ಬದ್ಧತೆಗಳು ದೃಢವಾಗಿ ಇಲ್ಲದಿರುವಾಗ,ಅದು ಅನ್ಯೋನ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಯಾರಾಗಿಲ್ಲವೊ,ಅವರಾಗಿ ನೀವು ವರ್ತಿಸುವಂತೆ ನಿಮ್ಮ ಸುತ್ತಲೂ ಗೋಡೆಗಳನ್ನು ಕಟ್ಟುತ್ತಾ ನಿಮ್ಮನ್ನು ಭಯಕ್ಕೆ ತಳ್ಳುತ್ತದೆ..
ಶಾರೀರಿಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿಯೂ ನಿಮ್ಮನ್ನು ನೀವು ಒಂದು ಆವರಣದಿಂದ ಆರಿಸಿಕೊಳ್ಳುವಿರಿ ಮತ್ತು ಈ ಅಸಮಾಧಾನವು ಅಸುರಕ್ಷತೆಯನ್ನು ಉಂಟು ಮಾಡುತ್ತದೆ,ಅದರ ಫಲವಾಗಿ ಸಂಬಂಧಗಳು ಹಾಳಾಗುತ್ತವೆ..
ಬೈಬಲ್ ಪ್ರಕಾರ ನಿಜವಾದ ಪ್ರೀತಿ ಹೇಗಿರುವುದೆಂದರೆ
1.ಪ್ರೀತಿಯು ತಾಳ್ಮೆಯುಳ್ಳದ್ದು.
ನಿಜ ಪ್ರೀತಿಯು ನೋವು ಮತ್ತು ಯಾತನೆಗಳನ್ನು ದೂಷಿಸದೆ ಅಥವ ಕೋಪ ಮಾಡಿಕೊಳ್ಳದೆ ಸಹಿಸಿಕೊಳ್ಳುತ್ತದೆ.
2.ಪ್ರೀತಿಯು ಕರುಣೆಯುಳ್ಳದ್ದಾಗಿದೆ.
ನಿಜ ಪ್ರೀತಿಯು ಮಾಧುರ್ಯತೆ,ಕಾಳಜಿ ಹಾಗೂ ಅಂತಃಕರುಣೆಗಳುಳ್ಳದ್ದಾಗಿದೆ. ಅದು ನಿಮ್ಮ ದುಃಖವನ್ನು ತಾನು ಅನುಭವಿಸುತ್ತದೆ; ನಿಮ್ಮ ಸಂತೋಷವನ್ನು ತಾನು ಅನುಭವಿಸುತ್ತದೆ.
3.ಪ್ರೀತಿಯು ವೈಷಮ್ಯಭರಿತವಾದುದಲ್ಲ.
ನಿಜ ಪ್ರೀತಿಯು ಮಿತವಾದುದು ಮತ್ತು ತನ್ನ ಆಶೀರ್ವಾದಗಳಿಗಾಗಿ ಮತ್ತು ಪ್ರಸ್ತುತವಾಗಿ ತಾನು ಹೊಂದಿರುವವುಗಳಿಗಾಗಿ ಕೃತಜ್ಞತೆಯುಳ್ಳದ್ದಾಗಿರುತ್ತದೆ. ಅದು ಪರರನ್ನು ದ್ವೇಷಿಸುವುದಿಲ್ಲ.
4.ಪ್ರೀತಿಯು ದೈನ್ಯವಾದುದು.
ಪ್ರೀತಿಯು ಹೆಮ್ಮೆಪಡುವುದಿಲ್ಲ ಅಥವ ಹೊಗಳಿಕೊಳ್ಳುವುದಿಲ್ಲ. ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಮತ್ತು ಅವುಗಳನ್ನು ಸರಿಪಡಿಸಿಕೊಳ್ಳಲು ಕಾತರತೆಯಿಂದ ಇರುವಷ್ಟು ಅದು ದೀನತೆಯುಳ್ಳದ್ದಾಗಿದೆ. ದ್ವೇಷವನ್ನು ಬಿಟ್ಟು ಬಿಡಲು ಮತ್ತು ಶಾಂತಿಯನ್ನು ಆನಂದಿಸಲು ಅದು ಕ್ಷಮಿಸುತ್ತದೆ.
“ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚು ಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ.” – 1 ಕೊರಿಂಥ 13:4.
5).ಪ್ರೀತಿಯು ಗೌರವವುಳ್ಳದ್ದು.
ನಿಜ ಪ್ರೀತಿಯು ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ಗೌರವಿಸುತ್ತದೆ ಮತ್ತು ಸನ್ಮಾನಿಸುತ್ತದೆ. ಅದು ನಿಮಗೆ ನಾಚಿಕೆಯನ್ನು ಅಥವ ಅವಮಾನವನ್ನು ಉಂಟು ಮಾಡುವುದಿಲ್ಲ.
6).ಪ್ರೀತಿಯು ನಿಸ್ವಾರ್ಥವಾದುದು.
ನಿಜ ಪ್ರೀತಿಯು ಯಾವಾಗಲೂ ಆಲೋಚನಾಪೂರ್ಣವಾದುದು ಮತ್ತು ಅದು ತನ್ನ ಪ್ರೀತಿಪಾತ್ರರ ಒಳಿತಿನ ಬಗ್ಗೆ ಚಿಂತಿಸುತ್ತದೆ. ಅದು ಸ್ವಾರ್ಥವಾದುದಲ್ಲ, ಅಸಂಬದ್ಧವಾದುದಲ್ಲ ಮತ್ತು ದುರಾಸೆಯಿಂದ ಕೂಡಿರುವುದಿಲ್ಲ.
7.ಪ್ರೀತಿಯು ಪ್ರಶಾಂತವಾದುದಾಗಿದೆ.
ನಿಜ ಪ್ರೀತಿಯು ಯಾವಾಗಲೂ ಮನಸ್ಸಿನ ಸ್ಪಷ್ಟತೆಯನ್ನು ಮತ್ತು ಹೃದಯದ ಕೋಮಲತೆಯನ್ನು ಪಾಲಿಸುತ್ತದೆ.
8.ಪ್ರೀತಿಯು ನೀತಿಯುತವಾದುದು.
ನಿಜ ಪ್ರೀತಿಯು ಯಾವಾಗಲೂ ಸರಿಯಾದುದನ್ನೇ ಮಾಡುತ್ತದೆ. ಅದು ಕೆಟ್ಟ ಕಾರ್ಯಗಳನ್ನು ತಡೆಯಲು ತನ್ನನ್ನು ತಾನು ಶಿಸ್ತಿಗೆ ಒಳಪಡಿಸಿಕೊಳ್ಳುತ್ತದೆ.
“ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.” – 1 ಕೊರಿಂಥ 13:5
9).ಪ್ರೀತಿಯು ಪ್ರಾಮಾಣಿಕವಾದುದು.
ನಿಜ ಪ್ರೀತಿಯು ಸತ್ಯಭರಿತವಾದುದಾಗಿದೆ. ಅದು ಸಂತೋಷಮಯವಾಗಿಯೂ ಮತ್ತು ಪ್ರಾಮಾಣಿಕತೆಯಿಂದಲೂ ಜೀವಿಸುವುದಾಗಿದೆ. ಅದು ಸುಳ್ಳು ಹೇಳುವುದಿಲ್ಲ ಮತ್ತು ಕತ್ತಲೆಯಲ್ಲಿ ಅವಿತುಕೊಳ್ಳುವುದಿಲ್ಲ.
“ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ.” – 1 ಕೊರಿಂಥ 13 : 6
10).ಪ್ರೀತಿಯು ಸಂರಕ್ಷಿಸುತ್ತದೆ.
ಪ್ರೀತಿಯು ಯಾವಾಗಲೂ ನಿಮ್ಮನ್ನು ಕಾಪಾಡುತ್ತದೆ ಮತ್ತು ನೀವು ಸುರಕ್ಷಿತವಾಗಿ ಇರಬೇಕೆಂದು ಬಯಸುತ್ತದೆ.
11.ಪ್ರೀತಿಯು ಭರವಸೆ ಇಡುವುದಾಗಿದೆ.
