ಕೆಲವೊಮ್ಮೆ, ದ್ವೇಷಿಗಳು ಅನೇಕ ಸ್ಥಾನಗಳಿಂದ ಆಕ್ರಮಣ ಮಾಡುತ್ತಾರೆ ಏಕೆಂದರೆ ಅವರಿಗೆ ನಿಮ್ಮ ಶಕ್ತಿಯನ್ನು ನಿಭಾಯಿಸಲು ಸಾಧ್ಯವಿಲ್ಲ.
ಅವರು ನಿಮ್ಮನ್ನು ಒಂದು ಮೂಲೆಗೆ ಹಿಂತಿರುಗುವಂತೆ ಮಾಡಲು ಬಿಡಬೇಡಿ.
ನೀನು ನೀತಿಯಲ್ಲಿ ನೆಲೆಗೊಂಡಿರುವಿ; ಹಿಂಸೆಯಿಂದ ದೂರವಾಗಿರುವಿ;
ನೀನು ಭೀತಿಯಿಂದ ಭಯ ಪಡುವದಿಲ್ಲ; ಅದು ನಿನ್ನ ಸಮೀಪಕ್ಕೂ ಬಾರದು.
ಇಗೋ, ನಿಶ್ಚಯವಾಗಿ ಅವರು ಒಟ್ಟಾಗಿ ಕೂಡಿ ಕೊಳ್ಳುವರು, ಆದರೆ ನನ್ನಿಂದಲ್ಲ;
ನಿನಗೆ ವಿರೋಧವಾಗಿ ಯಾರ್ಯಾರು ಒಟ್ಟಾಗಿ ಕೂಡಿಕೊಳ್ಳುವರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.
ಇಗೋ, ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ ತನ್ನ ಕೆಲಸಕ್ಕೆ ಆಯುಧಗಳನ್ನು ತರುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ;
ನಾಶಮಾಡುವದಕ್ಕೆ ಕೆಡಿಸುವವನನ್ನು ಸೃಷ್ಟಿಸಿದವನು ನಾನೇ.
ನಿನಗೆ ವಿರೋಧವಾಗಿ ರೂಪಿಸಲ್ಪಟ್ಟ ಆಯುಧಗಳು ಸಫಲವಾಗುವದಿಲ್ಲ;
ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯ ತೀರ್ಪಿನಲ್ಲಿ ನೀನು ಖಂಡಿಸುವಿ. ಇದೇ ಕರ್ತನ ಸೇವಕರ ಬಾಧ್ಯತೆಯೂ ಮತ್ತು ಅವರ ನೀತಿಯೂ ನನ್ನದೇ
ಎಂದು ಕರ್ತನು ಹೇಳುತ್ತಾನೆ.
’’ಒಳ್ಳೇಮನಸ್ಸಾಕ್ಷಿಯುಳ್ಳವರಾಗಿರ್ರಿ; ಆಗ ನೀವು ಕೆಟ್ಟದ್ದನ್ನು ಮಾಡುವವರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೆಪಡುವವರು…….’’ ( 1 ಪೇತ್ರ 3:16)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross