ವಿಶ್ವಾಸವು, ವಿಶ್ವಾಸಿಗಳನ್ನು ತಿರುಗಿ ಹುಟ್ಟಿರುವಂತೆ ಮಾಡುವುದು ಎಂದರೆ ಮ್ಯಾರಥಾನ್ (ದೂರದ) ಓಟಗಾರರಿಗೆ ಎರಡನೇ ಗಾಳಿಯನ್ನು(ತಿರುವನ್ನು) ಕಂಡುಹಿಡಿಯುವುದಾಗಿದೆ.
ಎರಡನೇ ಗಾಳಿ/ತಿರುವು ಎಂದರೆ ಹೊಸ ಬಲ ಅಥವಾ ಪ್ರಯತ್ನವನ್ನು ಮುಂದುವರಿಸಲು ಇರುವ ಶಕ್ತಿ.
ಬಳಲಿಕೆಯ ಮೊದಲ ಗುರುತಾದ ತೀವ್ರ ಆಯಾಸದಿಂದ ಓಟವನ್ನು ತೊರೆಯುವ ಬದಲು, ಹೊಸ ಶಕ್ತಿಯು ಹೆಚ್ಚು ಆರಾಮ ಮತ್ತು ಕಡಿಮೆ ಸಂಕಟದೊಂದಿಗೆ ಅದೇ ವೇಗವನ್ನು ನಿರ್ವಹಿಸಲು ಅನುವು ಮಾಡಿಕೊಡುವವರೆಗೆ ಮ್ಯಾರಥಾನ್ ಓಟವನ್ನು ಮುಂದುವರಿಸುತ್ತಾರೆ.
ಅದೇ ರೀತಿಯಲ್ಲಿ ತಿರುಗಿ ಹುಟ್ಟುವುದು ಎಂದರೆ ನಿಮ್ಮ ಹಳೆಯ ಜೀವನವನ್ನು ತಿರಸ್ಕರಿಸುವುದು ಮತ್ತು ಹೊಸ ಜೀವನಕ್ಕೆ (ಆಧ್ಯಾತ್ಮಿಕ ಪುನರ್ಜನ್ಮ) ನೀವು ಯೇಸುವನ್ನು ನಿಮ್ಮ ಪ್ರಭುವಾಗಿ, ದೇವರಾಗಿ ಮತ್ತು ರಕ್ಷಕನಾಗಿ ಸ್ವೀಕರಿಸಿದಾಗ ಮತ್ತು ಆತನು ನಿಮಗಾಗಿ ಶಿಲುಬೆಯಲ್ಲಿ ಸಾಧಿಸಿದ್ದನ್ನು ನಂಬುವುದಾಗಿದೆ. ಇದು ಹೊಸ ಪ್ರಯಾಣವಾಗಿದೆ, ಪವಿತ್ರಾತ್ಮರ ಮೂಲಕ ಯೇಸುಕ್ರಿಸ್ತ ಮತ್ತು ಆತನ ತಂದೆಯೊಂದಿಗಿನ ವೈಯಕ್ತಿಕ ಸಂಬಂಧವಾಗಿದೆ.
ಯೇಸು ಕ್ರಿಸ್ತನ ಮೂಲಕ ದೇವರ ಕ್ಷಮೆ ಮತ್ತು ನಿತ್ಯಜೀವದ ಕೊಡುಗೆಗೆ ನಾವು ಪ್ರತಿಕ್ರಿಯಿಸುತ್ತೇವೆ, ನಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತೇವೆ ಮತ್ತು ನಮ್ಮ ನಾಯಕ ಮತ್ತು ಪ್ರಭುವಾಗಲು ಯೇಸುಕ್ರಿಸ್ತನನ್ನು ನಮ್ಮ ಜೀವನದಲ್ಲಿ ಆಹ್ವಾನಿಸುತ್ತೇವೆ. ಮತ್ತು ಯೇಸು ನಿಜವಾಗಿಯೂ ಒಳಗೆ ಬಂದಾಗ, ಆತನ ಪವಿತ್ರಾತ್ಮರು ನಮ್ಮನ್ನು ತುಂಬುತ್ತಾರೆ ಮತ್ತು ನಮ್ಮನ್ನು ಬದಲಾಯಿಸುತ್ತಾರೆ.
ತಿರುಗಿ ಹುಟ್ಟುವ ಪ್ರಯೋಜನಗಳನ್ನು ಪರಿಗಣಿಸಿ. ರಕ್ಷಣೆಗಾಗಿ ಕ್ರಿಸ್ತನ ಬಳಿಗೆ ಬರುವುದು.
ದೇವರೊಂದಿಗೆ ಸರಿಯಾದ ಸಂಬಂಧ: ಸಮರ್ಥಿಸಲಾಗಿದೆ
ನಮ್ಮ ಆಳವಾದ ಅಗತ್ಯಗಳಿಗೆ ಉತ್ತರ: ಶಾಂತಿ
ದೇವರ ಸನ್ನಿಧಿಗೆ ನೇರ ಪ್ರವೇಶದ ಸವಲತ್ತು.
ಕ್ರಿಸ್ತನೊಂದಿಗೆ ಸುರಕ್ಷಿತ ಭವಿಷ್ಯದ ದೃಢ ಭರವಸೆ: ನಿರೀಕ್ಷೆ
ಈ ಎಲ್ಲಾ ಪ್ರಯೋಜನಗಳನ್ನು ನೀವು ಹೇಗೆ ಪಡೆಯಬಹುದು? ವಿಶ್ವಾಸದಿಂದ ಯೇಸುವಿನ ಬಳಿಗೆ ಬನ್ನಿ. ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕ್ಯಾಲ್ವರಿಯಲ್ಲಿ ಕ್ರಿಸ್ತನು ಮಾಡಿ ಮುಗಿಸಿರುವ ಕಾರ್ಯವನ್ನು ಸ್ವೀಕರಿಸಿ ಮತ್ತು ತಿರುಗಿ ಹುಟ್ಟಿದವರಾಗಿ! ಕ್ರೈಸ್ತರೇ, ನೀವು ಇಂದು ನಿಮ್ಮ ಎಲ್ಲಾ ಪ್ರಯೋಜನಗಳನ್ನು ಆನಂದಿಸುತ್ತಿದ್ದೀರಾ? ದೇವರ ಪ್ರತಿ ಮಗುವಿಗೆ ಆನಂದಿಸಲು ಬೇಕಾಗಿರುವವು ಇಲ್ಲಿವೆ. ಶಾಂತಿ, ಪ್ರವೇಶ ಮತ್ತು ನಿರೀಕ್ಷೆ ಎಲ್ಲವೂ ಏಕೆಂದರೆ ನಾವು ವಿಶ್ವಾಸದಿಂದ ಸಮರ್ಥಿಸಲ್ಪಟ್ಟಿದ್ದೇವೆ.
’’ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ದೇವರು ಮಹಾ ಕರುಣಾಳುವಾಗಿದ್ದಾನೆ. ಆತನು ತನ್ನ ಕರುಣೆಯಿಂದಲೇ ನಮಗೆ ಹೊಸ ಜೀವವನ್ನು ನೀಡಿದನು. ಸತ್ತವರೊಳಗಿಂದ ಎದ್ದುಬಂದ ಯೇಸು ಕ್ರಿಸ್ತನ ಮೂಲಕ ಅದು ನಮಗೆ ಒಂದು ಜೀವಂತ ನಿರೀಕ್ಷೆಯನ್ನು ತರುತ್ತದೆ…….’’ (1 ಪೇತ್ರ 1:3)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good