ದೇವರು ನಮ್ಮೊಂದಿಗೆ ಕನಿಷ್ಠ ಎಂದರೂ ಮೂರು ಪ್ರಾಥಮಿಕ ವಿಧಾನಗಳಲ್ಲಿ ಮಾತನಾಡುತ್ತಾರೆ: ಅವರ ವಾಕ್ಯದ ಮೂಲಕ, ಪವಿತ್ರಾತ್ಮರ ಮೂಲಕ ಮತ್ತು ನಮ್ಮ ಜೀವನದ ಸನ್ನಿವೇಶಗಳ ಮೂಲಕ.
ಹೆಚ್ಚಿನ ಕ್ರೈಸ್ತರು ಪವಿತ್ರಗ್ರಂಥ ಬೈಬಲ್ ಅನ್ನು ಅಧ್ಯಯನ ಮಾಡುವ ಮೂಲಕ ಮತ್ತು ಪ್ರಾರ್ಥನೆಯಲ್ಲಿ ಪವಿತ್ರಾತ್ಮರಿಗೆ ಕಿವಿಗೊಡುವ ಮೂಲಕ ದೇವರ ಧ್ವನಿಯನ್ನು ಕೇಳುವ ಬಗ್ಗೆ ಸ್ವಲ್ಪವಾದರೂ ತಿಳಿದಿದ್ದಾರೆ. ಆದಾಗ್ಯೂ ನಮ್ಮ ಜೀವನದ ಸಂದರ್ಭಗಳು ಸಾಮಾನ್ಯವಾಗಿ ದೇವರು ಮಾತನಾಡುವ ಒಂದು ಮಾರ್ಗವಾಗಿದೆ ಎಂದು ಅನೇಕ ಕ್ರೈಸ್ತರಿಗೆ ಹೆಚ್ಚು ತಿಳಿದಿಲ್ಲ ಏಕೆಂದರೆ ಮಹತ್ತಾದ ತಿರುವು/ಅದ್ಭುತ ಕಾರ್ಯ ಯಾವಾಗಲೂ ಆ ಸಮಸ್ಯೆಯಲ್ಲಿದೆ, ನೀವು ಅದನ್ನು ಜಯಿಸುವಲ್ಲಿ ಯಶಸ್ವಿಯಾದ ನಂತರ..!
ನಮ್ಮ ಜೀವನದ ಸಂದರ್ಭಗಳನ್ನು ಹೇಗೆ ಮಿಶ್ರಿತ ಮತ್ತು ಗೊಂದಲಮಯವಾಗಿ ನಾವು ತೆಗೆದುಕೊಳ್ಳುತ್ತೇವೆ ಮತ್ತು ದೇವರು ಅದರ ಬಗ್ಗೆ ನಮಗೆ ಏನು ಹೇಳಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?
ದೇವರ ವಾಕ್ಯದ ಬೆಳಕಿನಲ್ಲಿ ನಮ್ಮ ಪರಿಸ್ಥಿತಿ/ ನ್ನಿವೇಶಗಳನ್ನು ಮೌಲ್ಯಮಾಪನ ಮಾಡಿ
ದೇವರು ಎಂದಿಗೂ ಅವರಿಗೆ ವಿರೋಧವಾಗಿ ನಡೆಯುವುದಿಲ್ಲ; ಆತನ ಲಿಖಿತಗೊಂಡಿರುವ ವಾಕ್ಯಕ್ಕೆ ವಿರುದ್ಧವಾದ ರೀತಿಯಲ್ಲಿ ನಮ್ಮ ಸನ್ನಿವೇಶಗಳ ಮೂಲಕ ಆತನು ಎಂದಿಗೂ ನಮ್ಮೊಂದಿಗೆ ಮಾತನಾಡುವುದಿಲ್ಲ. ದೇವರ ಧ್ವನಿಯನ್ನು ಗ್ರಹಿಸಲು ಪ್ರಯತ್ನಿಸುವಾಗ ಪವಿತ್ರ ಬೈಬಲ್ ನಮ್ಮ ಮಾಹಿತಿಯ ಮೊದಲ ಮೂಲವಾಗಿರಬೇಕು.
