ನಿಮ್ಮ ಸ್ವಂತ ಚಿತ್ತದ/ಇಚ್ಛೆಯ ಅನ್ವೇಷಣೆಯಲ್ಲಿ ನಿಮ್ಮ ಓಟವನ್ನು ಓಡಬೇಡಿ.
ನಿಮ್ಮ ಎಲ್ಲಾ ಅನ್ವೇಷಣೆಗಳು ನಿಮ್ಮ ಜೀವನಕ್ಕಾಗಿ ಇರುವ ದೇವರ ಅಂತಿಮ ಚಿತ್ತದೊಂದಿಗೆ ಕಟ್ಟಲ್ಪಟ್ಟಿರಲಿ – ನೀವು ಮಾಡುವ ಎಲ್ಲದರಲ್ಲೂ ದೇವರ ವಾಕ್ಯದ ಮಾನದಂಡಕ್ಕಿಂತ ಕಡಿಮೆಯಾಗಿರುವ ಯಾವುದನ್ನೂ ಹೊಂದಾಣಿಗೆ ಮಾಡಿಕೊಳ್ಳಬೇಡಿ.
ಚೆನ್ನಾಗಿ ಓಟವನ್ನು ಹೇಗೆ ಮುಗಿಸಬೇಕು ಎಂಬುದರ ಬಗ್ಗೆ ಸಂತ ಪೌಲರು ಅಮೂಲ್ಯವಾದ ಪಾಠಗಳನ್ನು ಒದಗಿಸುತ್ತಾರೆ.
1. ಬೆಳವಣಿಗೆಯು ಮುಖ್ಯವಾಗುತ್ತದೆ.
ಬೆಳವಣಿಗೆ ಅಥವಾ ವೃದ್ಧಿ ಕೇವಲ ತನ್ನಷ್ಟಕ್ಕೆ ತಾನೇ ಆಗುವುದಿಲ್ಲ. ಇದಕ್ಕೆ ಉದ್ದೇಶಪೂರ್ವಕತೆ ಮತ್ತು ನಿಮಗಾಗಿ ಇರುವ ದೇವರ ಕರೆಯಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ. (ಫಿಲಿಪ್ಪಿ 3:12-15)
2. ಜನರು ಮುಖ್ಯವಾಗುತ್ತಾರೆ
ಸಂಬಂಧಗಳನ್ನು ಗೌರವಿಸಿ ಮತ್ತು ಇತರರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ (ರೋಮ 1:8)
ಪೌಲರು ಜನರ ಉತ್ತಮತೆಯನ್ನು ನಿರೀಕ್ಷಿಸಿದರು ಮತ್ತು ಅವರ ಬಗ್ಗೆ ಅವರೇ ಹೆಚ್ಚು ಉತ್ತಮವಾಗಿ ಯೋಚಿಸಲು ಸಹಾಯ ಮಾಡಿದರು. ಅವರು ಜನರಿಗೆ ನೀರಿಕ್ಷೆಯನ್ನು ನೀಡಿದರು, ಮತ್ತು ಅವರುತಮ್ಮನ್ನು ತಾವು ಇತರರೊಂದಿಗೆ ಹಂಚಿಕೊಂಡರು. ಪೌಲರು ತಮ್ಮ ಜೀವನದ ಕೊನೆಯವರೆಗೂ ಜನರು ಮುಖ್ಯವೆಂದು ತೋರ್ಪಡಿಸಿದರು.
3. ವಿಧೇಯತೆಯು ಮುಖ್ಯವಾಗುತ್ತದೆ.
ಪೌಲರು ದೇವರ ಕರೆಗೆ ನಂಬಿಗಸ್ತರಾಗಿದ್ದರು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರು ಪ್ರಭುವಿನಿಂದ ಸ್ವೀಕರಿಸಿದ ಸೇವೆಯನ್ನು / ಕರೆಯನ್ನು ಮುಗಿಸಿದರು.
ಇದರ ಅರ್ಥವೇನೆಂದು ನೀವು ನೋಡುತ್ತಿದ್ದೀರಾ – ದಾರಿಯನ್ನು ಬೆಳಗಿಸಿದ ಈ ಎಲ್ಲಾ ಪ್ರವರ್ತಕರು ಅಥವಾ ಮೊದಲಿಗರು, ಈ ಎಲ್ಲಾ ಅನುಭವಿಗಳು ನಮ್ಮನ್ನು ಹುರಿದುಂಬಿಸುತ್ತಿದ್ದಾರೇ ಎಂದೇ? ಇದರರ್ಥ ನಾವು ಅದರೊಂದಿಗೆ ಮುಂದುವರಿಯುವುದು ಉತ್ತಮ ಎಂದು.
ನಾವು ಇರುವ ಈ ಓಟವನ್ನು ಪ್ರಾರಂಭಿಸಿದ ಮತ್ತು ಮುಗಿಸಿದ ಯೇಸುವಿನ ಮೇಲೆ ನಿಮ್ಮ ದೃಷ್ಠಿಯನ್ನು ಇರಿಸಿ. ಅವರು ಅದನ್ನು ಹೇಗೆ ಮಾಡಿದರೆಂದು ಅಧ್ಯಯನ ಮಾಡಿ. ಏಕೆಂದರೆ ಅವರು ಎಲ್ಲಿಗೆ ಹೋಗುತ್ತಿದ್ದರೆಂಬುದರ ದೃಷ್ಠಿಯನ್ನು ಅವರು ಎಂದಿಗೂ ಕಳೆದುಕೊಳ್ಳಲಿಲ್ಲ- ದೇವರಲ್ಲಿ ಮತ್ತು ದೇವರೊಂದಿಗೆ ಅದು ಹರ್ಷದಾಯಕವಾದ (ಉತ್ತೇಜಕ) ಮುಕ್ತಾಯವಾಗಿತ್ತು.
ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿದ್ದೇನೆ. ( 2 ತಿಮೋಥಿ 4:7)
March 31
Now to him who is able to do immeasurably more than all we ask or imagine, according to his power that is at work within us, to him be glory