ದೇವರ ಮೇಲಿನ ವಿಶ್ವಾಸವು ಯಾವಾಗಲೂ ನಮ್ಮನ್ನು ಮುನ್ನಡೆಸುತ್ತದೆ.
ವಿಶ್ವಾಸವು ಉದ್ದೇಶಪೂರ್ವಕ ಬದುಕಿನ/ಜೀವನದ ಉತ್ತಮ ಚಿಲುಮೆಯಾಗಿದೆ
ನಾವು ಅತ್ಯುನ್ನತ ದೇವರ ಪುತ್ರರು ಮತ್ತು ಪುತ್ರಿಯರಾಗಿದ್ದೇವೆ ಎಂಬ ಜ್ಞಾನಕ್ಕಿಂತ ಬಲವಾದ ಪ್ರೇರಣೆ ಮತ್ತಾವುದೂ ಇಲ್ಲ ಮತ್ತು ನಾವು ನಮ್ಮ ಜೀವನದಲ್ಲಿ ಏನಾದರೂ ಮಾಡಬೇಕೆಂದು ದೇವರು ನಿರೀಕ್ಷಿಸುತ್ತಾರೆ ಮತ್ತು ನಾವು ಆತನನ್ನು ಹುಡುಕಿದಾಗ ಮತ್ತು ಆತನನ್ನು ಅವಲಂಬಿಸಿಕೊಂಡಾಗ ನಮಗೆ ಸಹಾಯ ಮಾಡುತ್ತಾರೆ.
ನಮ್ಮ ಜೀವನ ಪ್ರಮುಖವಲ್ಲ ಮತ್ತು ನಮ್ಮ ಸುತ್ತಲಿನ ಪ್ರಪಂಚದ ಮೇಲೆ ನಾವು ಯಾವುದೇ ಸಂಪರ್ಕ ಅಥವಾ ಪ್ರಭಾವ ಬೀರುವುದಿಲ್ಲ ಎಂಬ ಭ್ರಮೆಗೆ ನಾವು ಬಲಿಯಾಗುತ್ತೇವೆ. ಅದು ಸೈತಾನನ ಅತಿ ದೊಡ್ಡ ಸುಳ್ಳಾಗಿದೆ.
ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.
ಮಹೋನ್ನತನಾದ ದೇವರಿಗೆ, ನನಗೋಸ್ಕರ ಕಾರ್ಯಗಳನ್ನು ಸಫಲಮಾಡುವ ದೇವರನ್ನೇ, ಕೂಗುತ್ತೇನೆ.
ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವವನ ನಿಂದೆಯಿಂದ ನನ್ನನ್ನು ರಕ್ಷಿಸುವನು, ಅವನನ್ನು ನಾಚಿಕೆಗೇಡು ಮಾಡುವನು. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು.
”ಆಲೋಚನೆಯಲ್ಲಿ ದೊಡ್ಡವನು ಕ್ರಿಯೆಯಲ್ಲಿ ಬಲಿಷ್ಠನು; ನಿನ್ನ ಕಣ್ಣುಗಳು ಮನುಷ್ಯರ ಮಕ್ಕಳ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರ ವಾಗಿಯೂ ಅವನವನ ಕ್ರಿಯೆಗಳ ಫಲದ ಪ್ರಕಾರವಾಗಿಯೂ ಕೊಡುವ ಹಾಗೆ ತೆರೆದವೆ…”(ಯೆರೆಮಿಯ 32 : 19)
December 30
“Or again, how can anyone enter a strong man’s house and carry off his possessions unless he first ties up the strong man? Then he can rob his house.” —Matthew