಿಸಿಕೊಳ್ಳಲು ಬಯಸುವುದಿಲ್ಲ ಮತ್ತು ಅದು ಯಾವುದಕ್ಕೂ ಕಾಯಲು ಬಯಸುವುದಿಲ್ಲ – ಆದರೆ ದೇವರಿಗೆ ಇವುಗಳು ಬೇಕಾಗುತ್ತವೆ..
ದೇವರು ಅದನ್ನು ಬಯಸುತ್ತಾರೆ ಏಕೆಂದರೆ ಆತನು ತನ್ನ ಸ್ವಭಾವದಿಂದ ತುಂಬಲು ನಮ್ಮನ್ನು ಸೃಷ್ಠಿಸಿದರು..
ಮಾನವ ಸ್ವಭಾವದ ಮಣ್ಣಿನಲ್ಲಿ ಬಿತ್ತಿದ ಬೀಜಕ್ಕಿಂತ ಬೇರೆ ಯಾವುದೇ ಬೀಜವು ಬೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬುದಕ್ಕೆ ಕಾರಣವೇನೆಂದರೆ ದೇವರು ನಮ್ಮನ್ನು ಎಂದಿಗೂ ಮಾನವ ಸ್ವಭಾವದಿಂದ ತುಂಬಲು ಸೃಷ್ಠಿಸಲಿಲ್ಲ ಆದರೆ ಅವರ ಸ್ವಭಾವದಲ್ಲಿ ತುಂಬಿಸಲು ಸೃಷ್ಠಿಸಿದರು. ಅದು ಪ್ರೀತಿ, ದಯೆ(ಕರುಣೆ), ಕ್ಷಮೆಯಾಗಿದೆ..
ನಾವು ನಮ್ಮ ಮಾನವ ಸ್ವಭಾವವನ್ನು ಅವರ ಸ್ವಭಾವದೊಂದಿಗೆ “ಫಲವತ್ತಾಗಿ” ಮಾಡಬೇಕು.
ನಾವು ಅದನ್ನು ಹೇಗೆ ಮಾಡಬೇಕು?
ಯೇಸುವನ್ನು ನಮ್ಮ ಪ್ರಭು, ದೇವರು ಮತ್ತು ರಕ್ಷಕನನ್ನಾಗಿ ಸ್ವೀಕರಿಸುವ ಮೂಲಕ ಮತ್ತು ವಿಶ್ವಾಸದಿಂದ ನಂಬುವ ಮೂಲಕ, ಶಿಲುಬೆಯ ಮೇಲೆ ಆತನು ಪೂರ್ಣಗೊಳಿಸಿದ ಕಾರ್ಯಗಳು ಮತ್ತು ಆತನ ಶಿಲುಬೆಯ ಮೇಲಿನ ದೈವಿಕ ವಿನಿಮಯದ ಮೂಲಕ ಆತನ ವಾಕ್ಯದಲ್ಲಿ ನಮಗೆ ವಾಗ್ದಾನ ಮಾಡಿರುವ ಎಲ್ಲವನ್ನು ಸುವಾರ್ತೆ(ಶುಭಸಂದೇಶವನ್ನು) ಸಾರುವ/ಭೋದಿಸುವ ಮೂಲಕ..
ನಮ್ಮ ಆಲೋಚನೆಗಳು ಮತ್ತು ವರ್ತನೆಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ನಮ್ಮ ಮೇಲೆ ಎರಗುವ ಪ್ರಲೋಭನೆಗಳನ್ನು ವಿರೋಧಿಸುವ ಶಕ್ತಿಯನ್ನು ನಮ್ಮ ಸೃಷ್ಟಿಕರ್ತ ಮಾತ್ರವೇ ನೀಡಬಲ್ಲರು..
ಧರ್ಮಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ನಮ್ಮ ಮನಸ್ಸನ್ನು ತೆರೆಯುವ ಮೂಲಕ ಆತನು ನಮ್ಮನ್ನು ಕರೆಯುತ್ತಾರೆ..
ನಾವು ಅವರ ಕರೆಗೆ ಸ್ವಇಚ್ಛೆಯಿಂದ ಪ್ರತಿಕ್ರಿಯಿಸಿದರೆ ಮತ್ತು ಆತನೊಂದಿಗೆ ಸಹಕರಿಸಿದರೆ ನಂತರ ಅವರು ನಮ್ಮ ಜೀವನವನ್ನು ತಿರುಗಿಸಲು ಪ್ರಾರಂಭಿಸುತ್ತಾರೆ..
ಈಗ ನಿಮಗೆ ನೀಡಲಾದ ಪ್ರತಿಯೊಂದು ಪ್ರಕಟಣೆಯಿಂದ ಹೊಸದನ್ನು ಮಾಡುವ ಮತ್ತು ಮಹಿಮಾನ್ವಿತರಾದ ಕ್ರಿಸ್ತನನ್ನುನೀವು ಸ್ವೀಕರಿಸಿದಂತೆ ರೂಪಾಂತರಗೊಳ್ಳಲು-ಆಂತರ್ಯದಲ್ಲಿ ನಿಮ್ಮ ಜೀವನವನ್ನು ಹೊಸದಾಗಿ ಮತ್ತು ಆತನೊಂದಿಗೆ ಐಕ್ಯವಾಗಿ ಜೀವಿಸಲು ಸಮಯವಾಗಿದೆ! ಯಾಕಂದರೆ ದೇವರು ತನ್ನ ಪರಿಪೂರ್ಣ ನೀತಿವಂತಿಕೆಯಲ್ಲಿ ನಿಮ್ಮನ್ನು ಪುನಃ ನಿರ್ಮಿಸಿದ್ದಾರೆ ಮತ್ತು ನೀವು ಈಗ ನಿಜವಾದ ಪರಿಶುದ್ಧತೆಯ ಕ್ಷೇತ್ರದಲ್ಲಿ ಆತನಿಗೆ ಸೇರಿದವರಾಗಿದ್ದೀರಿ..
’’ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ…..’’ (ಫಿಲಿಪ್ಪಿ 2:13)
March 31
Now to him who is able to do immeasurably more than all we ask or imagine, according to his power that is at work within us, to him be glory