ದೇವರ ಮೇಲೆ ನಿಮ್ಮ ನಂಬಿಕೆಯನ್ನು ಮರು ವ್ಯಾಖ್ಯಾನಿಸುವ ರೀತಿಯಲ್ಲಿ ದೇವರು ನಿಮ್ಮನ್ನು ಆಶ್ಚರ್ಯಗೊಳಿಸುತ್ತಾರೆ/ಚಕಿತಗೊಳಿಸುತ್ತಾರೆ.
ಕಠಿಣವಾದ ಸ್ಥಳಗಳಲ್ಲಿ, ಕರ್ತನು ನಿಮಗಾಗಿ ಅದ್ಭುತವಾಗಿ ತೋರಿಸುತ್ತಾರೆ ಮತ್ತು ನಿಮ್ಮ ಅಗತ್ಯವನ್ನು ಸಮಯಕ್ಕೆ ಸರಿಯಾಗಿ ಪೂರೈಸುತ್ತಾರೆ, ಏಕೆಂದರೆ ದೇವರಲ್ಲಿ “ಕೊರತೆ”(ಅಭಾವ) ಇಲ್ಲ.
ನನ್ನ ಬಲಹೀನತೆಯು ದೇವರು ತನ್ನ ಪರಿಪೂರ್ಣ ಶಕ್ತಿಯನ್ನು ಬಹಿರಂಗಪಡಿಸಲು ವೇದಿಕೆಯನ್ನು ಹೊಂದಿಸುತ್ತದೆ. ಅವರು ಯಾವುದೇ ಪರಿಸ್ಥಿತಿಯಲ್ಲೂ/ಪರಿಸ್ಥಿತಿಯ ಮೂಲಕವೂ ಕಾರ್ಯ ಮಾಡಬಹುದು ಮತ್ತು ನನ್ನ ನ್ಯೂನತೆಗಳು ಅಥವಾ ಕೊರತೆಗಳು ಆತನ ಚಿತ್ತವನ್ನು ನೆರವೇರಿಸುವುದಕ್ಕೆ ಅಡ್ಡಿಯಾಗುವುದಿಲ್ಲ.
ಓ ಕರ್ತನೇ, ನಿನ್ನ ಬಲಗೈಶಕ್ತಿಯಲ್ಲಿ
ಮಹಿಮೆಯುಳ್ಳದ್ದಾಗಿದೆ.
ಓ ಕರ್ತನೇ, ನಿನ್ನ ಬಲಗೈ
ಶತ್ರುವನ್ನು ಜಜ್ಜಿ ಪುಡಿಮಾಡಿತು.
ನಮ್ಮ ಸಮಸ್ಯೆಗಳಿಗಿಂತ ದೇವರು ದೊಡ್ಡವರಾಗಿದ್ದಾರೆ. ಅವರು ತಮ್ಮ ಶಕ್ತಿಯನ್ನು ನಿಮ್ಮೊಳಗೆ ಮತ್ತು ನಿಮ್ಮ ಮೂಲಕ ಪ್ರಕಟಪಡಿಸಲು ಸಿದ್ಧರಾಗಿರುತ್ತಾರೆ.
ಆದ್ದರಿಂದ ನಿಮ್ಮ ವಿಶ್ವಾಸವುಳ್ಳ ಪ್ರಾರ್ಥನೆಯು ನಿಮ್ಮ ಜೀವನದಲ್ಲಿ ದೇವರ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ತಿಳಿದುಕೊಂಡು ದೃಢಭರವಸೆಯಿಂದ ನಂಬಿರಿ.
”ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ….” (ವಿಮೋಚನಕಾಂಡ 9:16)
March 31
Now to him who is able to do immeasurably more than all we ask or imagine, according to his power that is at work within us, to him be glory