ನೀವು ದೇವರ ವಾಕ್ಯದೊಂದಿಗೆ ಪ್ರಾರ್ಥನೆ ಮಾಡುವಾಗ ಮತ್ತು ಧ್ಯಾನಿಸುವಾಗ, ನೀವು ಹೃದಯ, ಮನಸ್ಸು ಮತ್ತು ದೇವರ ಚಿತ್ತವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಹೃದಯವು ಹೆಚ್ಚು ಹೆಚ್ಚಾಗಿ ದೇವರ ಕಡೆಗೆ ಮತ್ತು ಆತನು ಪ್ರೀತಿಸುವ ವಿಷಯಗಳ ಕಡೆಗೆ ತಿರುಗುತ್ತದೆ ಮತ್ತು ದೇವರನ್ನು ಘನ ಪಡಿಸುವ ಮತ್ತು ಆತನನ್ನು ನಿಮ್ಮ ಹೃದಯದಲ್ಲಿ ಮೊದಲ ಸ್ಥಾನದಲ್ಲಿರಿಸಿಕೊಳ್ಳುವಂತಹ ವಿಷಯಗಳನ್ನು ನೀವು ಬಯಸಲು ಪ್ರಾರಂಭಿಸುತ್ತೀರಿ.
ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ದೇವರನ್ನು ಮೊದಲ ಸ್ಥಾನದಲ್ಲಿ ಇರಿಸುವವರಿಗೆ ದೇವರು ಮಾಡದಿರುವಂತಹದು ಬಹುತೇಕ ಯಾವುದೂ ಇಲ್ಲ.
ಆದರೆ ಮೊತ್ತ ಮೊದಲು ಮತ್ತು ಮುಖ್ಯವಾಗಿ ಆತನ ಸಾಮ್ರಾಜ್ಯ ಮತ್ತು ಆತನ ನೀತಿವಂತಿಕೆಗಾಗಿ; ಸರಿಯಾಗಿ ಕಾರ್ಯ ಮಾಡುವ ಮತ್ತು ಸರಿಯಾಗಿ ನಡೆಯುವ ಆತನ ಮಾರ್ಗಕ್ಕಾಗಿ, ದೇವರ ವರ್ತನೆ ಮತ್ತು ಅವರ ಸ್ವಭಾವಕ್ಕಾಗಿ ಹುಡುಕಿರಿ, ಅದು ನಿಮ್ಮ ಗುರಿಯಾಗಿರಲಿ, ಅದಕ್ಕಾಗಿ ಶ್ರಮಿಸಿರಿ ಮತ್ತು ಈ ಎಲ್ಲಾ ವಿಷಯಗಳನ್ನು ನಿಮಗೆ ಸಹ ನೀಡಲಾಗುವುದು.
”ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು. ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸವಿಡು; ಆತನು ಅದನ್ನು ನೆರವೇರಿಸುವನು….”(ಕೀರ್ತನೆ 37:4-5)
March 31
Now to him who is able to do immeasurably more than all we ask or imagine, according to his power that is at work within us, to him be glory