ಎಲ್ಲವೂ ಆಲೋಚನೆಯೊಂದಿಗೆ ಪ್ರಾರಂಭವಾಗುತ್ತದೆ..
ನಿಮ್ಮ ಆಲೋಚನೆಗಳು ನಿಮ್ಮ ಅನಿಸಿಕೆಗಳು, ಭಾವನೆಗಳು, ನಿರ್ಧಾರಗಳು, ಕಾರ್ಯಗಳು ಮತ್ತು ಅಭ್ಯಾಸಗಳ ಮೇಲೆ ಪ್ರಭಾವ ಬೀರುತ್ತವೆ.
ಮತ್ತು ನಿಮ್ಮ ಅಭ್ಯಾಸಗಳು ನಿಮ್ಮ ನಡತೆ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ..!
ಈಗ ನೀವು ನಿಮ್ಮ ಜೀವನದಲ್ಲಿ ಎಲ್ಲೇ ಇರಿ, ನಿಮ್ಮ ಆಲೋಚನೆಗಳು ನಿಮ್ಮನ್ನು ಆ ಸ್ಥಳಕ್ಕೆ ಕರೆತಂದಿವೆ, ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು.
ದೇವರ ಸಹಾಯ ಮತ್ತು ಪ್ರೀತಿಯಿಂದ, ನಿಮ್ಮ ಜೀವನವು ಅತ್ಯುತ್ತಮವಾಗಿ ಬದಲಾಗಬಹುದು.
ಸರಿಯಾದ ಆಲೋಚನೆಯು ತಪ್ಪಾದ ಕಾರ್ಯಗಳನ್ನು ಬದಲಾಯಿಸುತ್ತದೆ ಆದರೆ ಸರಿಯಾದ ಕಾರ್ಯಗಳು ತಪ್ಪಾದ ಆಲೋಚನೆಯನ್ನು ಬದಲಾಯಿಸುವುದಿಲ್ಲ..
ಸರಿಯಾದದ್ದನ್ನು ಯೋಚಿಸಲು ಸಾಕಷ್ಟು ಸಮಯದವರೆಗೆ ನಿಮ್ಮನ್ನು ನೀವು ಶಿಸ್ತು ಪಡಿಸಿಕೊಳ್ಳಿ, ಮತ್ತು ಅಂತಿಮವಾಗಿ ನಿಮಗೆ ಸರಿಯಾದದ್ದು ಸಂಭವಿಸುತ್ತದೆ..!
ಯೇಸು ಜನರು ತಮ್ಮ ಆಲೋಚನೆಯನ್ನು ಬದಲಾಯಿಸಲು ಸವಾಲು ಹಾಕಿದರು ಏಕೆಂದರೆ ನೀವು ಎಷ್ಟು ಬಾರಿ ಬೈಬಲ್ ಅನ್ನು ಓದುತ್ತೀರಿ ಎಂಬುದನ್ನು ಮುಖ್ಯವಲ್ಲ, ನಿಮ್ಮ ಮನಸ್ಸು ಬದಲಾಗದಿದ್ದರೆ, ನೀವು ಓದುವ ವಾಕ್ಯಗಳ ಮೇಲೆ ನಿಮ್ಮ ಒಲವು(ಪೂರ್ವಭಿಪ್ರಾಯ) ಮತ್ತು ಗುರುತು ಪಟ್ಟಿಯನ್ನು ಹೇರುತ್ತೀರಿ.
ನಿಮ್ಮ ಮನಸ್ಸನ್ನು ನವೀಕರಿಸುವುದರ ಅರ್ಥವೇನು? ನವೀಕರಿಸುವುದು ಎಂದರೆ ಬದಲಾಯಿಸುವುದು..
ನಿಮ್ಮ ಮನಸ್ಸನ್ನು ನವೀಕರಿಸುವುದು ಎಂದರೆ ಹಳೆಯ ಆಲೋಚನೆಯ ವಿಧಾನವನ್ನು ಹೊಸ ರೀತಿಯಲ್ಲಿ ಬದಲಾಯಿಸುವುದು.
ಆದ್ದರಿಂದ, ವಾಕ್ಯದಿಂದ ತೊಳೆಯಲ್ಪಡುವ ಮೂಲಕ ನಿಮ್ಮ ಮನಸ್ಸನ್ನು ನವೀಕರಿಸಿಕೊಳ್ಳಿ ಅಥವಾ ದೇವರ ವಾಕ್ಯದಿಂದ ನಿಮ್ಮ ಮನಸ್ಸನ್ನು ನವೀಕರಿಸಿಕೊಳ್ಳಿ ಎಂದು ನೀವು ಕೇಳಿದಾಗ, ಬೈಬಲ್ ಹೇಳುವುದರೊಂದಿಗೆ ಹಳೆಯ ಆಲೋಚನಾ ವಿಧಾನವನ್ನು ಬದಲಿಸಿಕೊಳ್ಳುವುದು ಎಂದರ್ಥ.
‘’ಆತ್ಮರು ನಿಮ್ಮ ಆಲೋಚನಾ ವಿಧಾನವನ್ನು ಬದಲಾಯಿಸಲಿ……’’ (ಎಫೆಸಿ 4:23)
April 3
It is because of him that you are in Christ Jesus, who has become for us wisdom from God — that is, our righteousness, holiness and redemption. —1 Corinthians 1:30