ನಾವು ದೇವರನ್ನು ಅರಿತುಕೊಂಡಾಗ ಮತ್ತು ಅವರ ಒಳ್ಳೆಯ ಗುಣದಲ್ಲಿ ಭರವಸೆ ಇಟ್ಟಾಗ ನಾವು ಯಾವಾಗಲೂ ಅವರ ಮುಂದೆ ನಮ್ಮ ವಿನಂತಿಗಳನ್ನು ತರಬಹುದು ಮತ್ತು ಅವರ ಪ್ರತಿಕ್ರಿಯೆಯು/ಪ್ರತ್ಯುತ್ತರವು ನಮಗೆ ಉತ್ತಮವಾಗಿದೆ ಎಂಬ ಅಂಶದಲ್ಲಿ ವಿಶ್ರಾಂತಿ ಪಡೆಯಬಹುದು.
ದೇವರನ್ನು ಅರಿತುಕೊಳ್ಳಲು ಮತ್ತು ಆತನ ಒಳ್ಳೆಯ ಗುಣದಲ್ಲಿ ಭರವಸೆ ಇಡಲು ನಾವು ಆತನ ವಾಕ್ಯವನ್ನು ತಿಳಿದಿರಬೇಕು ಏಕೆಂದರೆ ದೇವರೇ ಅವರ ವಾಕ್ಯವಾಗಿದ್ದಾರೆ ಮತ್ತು ಅವರ ವಾಕ್ಯವೇ ಸ್ವತಃ ದೇವರಾಗಿದ್ದಾರೆ.
ದೇವರು ತನ್ನ ವಾಕ್ಯದಲ್ಲಿ ಏನು ಹೇಳಿದ್ದಾರೆಂದು ತಿಳಿದುಕೊಳ್ಳುವುದು ಮತ್ತು ಅದರಲ್ಲಿ ವಿಶ್ರಾಂತಿ ಪಡೆಯುವುದು ಒಂದು ಮಗು ತನ್ನ ಪೋಷಕರ ತೋಳುಗಳಲ್ಲಿ ಸುರಕ್ಷಿತವಾಗಿ ಮತ್ತು ಭ್ರದವಾಗಿ ವಿಶ್ರಾಂತಿಯಲ್ಲಿರುವಂತೆಯೇ ಆಗಿದೆ.
ದೇವರು, ನಮ್ಮ ನಿರಂತರತೆ ಹಾಗೂ ಅವರಿಗೆ ನಮ್ಮ ಅಧೀನತೆ ಮತ್ತು ದೇವರ ವಾಗ್ದಾನಗಳ ಮೇಲೆ ನಿಂತು ಅವುಗಳ ನೆರವೇರಿಕೆಯಲ್ಲಿ ಸಂಪೂರ್ಣ ಭರವಸೆಯನ್ನು ಹೊಂದಿರುವುದು ಇವೆರಡನ್ನೂ ಬಯಸುತ್ತಾರೆ.
ನೇಮಕಾತಿಯ ಪತ್ರ(offer letter) ಅಥವಾ ಆಸ್ತಿ-ಪತ್ರದ ದಾಖಲೆಗಳಲ್ಲಿ(property documents) ಅದರೊಳಗಿನ ವಿಷಯಗಳನ್ನು ತಿಳಿಯದೆ ನೀವು ಸಹಿ ಮಾಡುತ್ತೀರಾ? ಅದೇ ರೀತಿಯಲ್ಲಿ ದೇವರು ನಮಗಾಗಿ ಈಗಾಗಲೇ ಒದಗಿಸಿರುವ ಅದ್ಭುತವಾದ ಪಿತ್ರಾರ್ಜಿತವಾದ ಸ್ವತ್ತನ್ನು, ಆತನ ವಾಕ್ಯದಲ್ಲಿ ನಮಗಾಗಿ ಇರಿಸಲಾಗಿದೆ ಅದನ್ನು ತಿಳಿಯೋಣ. ಆಮೆನ್
”ಅದಕ್ಕೆ ಸರ್ವೇಶ್ವರ, “ನನ್ನ ಪ್ರಸನ್ನತೆ ನಿನ್ನ ಜೊತೆಯಲ್ಲಿ ಬರುವುದು. ನಾನು ನಿನಗೆ ವಿಶ್ರಾಂತಿ ನೀಡುವೆನು,” ಎಂದರು.”(ವಿಮೋಚನಕಾಂಡ 33:14)
May 9
However, as it is written: “No eye has seen, no ear has heard, no mind has conceived what God has prepared for those who love him.” —1 Corinthians 2:9. Children’s