ನಿಜ ಪ್ರೀತಿಯು ಭರವಸೆಯನ್ನ ಇಡುತ್ತದೆ. ಅದು ನಿಮ್ಮನ್ನು ಆತುಕೊಳ್ಳುವುದು ಮತ್ತು ನಿಮ್ಮನ್ನು ಅವಲಂಬಿಸಿಕೊಳ್ಳುವುದು. ಅದು ನಿಮ್ಮ ಸಾಮರ್ಥ್ಯಗಳನ್ನು,ಪ್ರತಿಭೆಗಳನ್ನು, ನೈಪುಣ್ಯತೆಗಳನ್ನು ಮತ್ತು ನಿಮ್ಮಲ್ಲಿ ಇರುವ ಒಳ್ಳೆಯವುಗಳನ್ನು ಗುರುತಿಸುತ್ತದೆ.
12.ಪ್ರೀತಿಯು ಭರವಸೆಪೂರ್ಣವಾದದ್ದಾಗಿದೆ.
ನಿಜ ಪ್ರೀತಿಯು ಆಶಾವಾದಿಯಾಗಿರುತ್ತದೆ. ಅದು ನಿಮ್ಮನ್ನು ತನ್ನ ಯೋಜನೆಗಳಲ್ಲಿ ಸೇರಿಸಿಕೊಳ್ಳುತ್ತದೆ. ಅದು ನಿಮ್ಮೊಂದಿಗೆ ಉಜ್ವಲವಾದ ಭವಿಷ್ಯವನ್ನು ನೋಡುತ್ತದೆ.
13.ಪ್ರೀತಿಯು ಸ್ಥಿರವಾದುದಾಗಿದೆ.
ನಿಜ ಪ್ರೀತಿಯು ಸುಲಭವಾಗಿ ಬಿಟ್ಟು ಬಿಡುವುದಿಲ್ಲ.
“ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ.” – 1 ಕೊರಿಂಥ 13:7
14.ಪ್ರೀತಿಯು ಭಯವನ್ನು ಹೊಡೆದೋಡಿಸುತ್ತದೆ.
ನಿಜ ಪ್ರೀತಿಯು ಒಬ್ಬರ ಹೃದಯ, ಮನಸ್ಸು ಮತ್ತು ಪ್ರಾಣಗಳನ್ನು ಹಿಂಸಿಸುವ ಭಯ,ಆತಂಕಗಳು ಮತ್ತು ಅಸುರಕ್ಷತೆಗಳನ್ನು ಹೊರ ಹಾಕುವುದು.
“ಪ್ರೀತಿ ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯಿರುವಲ್ಲಿ ಯಾತನೆಗಳಿರುವವು. ಆದರೆ ಪೂರ್ಣಪ್ರೀತಿಯು ಹೆದರಿಕೆಯನ್ನು ಹೊಡೆದೊಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಪೂರ್ಣಗೊಂಡವನಲ್ಲ.” – 1 ಯೊವಾನ್ನ 4:18
15). ಪ್ರೀತಿಯು ತನ್ನನ್ನು ಪ್ರೀತಿಸದವರನ್ನೂ ಸಹ ಪ್ರೀತಿಸುತ್ತದೆ. ನಿಜ ಪ್ರೀತಿಯು ತನ್ನನ್ನು ದ್ವೇಷಿಸುವವರಿಗೂ ಸಹ ಒಳಿತನ್ನೇ ಮಾಡುತ್ತದೆ. ನೀವು ಅದನ್ನು ನಿಮ್ಮ ವೈರಿಯಂತೆ ನಡೆಸುತ್ತಿದ್ದರೂ ಸಹ ಅದು ನಿಮ್ಮನ್ನು ಪ್ರೀತಿಸುತ್ತದೆ.
ಕೇಳುವವರಾದ ನಿಮಗೆ ನಾನು ಹೇಳುವದೇನಂದರೆ – ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ;
ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದಮಾಡಿರಿ; ನಿಮ್ಮನ್ನು ಬಯ್ಯುವವರಿಗೋಸ್ಕರ ದೇವರಲ್ಲಿ ಪ್ರಾರ್ಥಿಸಿರಿ.
ನಿನ್ನ ಒಂದು ಕೆನ್ನೆಯ ಮೇಲೆ ಹೊಡದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸಿರಿ; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡಿರಿ.