ದೇವರು ತನ್ನ ಧ್ವನಿಯನ್ನು ದೃಢೀಕರಿಸಲು ಇತರ ಜನರನ್ನು ಬಳಸುತ್ತಾರೆ ಎಂಬುದನ್ನು ನೆನಪಿಡಿ
ನಮ್ಮ ಜೀವನಕ್ಕಾಗಿ ಇರುವ ಆತನ ಚಿತ್ತವನ್ನು ದೃಢೀಕರಿಸಲು ದೇವರು ಆಗಾಗ್ಗೆ ಜನರನ್ನು ನಮ್ಮ ಮಾರ್ಗಗಳಿಗೆ ಕಳುಹಿಸುತ್ತಾರೆ. ದೇವರ ಧ್ವನಿಯನ್ನು ಕೇಳದಂತೆ ನಮ್ಮನ್ನು ವಿಚಲಿತಗೊಳಿಸುವ ಜನರನ್ನು ನಾವು ಎದುರಿಸುತ್ತೇವೆ; ಆದರೆ ದೇವರು ತನ್ನ ಚಿತ್ತವನ್ನು ದೃಢೀಕರಿಸಲು ಜನರನ್ನು ಬಳಸಿಕೊಳ್ಳುತ್ತಾರೆ. ದೇವರ ಹೃದಯವನ್ನು ಹುಡುಕುತ್ತಿರುವವರು ಮತ್ತು ತಮ್ಮನ್ನು ತಾವು ಮೆಚ್ಚಿಸಲು ಬಯಸುವವರ ನಡುವೆ ನಾವು ಪ್ರತ್ಯೇಕತೆಯನ್ನು ಗುರುತಿಸಬೇಕಾಗಿದೆ. ತಮ್ಮ ಜೀವನದಲ್ಲಿ ದೇವರನ್ನು ಅನುಸರಿಸಲು ಪ್ರಯತ್ನಿಸುವ ಜನರು ದೇವರಿಂದ ಸ್ವರವನ್ನು ಆಲಿಸುವ ಬಗ್ಗೆ ನಮಗೆ ಸಹಾಯ ಮಾಡಬಹುದು.
ದೇವರು ಒಂದು ಯೋಜನೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಗುರುತಿಸಿ
ಘಟನೆಗಳು, ಜೀವನದ ನಿರ್ಧಾರಗಳು ಮತ್ತು ನಾವು ಎದುರಿಸುವ ಎಲ್ಲಾ ಜನರು ಮತ್ತು ಸ್ಥಳಗಳ ಮೂಲಕ ದೇವರು ತನ್ನ ಯೋಜನೆಗಳನ್ನು ರೂಪಿಸುತ್ತಾರೆ.
ದೇವರ ಒಟ್ಟಾರೆ ಯೋಜನೆಯ ಬೆಳಕಿನಲ್ಲಿ ನಮ್ಮ ಸಂದರ್ಭಗಳನ್ನು/ಪರಿಸ್ಥಿಗಳನ್ನು ಪರೀಕ್ಷಿಸಿ
ಜೀವನದ ಸಂದರ್ಭಗಳ ಮೂಲಕ ದೇವರಿಂದ ಆಲಿಸಲು ಪ್ರಯತ್ನಿಸುವಾಗ, ಒಂದು ಘಟನೆ ಅಥವಾ ಸನ್ನಿವೇಶಗಳ ಮೂಲಕ ನಾವು ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಬಾರದು ಏಕೆಂದರೆ ಸಂದರ್ಭಗಳ ಮೂಲಕ ದೇವರು ನಮ್ಮೊಂದಿಗೆ ಮಾತನಾಡಬಹುದು ಅಥವಾ ಮಾತನಾಡದೆ ಇರಬಹುದು. ತಿಂಗಳುಗಳು ಅಥವಾ ವರ್ಷಗಳ ಅವಧಿಯ ದೃಷ್ಠಿಕೋನದಲ್ಲಿ ನಾವು ನಮ್ಮ ಜೀವನವನ್ನು ನೋಡಬೇಕು.
ದೇವರಿಂದ ಆಲಿಸದಂತೆ ಅಥವಾ ದೇವರಿಗೆ ವಿಧೇಯರಾಗದಂತೆ ತಡೆಯಲು ಸಂದರ್ಭಗಳನ್ನು ಅನುಮತಿಸಬೇಡಿ
ಕೆಲವೊಮ್ಮೆ ನಮ್ಮ ಪರಿಸ್ಥಿತಿಗಳು ಕತ್ತಲೆಯಾಗಿ/ಅಂಧಕಾರತೆಯಿಂದ ಕಾಣಿಸಬಹುದು, ಆದರೆ ದೇವರಿಂದ ನಾವು ಆಲಿಸುವವರೆಗೂ ನಮ್ಮ ಪರಿಸ್ಥಿತಿಗಳ ಬಗ್ಗೆ ಸತ್ಯವನ್ನು ನಾವು ಕೇಳಿಲ್ಲ ಎಂದರ್ಥ.
