ಕ್ರಿಸ್ತನಲ್ಲಿ ನೆಲೆಯಾಗಿರುವ ಜೀವನದ ಒಂದು ಪ್ರಮುಖ ಅಂಶವೆಂದರೆ ಸ್ವಾತಂತ್ರ್ಯ/ಬಿಡುಗಡೆಯನ್ನು ಜವಾಬ್ದಾರಿಯುತವಾಗಿ ಅಭ್ಯಾಸ ಮಾಡುವುದಾಗಿದೆ
ಒಳ್ಳೆಯ ಕಾರ್ಯಗಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ, ಆದರೆ ಪಾಪದ ಆಲೋಚನೆಗಳು ನಮ್ಮನ್ನು ಕೆಟ್ಟತನದ ಗುಲಾಮರನ್ನಾಗಿ ಮಾಡುತ್ತವೆ ಮತ್ತು ಅದರಿಂದ ಮುಕ್ತರಾಗುವ ಅಥವಾ ಬಿಡುಗಡೆಗೊಳ್ಳುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ – ದೈವೀಕ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುವ ಮೂಲಕ ಪಾಪದ ಆಲೋಚನೆಗಳಿಗೆ ಬಂಧಿಯಾಗುವುದನ್ನು ನಿಲ್ಲಿಸಿ/ದೂರವಿರಿ
ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ನಾವು ನಮ್ಮ ಪಾಪಾಧೀನಸ್ವಭಾವದ ಆಳ್ವಿಕೆಗೆ ಒಳಗಾಗಿರಬಾರದು. ನಮ್ಮ ಪಾಪಸ್ವಭಾವದ ಬಯಕೆಗನುಸಾರವಾಗಿ ನಾವು ಜೀವಿಸಕೂಡದು. ನಿಮ್ಮ ಪಾಪಸ್ವಭಾವವು ಬಯಸುವ ಕೆಟ್ಟಕಾರ್ಯಗಳನ್ನು ಮಾಡುವುದಕ್ಕಾಗಿ ನೀವು ನಿಮ್ಮ ಜೀವಿತವನ್ನು ಉಪಯೋಗಿಸಿದರೆ, ನೀವು ಆತ್ಮಿಕವಾಗಿ ಸಾಯುವಿರಿ. ಆದರೆ ನೀವು ನಿಮ್ಮ ದೇಹದ ಮೂಲಕವಾಗಿ ಮಾಡುವ ಕೆಟ್ಟಕಾರ್ಯಗಳನ್ನು ಪವಿತ್ರಾತ್ಮನ ಸಹಾಯದಿಂದ ನಿಲ್ಲಿಸಿದರೆ ಹೊಸ ಜೀವಿತವನ್ನು ಹೊಂದಿಕೊಳ್ಳುವಿರಿ. ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ.
ಆತ್ಮೀಯ ಸ್ನೇಹಿತರೇ, ಈ ರೀತಿಯ ವಾಗ್ದಾನಗಳು ನಮ್ಮನ್ನು ಸೆಳೆಯುತ್ತೇವೆ. ಒಳಗೆ ಮತ್ತು ಹೊರಗೆ ನಮ್ಮನ್ನು ಅಪವಿತ್ರಗೊಳಿಸುವ ಅಥವಾ ವಿಚಲಿತಗೊಳಿಸುವ ಎಲ್ಲದಕ್ಕೂ ಚೊಕ್ಕವಾದ ವಿರಾಮವನ್ನು ಹಾಕೋಣ. ದೇವರ ಆರಾಧನೆಗಾಗಿ ನಮ್ಮ ಇಡೀ ಜೀವನವನ್ನು ಸರಿಹೊಂದುವಂತೆ, ಪವಿತ್ರ ದೇವಾಲಯಗಳನ್ನಾಗಿ ಮಾಡೋಣ.
”ನಾನು ಹೇಳುವದೇನಂದರೆ, ಆತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಯನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ….”(ಗಲಾತ್ಯ 5:16)
March 31
Now to him who is able to do immeasurably more than all we ask or imagine, according to his power that is at work within us, to him be glory