ತೋರಿಕೆಯಲ್ಲಿ ಅಸಾಧ್ಯವೆಂದು ತೋರುವ ಸನ್ನಿವೇಶದಿಂದ/ಪರಿಸ್ಥಿತಿಯಿಂದ ಬೆದರುವ (ಹೆದರಿಕೆ, ಭಯಭೀತ, ಗಾಬರಿ, ನಿರುತ್ಸಾಹ) ಬದಲು; ಹೆಚ್ಚು ಪ್ರಾರ್ಥಿಸಲು, ಹೆಚ್ಚು ನಂಬಲು, ಹೆಚ್ಚು ಭರವಸೆಯಿಡಲು, ಹೆಚ್ಚು ಕಾಯಲು, ಹೆಚ್ಚು ನಿರೀಕ್ಷಿಸಲು ಮತ್ತು ದೇವರ ಮೇಲೆ ಹೆಚ್ಚು ಅವಲಂಬಿತರಾಗಲು ಅದು ನಿಮ್ಮನ್ನು ಪ್ರೇರೇಪಿಸಲಿ…!
ಆದರೆ ದೇವರಿಂದ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದನ್ನು ನೀವು ನಂಬಬಾರದೆಂದು ಸೈತಾನನು ಬಯಸುತ್ತಾನೆ. ಅವನು ನಿಮಗೆ ಪದೇ ಪದೇ ಹೇಳುತ್ತಾನೆ, “ನೀವು ಯಾರೆಂದು ನೀವು ಭಾವಿಸುತ್ತೀರಿ? ನೀವು ಅದನ್ನು ಮಾಡಲು ಸಾಧ್ಯವಿಲ್ಲ. ನೀವು ದೇವ ಮನುಷ್ಯ ಅಥವಾ ಮಹಿಳೆಯಾಗಬಹುದು ಯೋಚಿಸುವಂತೆ ಮಾಡುವುದು ಯಾವುದು? ಎಂದು. ನಿಮ್ಮ ಜೀವನದಲ್ಲಿ ಅಸಾಧ್ಯವಾದುದಕ್ಕೆ ನೀವು ದೇವರನ್ನು ನಂಬಿದಾಗ ಮತ್ತು ಭರವಸೆಯಿಡುವಾಗ, ಅದು ಸೈತಾನನಿಗೆ ಮುಜುಗರವಾಗುತ್ತದೆ.
ಬಹುಶಃ ನೀವು ಇದೀಗ ಅಸಾಧ್ಯವಾದ ಪರಿಸ್ಥಿತಿಯಲ್ಲಿದ್ದೀರಿ. ದೇವರ ಕಡೆಗೆ ನೋಡಿ ಮತ್ತು ಆತನ ವಾಗ್ದಾನಗಳ ಮೇಲೆ ಅವಲಂಬಿತರಾಗಿ, ಮತ್ತು ನಿಮ್ಮ ಪರಿಸ್ಥಿತಿಯು ಅಸಾಧ್ಯದಿಂದ ಸಾಧ್ಯಕ್ಕೆ ಚಲಿಸುವುದನ್ನು ವೀಕ್ಷಿಸಿ ಮತ್ತು ತದನಂತರ ಅದು ಮಾಡಿ ಮುಗಿಸಲ್ಪಡುವುದು.
ಪರಿಸ್ಥಿತಿಯು ಎಷ್ಟು ಅಸಾಧ್ಯವೆಂದು ತೋರುತ್ತದೆ ಎಂಬುದು ಮುಖ್ಯವಲ್ಲ; ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರೆಸುತ್ತಾ ಪೂರೈಸುವರು ಎಂದು ನೀವು ಖಚಿತವಾಗಿ ಹೇಳಬಹುದು. ದೇವರು ನಿಮ್ಮ ಜೀವನದಲ್ಲಿ ಏನನ್ನು ಪ್ರಾರಂಭಿಸುತ್ತಾರೋ ಅದನ್ನು ಮುಗಿಸುತ್ತಾರೆ.
’’ಯಾಕಂದರೆ ದೇವರಿಗೆ ಅಸಾಧ್ಯವಾದದ್ದು ಯಾವದೂ ಇಲ್ಲ…..’’(ಲೂಕಾ 1:37)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also