ಒಂದು ಬದಲಾವಣೆಯನ್ನು ಅಪೇಕ್ಷಿಸುವುದರ ಬಗ್ಗೆ ನೀವು ಎಷ್ಟು ಆಸಕ್ತಿಯುಳ್ಳವರಾಗಿದ್ದೀರಿ ಎಂಬುದು ನಿಮ್ಮ ಯಶಸ್ಸಿಗೆ ಅಥವಾ ಜೀವನದ ಮಹಾನ್ ತಿರುವಿಗೆ ನಿಮಗಿರುವ ಹೆಬ್ಬಯಕೆಯ ಸೂಚನೆಯಾಗಿದೆ.
ಬದಲಾವಣೆಯ ಆಳವಾದ ಹೆಬ್ಬಯಕೆಯು ನೀವು ಮುಂದಿನ ಹಂತಕ್ಕೆ ಸಿದ್ಧರಿದ್ದೀರಿ ಎಂಬುದಕ್ಕೆ ಪುರಾವೆಯಾಗಿದೆ.
ಬದಲಾವಣೆ ಯಾವಾಗಲೂ ಸುಲಭವಲ್ಲ, ಆದರೆ ನೀವೊಬ್ಬರೇ ಅದನ್ನು ಮಾಡಬೇಕಾಗಿಲ್ಲ.
ಬದಲಾವಣೆ ಮತ್ತು ಪರಿವರ್ತನೆಯ ಸಮಯದಲ್ಲಿ, ನಿಮ್ಮ ದಿಕ್ಕನ್ನು ಕಳೆದುಕೊಳ್ಳುವುದು ಅಥವಾ ಅನಿಶ್ಚಿತತೆಯಿಂದ ಮುಳುಗುವುದು ಸುಲಭ.
ಬೆಳವಣಿಗೆಯ ಅಥವಾ ವೃದ್ಧಿಯಾಗುವ ಕಡೆಗೆ ಪ್ರೋತ್ಸಾಹವನ್ನು ಕೊಡುವ ಖಚಿತವಾದ ಮೂಲವಾಗಿರುವ ಒಂದು ಸ್ಥಳವೇ ದೇವರ ವಾಕ್ಯವಾಗಿದೆ.
ನೀವು ಮುಂದಕ್ಕೆ ಸಾಗಲು ಪವಿತ್ರ ಗ್ರಂಥದ ವಾಕ್ಯಗಳು ನಿಮಗೆ ಧೈರ್ಯವನ್ನು ನೀಡುತ್ತವೆ ಏಕೆಂದರೆ ದೇವರು ನಿಮ್ಮೊಂದಿಗೆ ಪ್ರತಿ ಹೆಜ್ಜೆಯಲ್ಲೂ ಇರುತ್ತಾರೆ.
ದೇವರು ನಿಮ್ಮನ್ನು ಮರೆಯುವುದಿಲ್ಲ ಮತ್ತು ನಿಮ್ಮ ಮಾರ್ಗವನ್ನು ಬೆಳಗಿಸುತ್ತಾರೆ ಹಾಗು ನೀವು ಅನಿಶ್ಚಿತ ಪರಿಸ್ಥಿತಿಯಲ್ಲಿರುವಾಗ ನಿಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ವಾಕ್ಯಗಳು ನಿಮಗೆ ನೆನಪಿಸುತ್ತವೆ.
ದೇವರು ನಿಮ್ಮ ಚಿಂತೆ ಮತ್ತು ಭಯವನ್ನು ದೂರ ಮಾಡುತ್ತಾರೆ. ದೇವರೇ ನಿಮ್ಮ ಕಡೆಯಿರುವಾಗ ಭವಿಷ್ಯವು ತುಂಬಾ ಭಯಾನಕವಲ್ಲ
ನಿಮ್ಮನ್ನು ಪ್ರೀತಿಸುವ ಮತ್ತು ನಿಮಗೆ ಉತ್ತಮವಾದುದನ್ನು/ಒಳ್ಳೆಯದನ್ನು ಬಯಸುವ ದೇವರನ್ನು ನೀವು ಹೊಂದಿದ್ದೀರಿ.
ನಿನಗೆ ಆಜ್ಞಾಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾರೆ.
‘’ನೀತಿಗಾಗಿ ತವಕಪಡುವವರು ಧನ್ಯರು. ದೇವರು ಅವರನ್ನು ಸಂತೃಪ್ತಿಪಡಿಸುವನು….’’ (ಮತ್ತಾಯ 5:6)
February 23
And let us consider how we may spur one another on toward love and good deeds. Let us not give up meeting together, as some are in the habit of