ಎಲ್ಲೆಲ್ಲಿ ವಿಶ್ವಾಸವಿರುತ್ತದೆಯೋ ಅಲ್ಲಿ ಜಯವಿದೆ..!
ವಿಶ್ವಾಸವು ನಿಮಗೆ ಸರ್ವಶಕ್ತ ದೇವರನ್ನು ಸ್ಪರ್ಶಿಸುವ ಸಾಮರ್ಥ್ಯವನ್ನು ನೀಡುತ್ತದೆ – ನಮ್ಮ ವಿಶ್ವಾಸದ ಮೂಲಕ, ಆತನು ಯಾರು, ಅವರು ಏನು ಮಾಡುತ್ತಾರೆ ಮತ್ತು ಆತನ ಮಕ್ಕಳ ಬಳಿ ಹೇಗೆ ಮಾತನಾಡುತ್ತಾರೆ, ಹೇಗೆ ಶಿಕ್ಷಣ ನೀಡುತ್ತಾರೆ ಮತ್ತು ಹೇಗೆ ಆಶೀರ್ವದಿಸುತ್ತಾರೆ ಎಂಬ ವಿಧಾನಗಳನ್ನು – ಜೀವನದಲ್ಲಿ ವಿಜಯಶಾಲಿಯಾಗಲು ಅಗತ್ಯವಿರುವ ಎಲ್ಲಾ ವಿಷಯಗಳನ್ನು ನಾವು ಕಂಡುಕೊಳ್ಳುತ್ತೇವೆ.
ವಿಶ್ವಾಸ ಎಂದರೇನು?
ವಿಶ್ವಾಸವು ದೇವರ ವಾಕ್ಯದಲ್ಲಿ ಪ್ರಕಟವಾದ ಮತ್ತು ವಾಗ್ದಾನಿಸಲಾದ ವಿಷಯಗಳು ಕಣ್ಣಿಗೆ ಕಾಣದಿದ್ದರೂ ಸಹ ಸತ್ಯವಾಗಿವೆ ಎಂಬ ಭರವಸೆಯಾಗಿದೆ(ನಿಶ್ಚಯವಾಗಿದೆ). ಮತ್ತು ವಿಶ್ವಾಸಿಗೆ ತಾನು ವಿಶ್ವಾಸದಲ್ಲಿ ಏನನ್ನು ನಿರೀಕ್ಷಿಸುತ್ತಾನೋ ಅದು ನೆರವೇರುತ್ತದೆ ಎಂಬ ಮನವರಿಕೆಯನ್ನು ನೀಡುತ್ತದೆ.
ವಿಶ್ವಾಸ ಹೇಗೆ ಬರುತ್ತದೆ?
ವಿಶ್ವಾಸವು ದೇವರ ವಾಕ್ಯವನ್ನು ಪದೇ ಪದೇ ಆಲಿಸುವುದರಿಂದ ಬರುತ್ತದೆ.
ವಿಶ್ವಾಸವು ದೇವರನ್ನು ಮೆಚ್ಚಿಸುತ್ತದೆ.
ಆದರೆ ವಿಶ್ವಾಸವಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ಯಾಕಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ, ತನ್ನನ್ನು ಜಾಗ್ರತೆಯಾಗಿ ಹುಡುಕುವವನಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.
ಯೇಸು ಕ್ರಿಸ್ತನಲ್ಲಿ ವಿಶ್ವಾಸ ಎಂದರೇನು?
ಯೇಸು ಕ್ರಿಸ್ತನಲ್ಲಿ ವಿಶ್ವಾಸ ಎಂದರೆ ಆತನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದಾಗಿದೆ – ಆತನ ಅನಂತ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿಯಲ್ಲಿ ನಂಬಿಕೆ ಇರಿಸುವುದಾಗಿದೆ. ಇದು ಆತನ ಬೋಧನೆಗಳನ್ನು ನಂಬುವುದನ್ನು ಒಳಗೊಂಡಿದೆ. ನಮಗೆ ಎಲ್ಲಾ ವಿಷಯಗಳು ಅರ್ಥವಾಗದಿದ್ದರೂ ಆತನು ಮಾಡುತ್ತಾನೆ ಎಂದು ನಂಬುವುದು ಇದರ ಅರ್ಥವಾಗಿದೆ.
ಗಾಳಿಯಲ್ಲಿರುವ ಆಮ್ಲಜನಕವು ದೇಹವನ್ನು ಪೋಷಿಸಿದರೆ, ವಿಶ್ವಾಸವು ಹೃದಯ ಮತ್ತು ಮನಸ್ಸನ್ನು(ಪ್ರಾಣವನ್ನು) ಪೋಷಿಸುತ್ತದೆ.
’’ದೇವರಿಂದ ಜನಿಸಿದ ಪ್ರತಿ ಒಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ …….’’(1 ಯೊವಾನ್ನ 5:4)
February 23
And let us consider how we may spur one another on toward love and good deeds. Let us not give up meeting together, as some are in the habit of