ನೀವು ಹೇಗೆ ಭಾವಿಸಿದರೂ ಸಹ ದೇವರು ನಿಜವೇ ಆಗಿದ್ದಾರೆ..!
ನಾವು ದೇವರಿಂದ ದೂರವಾದಾಗಲೂ, ದೇವರು ನಮ್ಮಿಂದ ದೂರವಿರುವುದಿಲ್ಲ..
ಸಂದರ್ಭಗಳು ಅಥವಾ ಪರಿಸ್ಥಿಗಳು ಯಾವಾಗಲೂ ಆಹ್ಲಾದಕರವಾಗಿರುವುದಿಲ್ಲ ಆದರೆ ಆರಾಧನೆಯ ಆಳವಾದ ಮಟ್ಟ ಯಾವುದೆಂದರೆ ನೋವಿನ ನಡುವೆಯೂ ದೇವರನ್ನು ಸ್ತುತಿಸುವುದು, ಪರೀಕ್ಷೆಗಳ ಸಮಯದಲ್ಲಿ ದೇವರಿಗೆ ಧನ್ಯವಾದ ಹೇಳುವುದು, ಪ್ರಲೋಭನೆಗೆ ಒಳಗಾದಾಗ ಆತನನ್ನು ನಂಬುವುದು ಮತ್ತು ಆತನು ದೂರದಲ್ಲಿದ್ದಾರೆ ಎಂದು ತೋರುವಾಗ ಅವರನ್ನು ಪ್ರೀತಿಸುವುದೇ ಆಗಿದೆ.
ಈ ಸತ್ಯಗಳನ್ನು ನೆನಪಿಡಿ:
1. ಕರ್ತನು ಮುರಿದ ಹೃದಯದವರಿಗೆ ಹತ್ತಿರವಾಗಿದ್ದಾರೆ.
”ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.”(ಕೀರ್ತನೆ 34:18)
2. ನಿಮ್ಮನ್ನು ಎಂದಿಗೂ ವಿಫಲಗೊಳಿಸುವುದಿಲ್ಲ ಅಥವಾ ತ್ಯಜಿಸುವುದಿಲ್ಲ ಎಂದು ದೇವರು ವಾಗ್ದಾನ ನೀಡುತ್ತಾರೆ.
”ಬಲವಾಗಿರ್ರಿ; ಧೈರ್ಯವಾಗಿರ್ರಿ; ಭಯಪಡಬೇಡಿರಿ; ಅವರಿಗೆ ಹೆದರಬೇಡಿರಿ; ನಿನ್ನ ದೇವರಾದ ಕರ್ತನು ತಾನೇ ನಿನ್ನ ಸಂಗಡ ಹೋಗುತ್ತಾನೆ; ಆತನು ನಿನ್ನನ್ನು ಬಿಡುವದಿಲ್ಲ, ವಿಸರ್ಜಿಸುವದೂ ಇಲ್ಲ ಎಂದು ಹೇಳಿದನು.” (ಧರ್ಮೋಪದೇಶಕಾಂಡ 31:6)
ಆದ್ದರಿಂದ, ದೇವರು ದೂರದಲ್ಲಿದ್ದಾರೆ ಮತ್ತು ನೀವು ದುರ್ಬಲ ಮತ್ತು ಏಕಾಂಗಿಯಾಗಿದ್ದೀರಿ ಎಂದು ಭಾವಿಸಿದಾಗ, ನಿಜವಾಗಿಯೂ ಆ ಸಮಯದಲ್ಲಿ ನಿಮ್ಮನ್ನು ರಕ್ಷಿಸುತ್ತಾ ಮತ್ತು ನೀವು ಏನು ಅನುಭವಿಸುತ್ತಿದ್ದೀರಿ ಎಂಬುದರ ನಡುವೆ ನಿಮ್ಮನ್ನು ಸುರಕ್ಷಿತವಾಗಿರಿಸುತ್ತಾ ದೇವರು ನಿಮ್ಮೊಂದಿಗೆ ಇದ್ದಾರೆ. ನಿಮ್ಮ ಕಷ್ಟದ ಸಮಯವನ್ನು ನಿಮ್ಮಷ್ಟಕ್ಕೆ ನೀವೇ ಎದುರಿಸಲು ಆತನು ಬಿಡುವುದಿಲ್ಲ – ಅದು ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವರ ವಾಗ್ದಾನವಾಗಿದೆ.
3. ದೇವರು ತೆರೆಮರೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ
ಕೆಲವೊಮ್ಮೆ, ನಿಮ್ಮ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣದಿದ್ದಾಗ ಅಥವಾ ನಿಮ್ಮ ಪ್ರಾರ್ಥನೆಗಳಿಗೆ ಉತ್ತರವನ್ನು ನೀವು ನೋಡದಿರುವ ಕಾರಣ ದೇವರು ದೂರವಾಗಿದ್ದಾರೆ ಎಂದು ನೀವು ಭಾವಿಸಬಹುದು. ಅಂತಹ ಸಮಯದಲ್ಲಿ, ನಿಮ್ಮ ಪರಿಸ್ಥಿತಿಗಳ ಬಗ್ಗೆ ಕಾರ್ಯ ಮಾಡುತ್ತಾ ದೇವರು ನಿಜವಾಗಿಯೂ ತೆರೆಮರೆಯಲ್ಲಿರುತ್ತಾರೆ.
4. ದೇವರು ನಿಮ್ಮೊಂದಿಗಿದ್ದೇನೆ ಎಂದು ಸ್ಪಷ್ಟವಾದ ಘೋಷಣೆ ಮಾಡುತ್ತಾರೆ.
ದೇವರು ದೂರದಲ್ಲಿದ್ದಾರೆ ಎಂಬ ಆಲೋಚನೆಗಳು ಮತ್ತು ಭಾವನೆಗಳು ಉದ್ಭವಿಸಿದಾಗ, ಆತನು ಯಾವಾಗಲೂ ನಿಮ್ಮೊಂದಿಗಿದ್ದರೆ ಮತ್ತು ನೀವು ಭಯಪಡಬಾರದು ಅಥವಾ ನಿರಾಶೆಗೊಳ್ಳಬಾರದು ಎಂದು ಆತನ ವಾಕ್ಯವು ನಿಮಗೆ ಭರವಸೆ ನೀಡಲಿ.
5. ದೇವರು ಈ ಹಿಂದೆಯೂ ನಿಮ್ಮೊಂದಿಗಿದ್ದರು.
ಅವರು ಹಿಂದೆ ನಿಮಗೆ ಮಾಡಿದ್ದನ್ನು ನೆನಪಿಸಿಕೊಳ್ಳಿ ಆತನು ಅದನ್ನು ಮತ್ತೆ ಮಾಡುತ್ತಾರೆ; ಏಕೆಂದರೆ ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾರೆ , ನಿರಂತರವೂ ಹಾಗೆಯೇ ಇರುವರು. (ಹಿಬ್ರಿಯ 13:8)
‘’ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು……’’(ಕೀರ್ತನೆ 46:1)