ಯಾವುದೇ ಎದುರಾಳಿ ಸನ್ನಿವೇಶವನ್ನು ಧಿಕ್ಕರಿಸುವ ರೀತಿಯ ಮನೋಭಾವವನ್ನು ಬೆಳೆಸಿಕೊಳ್ಳಲು ದೇವರ ವಾಕ್ಯದ ಮೂಲಕ ನೀವು ಮಾಡಬಹುದಾದ ಎಲ್ಲವುಗಳನ್ನೂ ಮಾಡಿ.
ನಿಮ್ಮ ಕರೆಯು ಸಂಪೂರ್ಣತೆಗೆ ಬರುವ ಮಾರ್ಗವೆಂದರೆ ದೇವರು ನಿಮ್ಮ ಬಗ್ಗೆ ಹೇಳಿರುವ ಎಲ್ಲದರೊಂದಿಗೆ ನಿಮ್ಮನ್ನು ನೀವು ಗುರುತಿಸಿಕೊಳ್ಳುವುದು; ಯಾವುದೇ ಭಯವಿಲ್ಲದೇ ಮತ್ತು ಧೈರ್ಯದಿಂದ.
ಉದ್ದೇಶ, ನೆರವೇರಿಕೆ(ಈಡೇರಿಕೆ) ಮತ್ತು ಬಿಡುಗಡೆಯು ಭಯದ ಇನ್ನೊಂದು ಬದಿಯಲ್ಲಿ ಕಾಯುತ್ತಿದೆ.
ಈ ಮೇಲಿನ ವಿಷಯಗಳ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿದಾಗ ನಮಗೆ ಲಭ್ಯವಿರುವ ವಿಜಯಗಳು ಇವು, ಕ್ರಿಸ್ತನಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು.
ನಿಮ್ಮನ್ನು ದೇವರ ಪ್ರತಿರೂಪದಲ್ಲಿ ಸೃಷ್ಠಿಸಲಾಗಿದೆ. ಧೀರನಾಗಿ, ಬಲಶಾಲಿಯಾಗಿ, ಧೈರ್ಯಶಾಲಿಯಾಗಿ, ಅಂಜಿಕೆಯಿಲ್ಲದವರಾಗಿ ಇರಲು ನಿಮ್ಮನ್ನು ಸೃಷ್ಠಿಸಲಾಗಿದೆ.
ವಿಶ್ವಾಸ ಎಂದರೆ ನಿಮಗೆ ಭಯವಿಲ್ಲ ಎಂದು ಅರ್ಥವಲ್ಲ, ಆದರೆ ಭಯದಿಂದ ನೀವು ಏನು ಮಾಡಬಲ್ಲಿರಿ ಎಂಬುದನ್ನು ಇದು ನಿರ್ಧರಿಸುತ್ತದೆ. ಭಯ, ಪರಿಶೀಲಿಸದೆ ಹಾಗೆಯೇ ಉಳಿಸುತ್ತದೆ, ವಿಶ್ವಾಸವನ್ನು ನೆಲಸಮವಾಗಿಸುತ್ತದೆ ಮತ್ತು ಭರವಸೆಯನ್ನು ತುಳಿದುಹಾಕುತ್ತದೆ(ಧ್ವಂಸಮಾಡುತ್ತದೆ)
ಮತ್ತೊಂದೆಡೆ, ವಿಶ್ವಾಸವು ಭಯವನ್ನು ಉಸಿರುಗಟ್ಟಿಸುತ್ತದೆ, ದೇವರಲ್ಲಿ ಮತ್ತು ಆತನ ಸಾಮರ್ಥ್ಯದಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಆತನೇ ನಿಮ್ಮ ಸಂಗಡ ಹೋಗುತ್ತಾರೆ, ನಿಮ್ಮ ಶತ್ರುಗಳ ವಿರುದ್ಧ ನಿಮಗೋಸ್ಕರ ಯುದ್ಧ ಮಾಡುತ್ತಾರೆ ಮತ್ತು ನಿಮಗೆ ವಿಜಯವನ್ನು ನೀಡುತ್ತಾರೆ.
ಇಂದು, ಭಯಪಡಬೇಡಿ. ಬದಲಾಗಿ, ಈ ಭರವಸೆಯು/ವಾಗ್ದಾನವು ನಿಮ್ಮ ಭಯವನ್ನು ಹೊರಹಾಕಲಿ.
ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ
ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
”ನಿನಗೆ ಆಜ್ಞಾಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದನು…(ಯೆಹೋಶುವ 1:9)
February 23
And let us consider how we may spur one another on toward love and good deeds. Let us not give up meeting together, as some are in the habit of