ಸಂದರ್ಭಗಳ ಕುರಿತು ಅವರ ದೃಷ್ಠಿಕೋನವನ್ನು ನಮಗೆ ತೋರಿಸುವಂತೆ ದೇವರನ್ನು ಕೇಳಿಕೊಳ್ಳಿ
ನಮ್ಮ ಸಂದರ್ಭಗಳ ಮೂಲಕ ನಾವು ದೇವರಿಂದ ಆಲಿಸಲು ಬಯಸಿದರೆ, ದೇವರ ಧ್ವನಿಯನ್ನು ತೀವ್ರಾಸಕ್ತಿಯಿಂದ ನಾವು ಕೇಳಬೇಕು. ಜೀವನವು ಸವಾಲಾಗಿರುವಾಗ-ಇದು ಆಗಾಗ್ಗೆ ಮಾಡುವಂತೆ-ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಿಲ್ಲ. ಸ್ಪಷ್ಟೀಕರಣವನ್ನು ಕೇಳಲು ನಾವು ಭಯಪಡಬಾರದು. , ದೇವರೇ, ಅದರ ಅರ್ಥವೇನು? ಎಂದು ಹಿಂಜರಿಯದೇ ನಾವು ಕೇಳಬೇಕು
ಮಾತನಾಡುವಲ್ಲಿ ದೇವರ ಪ್ರಾಥಮಿಕ ಬಯಕೆಯು ಶಾಶ್ವತವಾದ ಉದ್ದೇಶಗಳಿಗಾಗಿದೆ
ದೇವರು ಮಿತಿಯಿಲ್ಲದವರು ಎಂಬುದನ್ನು ನೆನಪಿಸಿಕೊಳ್ಳಲು ನಾವು ವಿಫಲರಾಗಿ, ದೇವರನ್ನು ಈ ಪರಿಮಿತ ಲೋಕಕ್ಕೆ ಸೀಮಿತಗೊಳಿಸುತ್ತೇವೆ, ಜೀವನದ ಸಂದರ್ಭಗಳ ಮೂಲಕ ದೇವರ ಧ್ವನಿಯನ್ನು ಗ್ರಹಿಸಲು ನಾವು ಪ್ರಯತ್ನಿಸಿದಾಗ, ಕಳೆದುಹೋದ ಲೋಕವನ್ನು ವಿನಾಶದಿಂದ ರಕ್ಷಿಸಲು ಮತ್ತು ಅವರ ಮಕ್ಕಳನ್ನು ಅವರ ಮಗನ ಪ್ರತಿರೂಪಕ್ಕೆ ರೂಪಿಸಲು ದೇವರ ಶಾಶ್ವತ ಯೋಜನೆಗೆ ನಮ್ಮ ಸುತ್ತಲೂ ಏನು ನಡೆಯುತ್ತದೆ ಎಂಬುದನ್ನು ನಾವು ಪರಿಗಣಿಸಬೇಕು.
ನಾವು ವಾಸಿಸುವ ಈ ಲೋಕದ ಜನಸಮೂಹದ ಮೂಲಕ ಅವರ ಧ್ವನಿಯನ್ನು ನಾವು ಆಸಕ್ತಿಯಿಂದ ಮತ್ತು ಭರವಸೆಯಿಂದ ಕೇಳಬೇಕು. ಧನ್ಯವಾದಪೂರ್ವಕವಾಗಿ ದೇವರು ನಮ್ಮನ್ನು ಕೈಬಿಟ್ಟಿಲ್ಲ. ಅವರು ಇಂದಿಗೂ ತಮ್ಮ ಜನರೊಂದಿಗೆ ಮಾತನಾಡುತ್ತಾರೆ. ಅವರ ಧ್ವನಿಯನ್ನು ಹೇಗೆ ಕೇಳಬೇಕೆಂದು ಕಲಿಯುವುದು ನಮ್ಮ ಉದ್ದೇಶವಾಗಿದೆ.
’’ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು…….’’(ಯೆರೆಮೀಯ 33:3)