ಕೆಲವೊಮ್ಮೆ, ನೀವು ಏನನ್ನಾದರೂ ಮಾಡಲು ನಿಮ್ಮ ಜೀವನದಲ್ಲಿ ಅಭಿಷೇಕವನ್ನು ಹೊಂದಿರಬಹುದು, ಆದರೆ ಆ ಪ್ರಸ್ತುತ ಕ್ಷಣದಲ್ಲಿ ನೀವು ನೇಮಕಗೊಂಡಿರುವುದಿಲ್ಲ.
ದಾವೀದನು ಹದಿಹರೆಯದವನಾಗಿದ್ದಾಗ ರಾಜನಾಗುವ ಅಭಿಷೇಕವನ್ನು ಹೊಂದಿದ್ದನು, ಆದರೆ ಆತನು ಅಭಿಷೇಕ ಹೊಂದಿದ ತಕ್ಷಣ ರಾಜನಾಗುವ ‘ನೇಮಕಾತಿ’ಯು ಆತನಿಗೆ ಇನ್ನೂ ಇರಲಿಲ್ಲ – ಆತನು ಮೂವತ್ತು ವರ್ಷದವನಾಗಿದ್ದಾಗ ಇಸ್ರಾಯೇಲಿನ ರಾಜನಾದನು.
ಹಳೆಯ ಒಡಂಬಡಿಕೆಯಲ್ಲಿ ಜೋಸೆಫನು ಎರಡು ಕನಸುಗಳನ್ನು ಹೊಂದಿದ್ದನು. ಆದರೆ ಆ ಕನಸುಗಳು ನನಸಾಗುವ ಮೊದಲು ಆತನು ವಿಭಿನ್ನ ಅನುಭವಗಳು, ಸಿದ್ಧತೆಗಳು ಮತ್ತು ತರಬೇತಿಯ ಮೈದಾನಗಳ ಮೂಲಕ ಹಾದು ಹೋಗಬೇಕಾಯಿತು ಮತ್ತು ತದನಂತರ ಆತನು ಈಜಿಪ್ಟಿನ ಪ್ರಧಾನಿಯಾದನು.
ನೆನಪಿರಲಿ, ಅವಕಾಶಕ್ಕಿಂತ ಮೊದಲು ಸಿದ್ಧತೆ ಬರಬೇಕು..!
ಸಿದ್ಧತೆ + ಅವಕಾಶ = ಯಶಸ್ಸು
‘’ನೀವು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ, ಪ್ರಾರ್ಥಿಸಿರಿ. ಯಾಕಂದರೆ ಸಮಯವು ಯಾವಾಗ ಎಂದು ನಿಮಗೆ ತಿಳಿಯದು…..’’( ಮಾರ್ಕ 13:33)
March 31
Now to him who is able to do immeasurably more than all we ask or imagine, according to his power that is at work within us, to him be glory