ದೇವರ ವಾಕ್ಯದ ಮೂಲಕ ದೇವರ ಚಿತ್ತವನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ನಾವು ಹೇಗೆ ಜೀವಿಸಬೇಕೆಂದು ದೇವರು ನಮ್ಮನ್ನು ಸೃಷ್ಟಿಸಿದರೋ ಅದೇ ವ್ಯಕ್ತಿಯಾಗಿ ಬೆಳವಣಿಗೆ/ಏಳಿಗೆ ಹೊಂದಲು ನಿರಂತರ ಪ್ರಯತ್ನದ ಅಗತ್ಯವಿರುತ್ತದೆ.
ನಿಮ್ಮ ಉತ್ಸಾಹ ಕುಂದುಹೋಗಲು (ಕಡಿಮೆಯಾಗಲು) ಅಥವಾ ನಿಮ್ಮ ಆತ್ಮವಿಶ್ವಾಸವನ್ನು ನಡುಗಲು ಬಿಡಬೇಡಿ
ಒಳ್ಳೆಯ ಹಣ್ಣುಗಳು ಪಕ್ವವಾಗಲು ಪೋಷಣೆಯನ್ನು ತೆಗೆದುಕೊಳ್ಳುತ್ತದೆ – ಹೊರಗಿನಿಂದ ಹಣ್ಣಾಗುವುದಕ್ಕೆ ಮೊದಲು ಒಳಗಿನ ಕಾರ್ಯ ಆಗಬೇಕು ಎಂಬುದನ್ನು ನೆನಪಿಡಿ.
ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. “ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ.
ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.
ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು.
ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.
ನಿಮ್ಮೊಳಗಿರುವ ಪವಿತ್ರಾತ್ಮರಿಂದ ಫಲಿಸುವ/ಉಂಟಾಗುವ ಫಲವು ಅದರ ವಿವಿಧ ಅಭಿವ್ಯಕ್ತಿಗಳಲ್ಲಿ ವ್ಯಕ್ತವಾಗುವ ದೈವೀಕ ಪ್ರೀತಿಯಾಗಿದೆ.
ಉಕ್ಕಿ ಹರಿಯುವ ಆನಂದ
ಅಧೀನಕ್ಕೊಳಪಡುವ ಶಾಂತಿ
ಸಹಿಸಿಕೊಳ್ಳುವ ತಾಳ್ಮೆ
ಕಾರ್ಯದಲ್ಲಿ ತೋರ್ಪಡಿಸುವ ದಯೆ
ಸದ್ಗುಣಗಳಿಂದ ತುಂಬಿದ ಜೀವನ
ಮೇಲುಗೈ ಸಾಧಿಸುವ ವಿಶ್ವಾಸ
ಹೃದಯದ ಸಾತ್ವಿಕತ್ವ
ಆತ್ಮದ ಬಲ/ಶಕ್ತಿ
ಈ ಗುಣಗಳಿಗಿಂತ ಮೇಲೆ ಎಂದಿಗೂ ಯಾವುದೇ ಕಾನೂನನ್ನು ಇಡಬೇಡಿ, ಏಕೆಂದರೆ ಅವುಗಳು ಅಪರಿಮಿತವಾಗಿದ್ದವು.
”ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ…..”(ಮತ್ತಾಯ 7:16)
February 23
And let us consider how we may spur one another on toward love and good deeds. Let us not give up meeting together, as some are in the habit of