ವಾಕ್ ಸ್ವಾತಂತ್ರ್ಯವು, ನಿಂದನೆಯ ಸ್ವಾತಂತ್ರ್ಯಕ್ಕಾಗಿ ಇರುವ ಅನುಮತಿಯಲ್ಲ.
ನೈತಿಕತೆ ಅಥವಾ ನೈತಿಕ ಜವಾಬ್ದಾರಿಯ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಬಹುದಾದ ವಾಕ್ ಸ್ವಾತಂತ್ರ್ಯವನ್ನು ನಾವು ಹೊಂದಬೇಕೆಂದು ದೇವರು ಬಯಸುತ್ತಾರೆ.
ನಮ್ಮನ್ನು ನಾವು ಹೇಗೆ ವ್ಯಕ್ತಪಡಿಸಬೇಕು; ನಮ್ಮ ನಂಬಿಕೆಗಳು ಮತ್ತು ಅಭಿಪ್ರಾಯಗಳನ್ನು ನಾವು ಹೇಗೆ ತಿಳಿಸಬೇಕು ಎಂಬ ತತ್ವಗಳನ್ನು ದೇವರ ವಾಕ್ಯವು ನಮಗೆ ನೀಡುತ್ತದೆ.
ದೇವರು ಇಡೀ ಮಾನವಕುಲಕ್ಕೆ ಸ್ವತಂತ್ರ ಇಚ್ಛೆಯನ್ನು ನೀಡಿದ್ದರೂ, ನಮ್ಮ ಸ್ವ-ಇಚ್ಛೆಯು ದೇವರ ವಾಕ್ಯದ ಮಾರ್ಗಸೂಚಿಗಳಲ್ಲಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಗಮನದಲ್ಲಿಡುವುದು ಮುಖ್ಯವಾಗಿದೆ. ಆದುದರಿಂದ ದೇವರ ದೃಷ್ಟಿಯಲ್ಲಿ, ಮನುಷ್ಯನು ತನ್ನ ಇಚ್ಛಾಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿಲ್ಲ.
ಆದದರಿಂದ ನನ್ನ ಪ್ರಿಯ ಸಹೋದರರೇ, ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತನಾಡುವದರಲ್ಲಿ ಮತ್ತು ಕೋಪಿಸುವದರಲ್ಲಿ ನಿಧಾನವಾಗಿಯೂ ಇರಲಿ.
1. ನಾವು ದುರುದ್ದೇಶಪೂರಿತ ಮತ್ತು ಅಶ್ಲೀಲ ಮಾತುಕತೆ ಅಥವಾ ಅಭಿವ್ಯಕ್ತಿಗಳನ್ನು ತಡೆಯಬೇಕು
ಕೊಲೊಸ್ಸೇ 3:8-9
ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವು; ಭಾಷೆಯಲ್ಲಿ ಸುಳ್ಳು, ವಂಚನೆ, ದುರುದ್ದೇಶ, ಕೋಪ ಅಥವಾ ಅಶ್ಲೀಲತೆಯನ್ನು ಒಳಗೊಂಡಿರಬಾರದು
2. ನಮ್ಮ ಮಾತು ನಿರ್ಮಿಸಲು ಪ್ರಯತ್ನಿಸಬೇಕು ಹೊರತು ನಾಶಪಡಿಸುವಂತಿರಬಾರದು
ಎಫೆಸಿ 4:29
ಸರಿಯಾದ ವಾಕ್ಯಗಳನ್ನು ಮಾತನಾಡುವುದು ಇತರರನ್ನು ನಿರ್ಮಿಸಬಹುದು ಮತ್ತು ಉತ್ತೇಜಿಸಬಹುದು. ಆದಾಗ್ಯೂ ಸುಳ್ಳುಗಳನ್ನು ಮಾತನಾಡುವುದು ಅಥವಾ ಯಾವುದೇ ರೀತಿಯ ಮೋಸದ ಮಾತುಗಳನ್ನಾಡುವುದು ಅಂತಿಮವಾಗಿ ಜನರನ್ನು ಭ್ರಷ್ಟಗೊಳಿಸಬಹುದು ಅಥವಾ ನಾಶಪಡಿಸಬಹುದು
ಆದ್ದರಿಂದ ನಮ್ಮ ಮಾತು ಯಾವಾಗಲೂ ಇತರರನ್ನು ನಾಶಪಡಿಸುವ ಬದಲು ಅವರನ್ನು ಉತ್ತೇಜಿಸುವ ಮತ್ತು ಸಹಾಯ ಮಾಡುವ ಉದ್ದೇಶ ಅಥವಾ ಪ್ರೇರಣೆಯನ್ನು ಹೊಂದಿರಬೇಕು
3. ನಾವು ಪ್ರೀತಿಯಲ್ಲಿ ಸತ್ಯವನ್ನು ಮಾತನಾಡಬೇಕು
ಎಫೆಸಿ 4:15
ನಾವು ಸತ್ಯವನ್ನು ಮಾತನಾಡಬೇಕೆಂದು ಮತ್ತು ಪ್ರೀತಿಯ ನಡವಳಿಕೆ/ವರ್ತನೆ ಅಥವಾ ಉದ್ದೇಶದಿಂದ ಸತ್ಯವನ್ನು ವ್ಯಕ್ತಪಡಿಸಬೇಕು ಎಂಬುದಾಗಿ ದೇವರು ಬಯಸುತ್ತಾರೆ
4. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವು ಯೇಸು ಕ್ರಿಸ್ತನನ್ನು ಮಹಿಮೆಪಡಿಸಬೇಕು
ಕೊಲೊಸ್ಸೇ 3:17
ನಮ್ಮ ಮಾತು ಮತ್ತು ನಮ್ಮ ಕಾರ್ಯಗಳು ದೇವರನ್ನು ಮಹಿಮೆಪಡಿಸಬೇಕು ಮತ್ತು ಯೇಸುಕ್ರಿಸ್ತನ ಸ್ವಭಾವ ಮತ್ತು ನಡತೆಯ ಜ್ಞಾನಕ್ಕೆ ಜನರನ್ನು ಕರೆತರಬೇಕು
ನಾವು ಇತರರೊಂದಿಗೆ ಮಾತನಾಡುವ ಮತ್ತು ಸಂವಹನ ನಡೆಸುವ ವಿಧಾನದಿಂದ/ರೀತಿಯಿಂದ ದೇವರ ಸ್ವಭಾವದ ಬಗ್ಗೆ ಜನರು ಹೆಚ್ಚು ತಿಳಿದುಕೊಳ್ಳುವಂತಿರಬೇಕು. ಅಂತಿಮವಾಗಿ ನಮ್ಮ ಮಾತು ಅಥವಾ ಕಾರ್ಯದಲ್ಲಿ ನಮ್ಮನ್ನು ನಾವು ನಡೆಸಿಕೊಳ್ಳುವ ರೀತಿಯು ನಮ್ಮ ಜೀವನದಲ್ಲಿ ಯೇಸುಕ್ರಿಸ್ತನ ಸ್ವಭಾವ ಮತ್ತು ನಡತೆಯನ್ನು ಇತರರು ಕಾಣಲು ಸೂಚಿಸುವಂಥ ಸಾಕ್ಷಿಯಾಗಬೇಕು.
”ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ….”(ಗಲಾತ್ಯ 5:13)
March 31
Now to him who is able to do immeasurably more than all we ask or imagine, according to his power that is at work within us, to him be glory