ಬಿರುಗಾಳಿಯ ಮೂಲಕ ನೀವು ಚಲಿಸಿ ಹೋಗಲು ದೇವರು ಅನುಮತಿಸುವಾಗ, ಅದು ನಿಮ್ಮನ್ನು ಕೆಳಗೆ ಬೀಳುವಂತೆ ಮಾಡಲು ಅಲ್ಲ ಆದರೆ ಮುಂದಿನ ಹಂತಕ್ಕೆ ಹೋಗಲು ನಿಮ್ಮನ್ನು ಬಲಪಡಿಸುವುದಾಗಿದೆ.
ಇದು ನಿಮ್ಮಲಿರುವ ಸ್ವರ್ಗೀಯ ದೃಢಭರವಸೆಯ ಮತವಾಗಿದೆ.
ಒಂದು ಮಗು ಬೀಳದೆಯೇ ನಡೆಯಲು ಕಲಿಯುವುದಿಲ್ಲ ಅಥವಾ ವಿದ್ಯಾರ್ಥಿಯು ಪರೀಕ್ಷೆಯಿಲ್ಲದೆಯೇ ಮುಂದಿನ ತರಗತಿಗೆ ಹೋಗುವುದಿಲ್ಲ.
ಸಂಕಷ್ಟಗಳು ಭಾರವಾಗಿರಬಹುದು, ಆದರೆ ಅದರ ಮಧ್ಯದಲ್ಲಿಯೂ ಸಹ ದೇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ.
ದೊಡ್ಡದಾದ ಸಂಕಷ್ಟಗಳು ದೊಡ್ಡದಾದ ದೃಢ ನಂಬಿಕೆಗೆ ಕಾರಣವಾಗುತ್ತವೆ.
ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು
ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು
ಆದದರಿಂದ ಭೂಮಿಯು ತೆಗೆದು ಹಾಕಲ್ಪಟ್ಟರೂ
ಬೆಟ್ಟಗಳು ಸಮುದ್ರದ ಮಧ್ಯಕ್ಕೆ ಒಯ್ಯಲ್ಪಟ್ಟರೂ
ಅದರ ನೀರುಗಳು ಘೋಷಿಸಿ ಕದಲಿದರೂ
ಅದರ ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ
ನಾವು ಭಯಪಡೆವು
ಸೆಲಾ (ಆತನ ಪ್ರಸನ್ನತೆಯಲ್ಲಿ ವಿರಾಮದಿಂದಿರಿ)
”ದೇವರು ನಮಗೆ ಕೊಟ್ಟದ್ದು ನಮ್ಮನ್ನು ಹೇಡಿಗಳನ್ನಾಗಿ ಮಾಡುವ ಆತ್ಮವನ್ನಲ್ಲ. ನಮ್ಮನ್ನು ಬಲದಿಂದ, ಪ್ರೀತಿಯಿಂದ ಮತ್ತು ಸ್ವಶಿಕ್ಷಣದಿಂದ ತುಂಬಿಸುವ ಆತ್ಮವನ್ನು ಆತನು ಕೊಟ್ಟನು….”(2 ತಿಮೊಥೆ 1:7)
February 5
This is love: not that we loved God, but that he loved us and sent his Son as an atoning sacrifice for our sins. —1 John 4:10. God loved us