ಕ್ಷಮೆ ಕೊಡದೇ ಇರುವ ಹೊರೆಯೊಂದಿಗೆ ಇನ್ನೆಂದೂ ಜೀವಿಸಬೇಡಿ
ಇತರರು ನಮಗೆ ಉಂಟುಮಾಡುವ ನೋವು ಮತ್ತು ಭಾದೆ ನಿಜವಾದುದು ಮತ್ತು ಮಹತ್ವವಾದುದಾಗಿದೆ. ಆದರೆ, ಕಹಿಭಾವನೆ ಮತ್ತು ಕ್ಷಮೆ ಕೊಡದಿರುವುದರೊಂದಿಗೆ ಜೀವಿಸುವ ನೋವು ನಿಮ್ಮ ಮನಸ್ಸನ್ನು(ಪ್ರಾಣವನ್ನು) ವಿಷಪೂರಿತಗೊಳಿಸುತ್ತದೆ ಮತ್ತು ನಿಮ್ಮನ್ನು ನಾಶಪಡಿಸುತ್ತದೆ. ನಾವು ಇತರರನ್ನು ಕ್ಷಮಿಸಿದಾಗ, ಅವರು ಮಾಡಿದ್ದನ್ನು ಸರಿ ಎಂದು ನಾವು ಹೇಳುತ್ತಿಲ್ಲ, ಆದರೆ ನಾವು ಅವರನ್ನು ದೇವರಿಗೆ ಬಿಟ್ಟು ಬಿಡುತ್ತಿದ್ದೇವೆ(ಮುಕ್ತಗೊಳಿಸುತ್ತಿದ್ದೇವೆ) ಮತ್ತು ನಮ್ಮನ್ನು ಹಿಡಿದಿಟ್ಟುಕೊಂಡಿರುವ ಅದನ್ನು ಹೋಗಲು ಬಿಡುತ್ತಿದ್ದೇವೆ.
ಕ್ಷಮಿಸುವುದು ಎಂದರೆ ಮರೆತುಹೋಗಿರುವ ನೆನಪಲ್ಲ, ಆದರೆ ಅದು ಯಾವುದೇ ಸೇಡು ಇಟ್ಟುಕೊಳ್ಳದ ನೆನಪಾಗಿದೆ, ಅದು ನಮ್ಮನ್ನು ಕಹಿಭಾವನೆ ಮತ್ತು ದ್ವೇಷದಿಂದ ಮುಕ್ತಗೊಳಿಸುತ್ತದೆ – ದೇವರ ವಾಕ್ಯದ ಮೂಲಕ ಸ್ವಾತಂತ್ರ್ಯವನ್ನು/ಬಿಡುಗಡೆಯನ್ನು ಕಂಡುಕೊಳ್ಳಿ
ನನಗೆ ಬಲವನ್ನು ನೀಡುವ ಕ್ರಿಸ್ತನ ಮೂಲಕ ನಾನು ಎಲ್ಲವನ್ನೂ ಮಾಡವವನಾಗಿದ್ದೇನೆ
ನನಗೆ ಬಲವನ್ನು ಕೊಡುವ ಕ್ರಿಸ್ತನ ಮೂಲಕ ನಾನು ಕ್ಷಮಿಸಬಲ್ಲವನಾಗಿದ್ದೇನೆ
”ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ….”(ಎಫೆಸಿ 4:31-32)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good