ನಮ್ಮಲ್ಲಿ ಹಲವರಿಗೆ ವಿಳಂಬಗಳು, ಅಡ್ಡದಾರಿಗಳು (ಪರೋಕ್ಷ ಮಾರ್ಗಗಳು) ಮತ್ತು ಗೊಂದಲಗಳು ಹೊಸದೇನಲ್ಲ.
ಹೇಗಾದರೂ, ಈ ಅಡಚಣೆಗಳ ನಡುವೆಯೂ ದೇವರು ಯಾವಾಗಲೂ ಕಾರ್ಯ ಮಾಡುತ್ತಾರೆ ಎಂದು ನೆನಪಿಸಿಕೊಳ್ಳಿ – ಆತನು ಶಕ್ತಿಯುತ, ನಂಬಿಗಸ್ಥ, ಮತ್ತು ಅವನು ನಿಮ್ಮನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ ಮತ್ತು ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ.
ಆತನನ್ನು ಹೆಚ್ಚು ಸಂಪೂರ್ಣವಾಗಿ ನಂಬಲು ಮತ್ತು ನಮ್ಮ ಜೀವನದ ಮೇಲೆ ಆತನ ಪ್ರಭುತ್ವಕ್ಕೆ ಹೆಚ್ಚು ಸಂಪೂರ್ಣವಾಗಿ ಅಧೀನವಾಗುವುದನ್ನು ನಮಗೆ ಕಲಿಸಲು ದೇವರು ತನ್ನ ವಿಳಂಬಗಳನ್ನು ಬಳಸುತ್ತಾರೆ.
ದೇವರು ತಡಮಾಡಿದಾಗ, ನಮ್ಮ ಕಾರ್ಯಸೂಚಿಗಳನ್ನು ಆತನಿಗೆ ಅಧೀನಗೊಳಿಸುವ ಮೂಲಕ ನಾವು ಆತನನ್ನು ನಂಬಬೇಕು.
ದೇವರು ತಡಮಾಡಿದಾಗ, ಆತನ ಶಕ್ತಿಯಿಂದ ನಮ್ಮ ಮೂಲಕ ಆತನ ಚಿತ್ತವನ್ನು ಸಾಧಿಸಲು ನಾವು ಆತನನ್ನು ನಂಬಬೇಕು.
ದೇವರು ತಡಮಾಡಿದಾಗ, ನಾವು ಆತನನ್ನು ನಂಬಬೇಕೇ ಹೊರತು ನಮ್ಮ ಪರಿಸ್ಥಿತಿಗಳನಲ್ಲ.
ನಮ್ಮ ಜೀವನದ ಮೇಲೆ ಆತನ ಪ್ರಭುತ್ವಕ್ಕೆ ಹೆಚ್ಚು ಸಂಪೂರ್ಣವಾಗಿ ಅಧೀನವಾಗುವುದನ್ನು ನಮಗೆ ಕಲಿಸಲು ದೇವರು ತನ್ನ ವಿಳಂಬಗಳನ್ನು ಬಳಸುತ್ತಾರೆ.
ಆತನೇ ದೇವರು ಹೊರೆತು ನಾವಲ್ಲ ಎಂದು ಒಪ್ಪಿಕೊಳ್ಳುವ ಮೂಲಕ ನಾವು ದೇವರ ಪ್ರಭುತ್ವಕ್ಕೆ ಅಧೀನರಾಗುತ್ತೇವೆ.
ನಾವು ಕಾಯುವ ಅವಧಿಯಲ್ಲಿ ಗೊಣಗದೆ ದೇವರ ಪ್ರಭುತ್ವಕ್ಕೆ ಅಧೀನರಾಗುತ್ತೇವೆ.
ನಾವು ಆತನಿಗಾಗಿ ಕಾಯುತ್ತಿರುವಾಗ ಪ್ರಸ್ತುತ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ನಾವು ದೇವರ ಪ್ರಭುತ್ವಕ್ಕೆ ಅಧೀನರಾಗುತ್ತೇವೆ.
ನಮ್ಮಲ್ಲಿ ನಾವು ನಂಬಿಕೆ ಇಡಲು ಮತ್ತು ನಮಗೆ ಅರ್ಹವಾದ ಎಲ್ಲವನ್ನೂ ಸಾಧಿಸಲು ಪ್ರೋತ್ಸಾಹಿಸುವ ಈ ಲೋಕದಲ್ಲಿ, ನಾವು ಯಾರಾಗಿದ್ದೇವೆ ಮತ್ತು ಯಾರಿಗೆ ಸೇರಿದವರಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.
’’ಆದರೆ ಪ್ರಿಯ ಸ್ನೇಹಿತರೇ, ಇದೊಂದನ್ನು ಮಾತ್ರ ಮರೆಯದಿರಿ. ಪ್ರಭುವಿಗೆ ಒಂದು ದಿನವು ಸಾವಿರ ವರ್ಷಗಳಂತಿದೆ ಮತ್ತು ಸಾವಿರ ವರ್ಷಗಳು ಒಂದು ದಿನದಂತಿದೆ. ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ……’’(2 ಪೇತ್ರ 3: 8-9)
January 13
Worship the Lord with gladness; come before him with joyful songs. —Psalm 100:2. Let’s not be limited to singing only in church buildings and sanctuaries. Worship is a whole body and