ನಮ್ಮ ಪ್ರೀತಿಯ ಉದ್ದೇಶ/ಗುರಿಯು ನಮ್ಮ ಮೇಲೆ ಮತ್ತು ನಾವು ಏನನ್ನು ಗಳಿಸಿಕೊಳ್ಳಬಹುದು ಎಂಬುದರ ಮೇಲೆ ಕೇಂದ್ರೀಕೃತವಾಗಿದ್ದರೆ, ನಾವು ಈ ಭೂಲೋಕದ ಮೇಲಿನ ಸಂಪತ್ತನ್ನು ಸಂಗ್ರಹಿಸುತ್ತೇವೆ – ಇದು ನಮ್ಮ ನಾಶಕ್ಕೆ ಕಾರಣವಾಗುತ್ತದೆ ಮತ್ತು ವಿಶ್ವಾಸದಿಂದ ದೂರ ಸರಿಯುತ್ತದೆ.
ನಿಮ್ಮ ಸಂಪತ್ತನ್ನು ಎಲ್ಲಿ ಕೂಡಿಸಿಡುತ್ತೀರಿ ಪರಲೋಕದಲ್ಲೋ ಅಥವಾ ಭೂಲೋಕದಲ್ಲೋ? ನಿಮ್ಮ ಜೀವನ; ಕೊಡುವುದರಲ್ಲಿ ಮತ್ತು ಸ್ವರ್ಗದಲ್ಲಿ ನಿಮ್ಮ ಸಂಪತ್ತನ್ನು ಹೆಚ್ಚಸಿಕೊಳ್ಳುವುದರ ಬಗ್ಗೆ ಇದೆಯೋ ಅಥವಾ ಹೊಸ ವಸ್ತುಗಳನ್ನು ಖರೀದಿಸುವ ಬಗ್ಗೆ ಮತ್ತು ಶಾಶ್ವತವಾಗಿ ಇಲ್ಲಿ ನೆಲೆಸದ ವಸ್ತುಗಳ ಮೇಲೆ ನಿಮ್ಮ ಹಣವನ್ನು ಖರ್ಚು ಮಾಡುವುದರಲ್ಲಿ ಇದೆಯೋ?
ನಾವು ಸಂಪತ್ತನ್ನೇ ಪೂಜಿಸುತ್ತೇವೆ ಅಥವಾ ನಮ್ಮ ಸಂಪತ್ತಿನಿಂದ ಪೂಜಿಸುತ್ತೇವೆ
ಆದರೂ, ನಮ್ಮ ಶ್ರೇಷ್ಠ ಸಂಪತ್ತು ಯೇಸು ಆಗಿದ್ದರೆ, ನಾವು ಆತನನ್ನು ಮಹಿಮೆಗೊಳಪಡಿಸುವ ಅನ್ವೇಷಣೆಗಳ ಮೇಲೆ ನಮ್ಮ ಸಮಯ, ಹಣ, ಸಂಪನ್ಮೂಲಗಳು ಮತ್ತು ಪ್ರತಿಭೆಯನ್ನು ಕೊಡಲು ಬಯಸುತ್ತೇವೆ ಮತ್ತು ಸ್ವರ್ಗ ಸಾಮ್ರಾಜ್ಯದಲ್ಲಿ ನಾವು ಸಂಪತ್ತನ್ನು ಸಂಗ್ರಹಿಸುತ್ತೇವೆ ಮತ್ತು ಈ ಭೂಲೋಕದಲ್ಲಿ ನಾವು ಜೀವಿಸಲು ಬೇಕಾದ ಎಲ್ಲವೂ ನಮಗೆ ಕೂಡಿಸಲ್ಪಡುತ್ತದೆ.
ಸ್ವರ್ಗದಲ್ಲಿರುವ ನಿಧಿಗಳು ಯೇಸುವಿನಂತೆ ಜೀವಿಸುವುದರೊಂದಿಗೆ ಮತ್ತು ಪ್ರೀತಿಸುವುದರೊಂದಿಗೂ ಸಹ ಸಂಬಂಧ ಹೊಂದಿವೆ.
”ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿರುವವರೂ ಪರೋಪಕಾರ ಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು.”( 1 ತಿಮೋಥಿ 6:17-19)
March 31
Now to him who is able to do immeasurably more than all we ask or imagine, according to his power that is at work within us, to him be glory