ನಿನ್ನನ್ನು ಬೇಡುವವರೆಲ್ಲರಿಗೂ ಕೊಡು; ನಿನ್ನ ಆಸ್ತಿಯನ್ನು ಕಸಿದುಕೊಳ್ಳುವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ.
ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.
ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ.
ನಿಮಗೆ ಉಪಕಾರ ಮಾಡುವವರಿಗೇ ನೀವು ಉಪಕಾರ ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. – (ಲೂಕ 6:27 – 33)
16).ಪ್ರೀತಿಯು ದೇವರಿಂದ ಬರುತ್ತದೆ.
ನಿಜ ಪ್ರೀತಿಯು ನಿಮ್ಮನ್ನು ದೇವರ ಹತ್ತಿರಕ್ಕೆ ಕರೆದು ತರುತ್ತದೆ.
“ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದ ಬಂದದ್ದಾಗಿದೆ ಮತ್ತು ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.” – 1 ಯೊವಾನ್ನ 4:7
17).ಪ್ರೀತಿಯು ದೊಡ್ಡ ತ್ಯಾಗವನ್ನು ಮಾಡುತ್ತದೆ.
ನಿಜ ಪ್ರೀತಿಯು ಅತ್ಯುತ್ತಮವಾದ ಕಾರ್ಯಗಳನ್ನು ಮಾಡುತ್ತದೆ. ಅದು ತನ್ನ ಆರಾಮದಾಯಕ ವಾತಾವರಣದಿಂದ ಹೊರ ಹೋಗುತ್ತದೆ ಅಥವ ಅದು ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಸಲುವಾಗಿ ಮಾತ್ರ ತನಗೆ ಮುಖ್ಯವಾದ ವಿಷಯಗಳನ್ನು ತ್ಯಾಗ ಮಾಡುತ್ತದೆ.
“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತಮ್ಮ ಒಬ್ಬನೇ ಮಗನನ್ನು ಕೊಟ್ಟರು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟರು”. – ಯೊವಾನ್ನ 3:16
18.ಪ್ರೀತಿಯು ನಿಜವಾದ ಕಾರ್ಯಗಳ ಮೂಲಕ ಪ್ರೀತಿಸುತ್ತದೆ.
ನಿಜ ಪ್ರೀತಿಯು ಮಾತುಗಳ ಮೇಲೆ ಅಥವ ಕಪಟತನವಾದ ಕಾರ್ಯಗಳ ಮೇಲೆ ಅವಲಂಬಿಸಿಲ್ಲ, ಆದರೆ ಅದು ಸತ್ಯಭರಿತವಾದ ಕಾರ್ಯಗಳನ್ನು ಅವಲಂಬಿಸಿದೆ. ಅದು ನಂಬಿಕೆ ಅಥವ ಭರವಸೆ ಇಡುವುದನ್ನು ಮಾತ್ರ ಮಾಡುವುದಿಲ್ಲ, ಆದರೆ ಅದು ನಂಬುವ ಅಥವ ಭರವಸೆ ಇಟ್ಟಿರುವ ಕಾರ್ಯಗಳನ್ನು ವಾಸ್ತವತೆಗೆ ತರುವಂತಹ ಕಾರ್ಯಗಳನ್ನು ಮಾಡುತ್ತದೆ.
“ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.
ನಾವು ಸತ್ಯಕ್ಕೆ ಸೇರಿದವರೆಂಬುದು ಇದರಿಂದಲೇ ನಮಗೆ ತಿಳಿಯುತ್ತದೆ, ನಮ್ಮ ಹೃದಯವು ದೇವರ ಸಮಕ್ಷಮದಲ್ಲಿ ದೋಷರಹಿತವಾಗಿರುತ್ತದೆ. -1 ಯೊವಾನ್ನ 3:18-19
” ಹೀಗಿರುವುದರಿಂದ, ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತದೆ. ಇವುಗಳಲ್ಲಿ ದೊಡ್ಡದು ಪ್ರೀತಿಯೇ.” – 1 ಕೊರಿಂಥ 13:13
19.ಪ್ರೀತಿಯು ತನ್ನನ್ನು ತಾನು ಪ್ರೀತಿಸುತ್ತದೆ.
