ದೇವರ ಎಲ್ಲಾ ಕೊಡುಗೆಗಳು ಒಳ್ಳೆಯದೇ, ಆದರೆ ಬಯಕೆಯು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು, ನಿಂದನೆಗೊಳಪಡಿಸಬಹುದು ಮತ್ತು ವಿರೂಪಗೊಳಿಸಬಹುದು (ಅನೈತಿಕವಾಗಿ) – ನಮ್ಮ ನಿರಂತರ ಪ್ರಾರ್ಥನೆಯಲ್ಲಿ ನಾವು ನಮ್ಮ ಬಯಕೆಗಳನ್ನು ದೇವರ ಚಿತ್ತಕ್ಕೆ ಮತ್ತು ದೇವರ ವಾಕ್ಯಕ್ಕೆ ಅಧೀನಪಡಿಸಲು ಸಿದ್ಧರಾಗಿರಬೇಕು ಏಕೆಂದರೆ ದೇವರ ಮಾರ್ಗಗಳು ನಮ್ಮ ಮಾರ್ಗಗಳಂಥಲ್ಲ.
ಪ್ರಾರ್ಥನೆಯು ಐದು ಸರಳ ಹಂತಗಳನ್ನು ಹೊಂದಿದೆ
1. ನಿಮ್ಮ ಪ್ರಾರ್ಥನೆಯನ್ನು ಸ್ವರ್ಗೀಯ ತಂದೆಗೆ ಸಂಬೋಧಿಸಿ ಹೇಳಿ
2. ಸ್ವರ್ಗೀಯ ತಂದೆಗೆ ಧನ್ಯವಾದಗಳನ್ನು ತಿಳಿಸಿ
3. ಕ್ಷಮೆಯನ್ನು ಕೇಳಿ
4. ಸ್ವರ್ಗೀಯ ತಂದೆಯನ್ನು, ಬೈಬಲ್ ವಾಕ್ಯಗಳೊಂದಿಗೆ (Scriptures) ತಮ್ಮ ವಾಕ್ಯಗಳಲ್ಲಿ ಅವರು ಏನು ಒದಗಿಸಿದ್ದಾರೆಂದು(provided) ಕೇಳಿ
5. ಯೇಸು ಕ್ರಿಸ್ತರ ನಾಮದಲ್ಲಿ ನಿಮ್ಮ ಪ್ರಾರ್ಥನೆಯನ್ನು ಕೊನೆಗೊಳಿಸಿ
ಯಾವಾಗಲೂ ಪ್ರಾಮಾಣಿಕವಾಗಿ ಮತ್ತು ಕ್ರಿಸ್ತನಲ್ಲಿ ವಿಶ್ವಾಸದೊಂದಿಗೆ ಪ್ರಾರ್ಥಿಸಿ
ನಿಮ್ಮ ಪ್ರಾರ್ಥನೆಗಳು ಈಗಾಗಲೇ ಉತ್ತರಿಸಲ್ಪಟ್ಟಿವೆ ಎಂದು ನಂಬಿರಿ.
”ನಾವು ಆತನ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ಕೇಳುತ್ತಾನೆಂಬ ಭರವಸವು ಆತನಲ್ಲಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಆಶಿಸಿದವುಗಳು ಆತನಿಂದ ನಮಗೆ ದೊರೆತವೆಂಬದು ನಮಗೆ ತಿಳಿದದೆ…”( 1 ಯೋವಾನ್ನ5:14-15)
May 9
However, as it is written: “No eye has seen, no ear has heard, no mind has conceived what God has prepared for those who love him.” —1 Corinthians 2:9. Children’s