ದೇವರ ದರ್ಶನವನ್ನು ಅನುಸರಿಸಲು ನೀವು ಹೊಸ ಆರಂಭವನ್ನು ಪಡೆಯಲು ಬಯಸಿದರೆ, ನೆಪ ಹೇಳುವುದು ಅಥವಾ ಕಾರಣಗಳನ್ನು ಹೇಳುವುದನ್ನು ನಿಲ್ಲಿಸುವುದು ಮೊದಲ ಹಂತವಾಗಿದೆ.
ಹೌದು, ನಾವೆಲ್ಲರೂ ನಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ವಿಫಲರಾಗಿದ್ದೇವೆ, ಆದರೆ ನಾವು ನಮ್ಮ ಹಿಂದಿನ(ಗತಕಾಲದ) ಉತ್ಪನ್ನವಾಗಿದ್ದರೂ, ನಾವು ಆ ಭೂತಕಾಲದ ಸೆರೆಯಾಳುಗಳಾಗಿರಬೇಕಾಗಿಲ್ಲ.
ಪಶ್ಚಾತ್ತಾಪ ಪಡಿರಿ – ನಿಮ್ಮ ಆಲೋಚನೆಯನ್ನು ಬದಲಾಯಿಸಿ – ನಿಮ್ಮ ಮನಸ್ಸನ್ನು ನವೀಕರಿಸಿ – ಮರಳಿ ಅದೇ ಹಾದಿಗೆ ಹಿಂತಿರುಗಿ – ಅಪರಾಧ ಪ್ರಜ್ಞೆ ಮತ್ತು ಖಂಡನೆಯು ನಿಮ್ಮನ್ನು ಪಾರ್ಶ್ವವಾಯುವಿಗೆ ಒಳಗಾಗುವಂತೆ ಬಿಡಬೇಡಿ.
ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ;
ಇಲ್ಲವೆ ಹಳೇ ಸಂಗತಿಗಳನ್ನು ಯೋಚಿಸಬೇಡಿರಿ.
ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು,
ಅದು ಈಗಲೇ ಮೊಳೆತು ಬರುವದು; ನಿಮಗೆ ಅದು ತಿಳಿದಿಲ್ಲವೋ?
ನಾನು ಅರಣ್ಯದಲ್ಲಿ ಮಾರ್ಗವನ್ನು
ಮರುಭೂಮಿಯಲ್ಲಿ ನದಿಗಳನ್ನು ಸಹ ಉಂಟುಮಾಡುವೆನು.
ಇಂದು ನಿಮಗೆ ಒಂದು ಆಯ್ಕೆ ಇದೆ; ನೀವು ಆಯ್ಕೆ ಮಾಡದ ಹೊರತು ನೀವು ಬಲಿಪಶು ಅಲ್ಲ ಎಂಬುದನ್ನು ನೆನಪಿಡಿ..
‘’ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು…..’’(ಜ್ಞಾನೋಕ್ತಿ 28:13)