ನಿಜ ಪ್ರೀತಿಯು ತನಗೆ ತಾನು ಹಾನಿ ಮಾಡಿಕೊಳ್ಳದೇ ತನ್ನನ್ನು ತಾನು ನೋಡಿಕೊಳ್ಳುತ್ತದೆ. ಅದು ತನ್ನನ್ನು ತಾನು ಇನ್ನೂ ಹೆಚ್ಚು ಬಲಶಾಲಿಯಾಗಿಯೂ,ಆರೋಗ್ಯಶಾಲಿಯಾಗಿಯೂ ಮಾಡಿಕೊಳ್ಳುತ್ತದೆ ಮತ್ತು ಪ್ರೀತಿಸುವುದರಲ್ಲಿ ಇನ್ನೂ ಹೆಚ್ಚು ಸಾಮರ್ಥ್ಯವುಳ್ಳದ್ದಾಗಿ ತನ್ನನ್ನು ತಾನು ಮಾಡಿಕೊಳ್ಳುತ್ತದೆ.
“ಹಾಗೆಯೇ ಗಂಡದಿರು ಸಹ ತನ್ನ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.” – ಎಫೆಸ 5:28
20.ಪ್ರೀತಿಯು ಒಬ್ಬ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಒಂದು ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುತ್ತದೆ.
ನಿಜ ಪ್ರೀತಿಯು ನಿಮ್ಮನ್ನು ಸಂಪೂರ್ಣವಾಗಿ ಒಬ್ಬ ಹೊಸ ಮತ್ತು ಉತ್ತಮವಾದ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತದೆ.
“ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.
ಒಬ್ಬರನ್ನೊಬ್ಬರು ಸೈರಿಸಿಕೊಂಡು ಯಾರಿಗಾದರೂ ಮತ್ತೊಬ್ಬನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ, ತಪ್ಪುಹೊರಿಸದೆ ಕ್ಷಮಿಸಿರಿ, ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.
ಇವೆಲ್ಲಕ್ಕಿಂತ ಮಿಗಿಲಾಗಿ ಸಂಪೂರ್ಣತೆಯ ಬಂಧವಾಗಿರುವ ಪ್ರೀತಿಯನ್ನು ಧರಿಸಿಕೊಳ್ಳಿರಿ.” – ಕೊಲೊಸ್ಸೆ 3:12-14
21.ನೀವು ಕಾಲದ ಅಂತ್ಯವನ್ನೂ ಸಹ ಎದುರುಗೊಳ್ಳುವ ವಿಶ್ವಾಸವನ್ನು ಪ್ರೀತಿಯು ನಿಮಗೆ ನೀಡುತ್ತದೆ.
ನಿಜ ಪ್ರೀತಿಯು ನಿಮ್ಮನ್ನು ಪಾಪಗಳಿಂದ ದೂರ ಇಡುತ್ತದೆ ಮತ್ತು ನೀವು ನ್ಯಾಯ ತೀರ್ಪಿನ ದಿನದಂದೂ ಸಹ ನೀವು ಭರವಸೆಯುಳ್ಳವರಾಗಿರುವ ಹಾಗೆ ನಿಮ್ಮ ಪ್ರಾಣವನ್ನು ತೊಳೆದು ಶುದ್ಧೀಕರಿಸುತ್ತದೆ..
“ನ್ಯಾಯತೀರ್ಪಿನ ದಿನದಲ್ಲಿ ನಾವು ಧೈರ್ಯದಿಂದಿರುವುದಕ್ಕಾಗಿ ಆತನ ಪ್ರೀತಿಯು ನಮ್ಮೊಳಗೆ ಪೂರ್ಣಗೊಂಡಿದೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ.” – 1 ಯೊವಾನ್ನ 4:17
“ಪ್ರೀತಿ ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯಿರುವಲ್ಲಿ ಯಾತನೆಗಳಿರುವವು. ಆದರೆ ಪೂರ್ಣಪ್ರೀತಿಯು ಹೆದರಿಕೆಯನ್ನು ಹೊಡೆದೊಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಪೂರ್ಣಗೊಂಡವನಲ್ಲ…”(1 ಯೊವಾನ್ನ 4:18)