ಯೇಸುವೇ ನಮ್ಮ ನಿರೀಕ್ಷೆ, ಸಹಾಯ, ಒದಗಿಸುವಿಕೆ(Provison) ಮತ್ತು ರಕ್ಷಣೆಯಾಗಿದ್ದಾರೆ.
ನವೀಕರಿಸಲ್ಪಟ್ಟ ಮನಸ್ಸು ಕ್ರಿಸ್ತ ಯೇಸುವಿನಲ್ಲಿ ನಮ್ಮ ನಿಜವಾದ ಗುರುತುಗಳನ್ನು ಗುರುತಿಸಲು(ಗೊತ್ತುಮಾಡಲು) ಸಹಾಯ ಮಾಡುತ್ತದೆ ಮತ್ತು ನಾವು ಇನ್ನು ಮುಂದೆ ಎಂದಿಗೂ ಪಾಪದ ಶಕ್ತಿಯ ಗುಲಾಮರಲ್ಲ.
ನಿಮ್ಮ ಮನಸ್ಸನ್ನು ನವೀಕರಿಸುವುದು ಹೆಚ್ಚು ಆರೋಗ್ಯಕರ, ಆನಂದಕರ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಉತ್ತಮ ಮಾರ್ಗವಾಗಿದೆ.
ನಿಮ್ಮ ಮನಸ್ಸನ್ನು ನವೀಕರಿಸಿಕೊಳ್ಳುವುದು, ನೀವು ಯೋಚಿಸುವ ವಿಧಾನವನ್ನು ಬದಲಾಯಿಸಿಕೊಳ್ಳುವುದು; ನಿಮಗಾಗಿ ಉತ್ತಮ ಜೀವನವನ್ನು ಮತ್ತು ದೇವರನ್ನು ಗೌರವಿಸುವ ಜೀವನವನ್ನು ಸೃಷ್ಟಿಸುತ್ತದೆ.
ನಿಮ್ಮ ಮನಸ್ಸನ್ನು ನವೀಕರಿಸಿಕೊಳ್ಳಲು ಐದು ಹಂತಗಳು
1 ನಿಮ್ಮ ಮನಸ್ಸನ್ನು ಕಾಪಾಡಲು ಮತ್ತು ನಡೆಸಲು ಸಹಾಯ ಮಾಡುವಂತೆ ದೇವರನ್ನು ಕೇಳಿಕೊಳ್ಳಿ
2 ಸ್ವಯಂ-ಕೇಂದ್ರೀಕೃತವಾದ ಮತ್ತು ಸ್ವಯಂ-ಸೋಲಿಸುವ ಆಲೋಚನೆಗಳ ಮೂಲವನ್ನು ಗುರುತಿಸಿ
3 ದೇವರ ವಾಕ್ಯದ ಮೂಲಕ ಸ್ವಯಂ-ಕೇಂದ್ರೀಕೃತವಾದ ಆಲೋಚನೆಯನ್ನು ದೇವರ ಕೇಂದ್ರಕೇಂದ್ರೀಕೃತವಾದ ಮನಸ್ಥಿತಿಯೊಂದಿಗೆ ಬದಲಾಯಿಸಿ.
4 ಯೇಸು ಕ್ರಿಸ್ತವಿನಲ್ಲಿ ನೀವು ಅಂಗೀಕರಿಸಲ್ಪಟ್ಟಿರುವ ಸತ್ಯದಲ್ಲಿ ವಿಶ್ರಾಂತಿ ಪಡೆಯಿರಿ
5 ಪ್ರತಿದಿನವೂ 1 ರಿಂದ 4 ರ ವರೆಗಿನ ಹಂತಗಳನ್ನು ಪುನರಾವರ್ತಿಸಿ
ದೇವರು ನಿಮ್ಮನ್ನು ಖಂಡಿಸುವುದಿಲ್ಲ, ಆದ್ದರಿಂದ ಸ್ವಯಂ ಖಂಡನೆಯ ಆಲೋಚನೆಗಳು ದೇವರಿಂದ ಬಂದಿರುವುದಲ್ಲ ಎಂಬುದನ್ನು ತಿಳಿಯಿರಿ. ದೇವರ ಪ್ರೀತಿಯಲ್ಲಿ ಯಾವುದೇ ಭಯವಿಲ್ಲ, ಆದ್ದರಿಂದ ನೀವು ಭಯ ಅಥವಾ ಸೋಲಿನ ಭಾವನೆಗಳನ್ನು ಅನುಭವಿಸಿದಾಗ, ನೀವು ಆ ಆಲೋಚನೆಗಳನ್ನೂ ಸುರಕ್ಷಿತವಾಗಿ ನಿರ್ಲಕ್ಷಿಸಬಹುದು
ತಂದೆಯ ಚಿತ್ತದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ ಆತನ ಮಗನಾದ ಯೇಸುವಿನಂತೆ ನೀವು ಸಹ ಬದಲಾಗಬೇಕೆಂದು ದೇವರು ಬಯಸುತ್ತಾರೆ.
”ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ”(ರೋಮ 8:5-6)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross