ನೀವು ಬಯಸಿದ ಸ್ಥಳದಲ್ಲಿ ನೀವು ಇಲ್ಲದಿದ್ದರೂ ಸಹ, ದೇವರು ನಿಮ್ಮಲ್ಲಿ ಪ್ರಾರಂಭಿಸಿದ ಒಳ್ಳೆಯ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಎಂಬ ದೃಢಭರವಸೆಯನ್ನು ನೀವು ಹೊಂದಿರಬೇಕು..!
ನಾವು ಪ್ರತಿದಿನವೂ ಲೆಕ್ಕವಿಲ್ಲದಷ್ಟು ಪರೀಕ್ಷೆಗಳನ್ನು ಎದುರಿಸುತ್ತೇವೆ ಆದರೆ ಪ್ರತಿ ಬಾರಿ ನಾವು ಬೆಂಕಿಯ ಮೂಲಕ ಹಾದು ಹೋದಾಗ, ನಾವು ಮೊದಲಿಗಿಂತ ಹೆಚ್ಚು ಪರಿಷ್ಕೃತವಾಗಿ(ಶುದ್ಧೀಕರಿಗೊಂಡು) ಇನ್ನೊಂದು ಬದಿಯಿಂದ ಹೊರಬರುತ್ತೇವೆ.
ದೇವರು ನಮ್ಮೊಂದಿಗೆ ಇನ್ನೂ ಮುಗಿಸಿಯಾಗಿಲ್ಲ!
ಸಂತ ಪೌಲರು ಅದೇ ಪರಿಸ್ಥಿತಿಗಳ ಮೂಲಕ ಹೋದರು. ಆತನು ಧರ್ಮಗ್ರಂಥಗಳ ವಿದ್ವಾಂಸನಾಗಿದ್ದನು ಆದರೆ ತನ್ನ ತಲೆಯಲ್ಲಿದ್ದ ಜ್ಞಾನವನ್ನು ಮಾತ್ರವೇ ಹೊಂದಿದ್ದನು, ಕ್ರೈಸ್ತರನ್ನು ಹಿಂಸಿಸಲು ದಮಸ್ಕಸ್ಗೆ ಹೋಗುವ ದಾರಿಯಲ್ಲಿ ಯೇಸುವನ್ನು ಸಂಧಿಸುವವರೆಗೂ ಕ್ರಿಸ್ತ ಯಾರೆಂದು ಆತನಿಗೆ ತಿಳಿದಿರಲಿಲ್ಲ ಮತ್ತು ಕ್ರಿಸ್ತನೊಂದಿಗೆ ಯಾವ ಸಂಬಂಧವನ್ನು ಹೊಂದಿರಲಿಲ್ಲ ಎಂಬುದನ್ನು ನೆನಪಿಡಿ. ಪೌಲರು ಹೇಳುವುದನ್ನು ಓದಿ..
ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ.
ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು.
ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
ನಿಮ್ಮ ದಿಟ್ಟ, ಧೈರ್ಯದ ವಿಶ್ವಾಸವನ್ನು ಕಳೆದುಕೊಳ್ಳಬೇಡಿ, ಏಕೆಂದರೆ ನೀವು ದೊಡ್ಡ ಪ್ರತಿಫಲಕ್ಕೆ ಗುರಿಹೊಂದಿದವರಾಗಿದ್ದೀರಿ!
’’ಆದ್ದರಿಂದ ಕರ್ತನಲ್ಲಿ ಹೊಂದಿದ್ದ ದೃಢ ಭರವಸೆಯನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ…….’’ (ಹಿಬ್ರಿಯ 10:35)
March 31
Now to him who is able to do immeasurably more than all we ask or imagine, according to his power that is at work within us, to him be glory