ದೇವರು ಮತ್ತು ಅವರ ವಾಕ್ಯಕ್ಕಿಂತ ಈ ಲೋಕದ ಕಾಳಜಿ ಮತ್ತು ಸಂಪತ್ತಿನಲ್ಲಿ(ನಿಧಿ) ನಾವು ಮಗ್ನರಾದಾಗ ಈ ಜೀವನದ ಐಶ್ವರ್ಯಗಳು ಮತ್ತು ಈ ಲೋಕದ ಕಾಳಜಿಗಳು ವಿಶ್ವಾಸದಲ್ಲಿರುವ ಪ್ರಬುದ್ಧತೆಯನ್ನು ತಡೆಗಟ್ಟಬಹುದು.
ನೀವು ಕಳೆದುಕೊಳ್ಳಬಹುದಾದಂಥ ಯಾವುದಾದರ ಮೇಲೂ ನಿಮ್ಮ ಸಂತೋಷವನ್ನು ಅವಲಂಬಿಸಿಕೊಳ್ಳಲು ಬಿಡಬೇಡಿ.
ಲೋಕವನ್ನು ಬದಲಾಯಿಸುವವರಾಗಿ ನಮ್ಮನ್ನು ಕರೆಯಲಾಗಿದೆಯೇ ಹೊರತು ಲೋಕವನ್ನು ಬೆನ್ನಟ್ಟುವವರನ್ನಾಗಿ(ಅನುಸರಿಸುವವರಾಗಿ) ಅಲ್ಲ.
ಎಲ್ಲರಿಗೂ ರಕ್ಷಣೆಯನ್ನು ಕೊಡುವ ದೇವರ ಕೃಪೆಯು ಪ್ರತ್ಯಕ್ಷವಾಗಿದೆ. ನಾವು ದೇವರಿಗೆ ವಿರುದ್ಧವಾಗಿ ಜೀವಿಸದಂತೆಯೂ ಲೋಕದ ಜನರು ಮಾಡಲಪೇಕ್ಷಿಸುವ ಕೆಟ್ಟಕಾರ್ಯಗಳನ್ನು ಮಾಡದಂತೆಯೂ ಅದು ತಡೆಯುತ್ತದೆ. ನಾವು ದೇವರ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿ ನೀತಿವಂತರಾಗಿಯೂ ಜ್ಞಾನಿಗಳಾಗಿಯೂ ಲೋಕದಲ್ಲಿ ಈಗ ಬಾಳಬೇಕೆಂದು ಅದು ಬೋಧಿಸುತ್ತದೆ.
ಕ್ರಿಸ್ತನು ನಿನಗಾಗಿ ಮರಣ ಹೊಂದಿದರು. ಆತನಿಗಾಗಿ ಜೀವಿಸು . ಕ್ರಿಸ್ತನು ನಿಮ್ಮ ಮಹತ್ವಾಕಾಂಕ್ಷೆಯಾಗಲಿ. ಕ್ರಿಸ್ತನು ನಿಮ್ಮ ಗಮನವಾಗಿರಲಿ.
”ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು.” (ಲೂಕಾ 8:14)
March 31
Now to him who is able to do immeasurably more than all we ask or imagine, according to his power that is at work within us, to him be glory