ಬಹಳಷ್ಟು ಜನರು ದೇವರೊಂದಿಗೆ ಮಾತನಾಡುತ್ತಾರೆ ಆದರೆ ದೇವರಿಂದ ಯಾವುದನ್ನೂ ಆಲಿಸುವುದಿಲ್ಲ/ಕೇಳಿಸಿಕೊಳ್ಳುವುದಿಲ್ಲ.
ಏಕೆಂದರೆ ಅವರಿಗೆ, ಪ್ರಾರ್ಥನೆಯು ಒಂದು ಏಕಮುಖದ ಸಂಭಾಷಣೆ ಇದ್ದಂತೆ. ಕೇವಲ ಏಕಮುಖ ಸಂಭಾಷಣೆ ಮೂಲಕ ನೀವು ಯಾವುದೇ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.
ದೇವರು ನಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಸಂಬಂಧವನ್ನು ಬಯಸುತ್ತಾರೆ ಎಂಬುದನ್ನು ನೆನಪಿಡಿ, ಆದ್ದರಿಂದ ನೀವು ಆತನಿಗೆ ಹೇಗೆ ಬದ್ಧರಾಗುತ್ತೀರಿ ಎಂಬುದನ್ನು ಬದಲಾಯಿಸಿಕೊಳ್ಳಿ.
ನಿಮ್ಮ ಪ್ರಾರ್ಥನೆಯ ಸಮಯದಲ್ಲಿ ದೇವರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಿರಿ ಇದರಿಂದ ನೀವು ದೇವರಿಂದ ಆಲಿಸಬಹುದು
ದೇವರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ ಎಂದು ನಮಗೆ ಹೇಗೆ ಗೊತ್ತಿದೆ?
1 . ದೇವರು ಪವಿತ್ರಾತ್ಮರ ಮೂಲಕ ಸ್ಫೂರ್ತಿದಾಯಕ ಆಲೋಚನೆಗಳೊಂದಿಗೆ ನಾವು ಗುರುತಿಸುವಂತೆ ಶಾಂತವಾಗಿ ಮಾತನಾಡುತ್ತಾರೆ.
2 . ಪವಿತ್ರಾತ್ಮರು ಆನಂದ ಮತ್ತು ಶಾಂತಿಯ ಭಾವನೆಗಳನ್ನು ತರುತ್ತಾರೆ; ನಾವು ಒತ್ತಡ, ಆತಂಕ ಅಥವಾ ಚಿಂತೆಯ ಭಾವನೆಗಳನ್ನು ಅನುಭವಿಸುವುದಿಲ್ಲ.
3 . ದೇವರ ಸ್ವರವು ನಮ್ಮೊಂದಿಗೆ ಅನುರಣಿಸುತ್ತದೆ/ಪ್ರತಿಧ್ವನಿಸುತ್ತದೆ (ನಮಗೆ ಅರ್ಥವಾಗುತ್ತದೆ)
4 . ದೇವರು ತನ್ನ ವಾಕ್ಯದ ಮೂಲಕ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಮೂಲಕ ನಮ್ಮೊಂದಿಗೆ ಮಾತನಾಡುತ್ತಾರೆ.
ನಮ್ಮ ತಿಳುವಳಿಕೆಯ ಮಟ್ಟ ಎಷ್ಟೇ ಇರಲಿ, ಪ್ರಾರ್ಥನೆಯ ಮೂಲಕ ಮತ್ತು ಪವಿತ್ರಾತ್ಮರ ಪ್ರಭಾವದ ಮೂಲಕ ದೇವರು ನಮ್ಮೊಂದಿಗೆ ಸಂವಹನ ನಡೆಸಲು/ಮಾತನಾಡಲು ಬಯಸುತ್ತಾರೆ. ಆಲೋಚನೆಗಳು, ಭಾವನೆಗಳು ಅಥವಾ ಇತರ ವಿಧಾನಗಳಿಗೆ ನಾವು ಉತ್ತಮವಾಗಿ ಪ್ರತಿಕ್ರಿಯಿಸುತ್ತೇವೆಯೇ ಇಲ್ಲವೇ ಮುಖ್ಯವಲ್ಲ, ಆದರೆ ದೇವರು ನಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುವ ವಿಧಾನ ಇದು.
ದೇವರು ಮಾತನಾಡುವಾಗ, ನಾವು ಅದನ್ನು ನಮ್ಮ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಗುರುತಿಸುತ್ತೇವೆ. ಅವರು ಶಾಂತಿಯ ಪ್ರಕಾರವಾಗಿ/ವಿಚಾರವಾಗಿ ಮಾತನಾಡುತ್ತಾರೆ ಹೊರತು ಆತಂಕವನಲ್ಲ.
”ಅಲ್ಲಿಂದ ನಿನ್ನ ದೇವರಾದ ಕರ್ತನನ್ನು ಹುಡುಕಿದರೆ ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಹುಡುಕಿದರೆ, ಆತ ನನ್ನು ಕಂಡುಕೊಳ್ಳುವಿ….”(ಧರ್ಮೋಪದೇಶಕಾಂಡ 4 : 29)
February 23
And let us consider how we may spur one another on toward love and good deeds. Let us not give up meeting together, as some are in the habit of