ದೇವರು ನಿಮ್ಮ ಆಸೆಗಳನ್ನು ಪೂರೈಸುತ್ತೇನೆ ಎಂದು ಎಂದಿಗೂ ಹೇಳುವುದಿಲ್ಲ, ಆದರೆ ಅವರು ತನ್ನ ಮಕ್ಕಳ ಅಗತ್ಯಗಳನ್ನು ಒದಗಿಸುತ್ತಾರೆ ಎಂದು ಸ್ಪಷ್ಟಪಡಿಸುತ್ತಾರೆ.
ನಮ್ಮ ಅಗತ್ಯಗಳನ್ನು ಪೂರೈಸುವ ನಮ್ಮ ಸಾಮರ್ಥ್ಯದ ಬಗ್ಗೆ ಇರುವ ಚಿಂತೆಯೇ ನಮ್ಮ ದೊಡ್ಡ ಚಿಂತೆಗಳಲ್ಲಿ ಒಂದಾಗಿದೆ.
ಆದರೆ ಚಿಂತಿಸುವ ಅಗತ್ಯವಿಲ್ಲ
ಪವಿತ್ರ ಗ್ರಂಥವು ಹೇಳುತ್ತದೆ. ”ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು…”(ಫಿಲಿಪ್ಪಿ 4:19)
ಕ್ರಿಸ್ತನಲ್ಲಿರುವವರಿಗೆ ಎಂತಹ ಆನಂದದಾಯಕ ವಾಗ್ದಾನ
ಅವರು ರೋಲ್ಸ್ ರಾಯ್ಸ್(ಕಾರು) ಅಥವಾ ಮಹಲು ನೀಡುತ್ತೇನೆಂದು ಭರವಸೆ ನೀಡುವುದಿಲ್ಲ. ಆದರೆ ಅವರು ನಮ್ಮ ಅಗತ್ಯಗಳನ್ನು ಪೂರೈಸುವ ಭರವಸೆ ನೀಡುತ್ತಾರೆಯೇ ಹೊರತು ನಮ್ಮ ದುರಾಶೆಗಳನಲ್ಲ.
ದೇವರು ಭೂಮಿಗೆ ಬಂದು ನಿಮಗಾಗಿ ಮರಣ ಹೊಂದಿದಾಗ ನಿಮ್ಮ ದೊಡ್ಡ ಸಮಸ್ಯೆಯನ್ನು ಪರಿಹರಿಸಿದರು. ಅವರೇ ಹಾಗೆ ಮಾಡಲು ಸಿದ್ಧರಿದ್ದರೆ, ನೀವು ವ್ಯವಹರಿಸುತ್ತಿರುವ ಇತರ ಸಮಸ್ಯೆಗಳ ಬಗ್ಗೆ ಅವರು ಕಾಳಜಿ ವಹಿಸುತ್ತಾರೆ ಎಂದು ನಿಮಗೆ ಅನಿಸುವುದಿಲ್ಲವೇ?
ಸಂಪೂರ್ಣವಾಗಿ. ಅವರು ನಿಮ್ಮ ಹಣಕಾಸಿನ ಬಗ್ಗೆ ಕಾಳಜಿ ವಹಿಸುತ್ತಾರೆ. ಅವನು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರು ನಿಮ್ಮ ವೃತ್ತಿಜೀವನದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ! ..
‘’ಹಾಗಾದರೆ ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೇದಾನಗಳನ್ನು ಕೊಡುವದು ಹೇಗೆಂಬದನ್ನು ತಿಳಿ ದವರಾಗಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತನ್ನನ್ನು ಬೇಡಿಕೊಳ್ಳುವವರಿಗೆ ಪವಿ ತ್ರಾತ್ಮನನ್ನು ದಯಪಾಲಿಸುವನಲ್ಲವೇ?…..’’( ಲೂಕಾ 11:13)
February 5
This is love: not that we loved God, but that he loved us and sent his Son as an atoning sacrifice for our sins. —1 John 4:10. God loved us