ನಾವು ಹೊಂದಿರುವಂಥ ಪ್ರತಿಯೊಂದು ಸಂಬಂಧವೂ ನಮ್ಮೊಳಗಿನ ಶಕ್ತಿ ಅಥವಾ ದೌರ್ಬಲ್ಯವನ್ನು ಪೋಷಿಸುತ್ತದೆ.
1. ಒಳ್ಳೆಯ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು
ಜ್ಞಾನೋಕ್ತಿ 12:26, “ನೀತಿವಂತ ನೆರೆಯವನಿಗೆ ದಾರಿತೋರಿಸುವನು; ಅನೀತಿವಂತನು ಅವನಿಗೆ ದಾರಿ ತಪ್ಪಿಸುವನು..”..
2. ಒಳ್ಳೆಯ ಸ್ನೇಹಿತರು ಗಾಳಿಮಾತನ್ನು ಆಡುವುದಿಲ್ಲ
ಜ್ಞಾನೋಕ್ತಿ 16:28, “ ಮೂರ್ಖನು ಜಗಳವನ್ನು ಬಿತ್ತುತ್ತಾನೆ; ಪಿಸುಗುಟ್ಟುವವನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ..”..
3. ಒಳ್ಳೆಯ ಸ್ನೇಹಿತರು ನಿಷ್ಠಾವಂತರು
ಜ್ಞಾನೋಕ್ತಿ 17:17, “ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ; ಇಕ್ಕಟ್ಟಿಗೋಸ್ಕರ ಸಹೋದರನು ಹುಟ್ಟಿದ್ದಾನೆ.
4. ಒಳ್ಳೆಯ ಸ್ನೇಹಿತರು ಸತ್ಯವನ್ನು ಮಾತನಾಡುತ್ತಾರೆ
ಜ್ಞಾನೋಕ್ತಿ 27:5-6, “ ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.. ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ.”..
5. ಒಳ್ಳೆಯ ಸ್ನೇಹಿತರು ಒಬ್ಬರನ್ನೊಬ್ಬರು ಚುರುಕುಗೊಳಿಸುತ್ತಾರೆ
ಜ್ಞಾನೋಕ್ತಿ 27:17, “ಕಬ್ಬಿಣವು ಕಬ್ಬಿಣವನ್ನು ಹದಮಾಡುತ್ತದೆ; ಹಾಗೆಯೇ ಒಬ್ಬನು ತನ್ನ ಸ್ನೇಹಿತನ ಬುದ್ಧಿಯನ್ನು ಚುರುಕು ಮಾಡುತ್ತಾನೆ..”..
6. ಒಳ್ಳೆಯ ಸ್ನೇಹಿತರು ಉತ್ತಮ ಸಲಹೆ ನೀಡುತ್ತಾರೆ
ಜ್ಞಾನೋಕ್ತಿ 27:9, “ತೈಲವೂ ಸುಗಂಧ ದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತದೆ, ಹಾಗೆಯೇ ಆದರಣೆಯ ಸಲಹೆಯಿಂದ ಸ್ನೇಹಿತನ ಮಧುರತ್ವವು ಇರುತ್ತದೆ.”..
7. ಒಳ್ಳೆಯ ಸ್ನೇಹಿತರು ತಮ್ಮ ಸ್ನೇಹಿತರೊಂದಿಗೆ ನಗುತ್ತಾರೆ ಮತ್ತು ಅಳುತ್ತಾರೆ
ರೋಮ 12:15, “ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.”..
8. ಒಳ್ಳೆಯ ಸ್ನೇಹಿತರಿಗೆ ಅವರ ಗಡಿ/ಸೀಮಿತ ಗೊತ್ತು
ಜ್ಞಾನೋಕ್ತಿ 25:17, “ನೆರೆಯವನು ಬೇಸರಗೊಂಡು ಹಗೆ ಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು..”..
9. ಒಳ್ಳೆಯ ಸ್ನೇಹಿತರು ತ್ಯಾಗ ಮಾಡಲು ಸಿದ್ಧರಿರುತ್ತಾರೆ
ಯೋವಾನ್ನ 15: 12-13, “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನನ್ನ ಆಜ್ಞೆಯಾಗಿದೆ.. ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನು ಕೊಡುವ ಪ್ರೀತಿಗಿಂತ ಹೆಚ್ಚಿನದು ಯಾವದೂ ಇಲ್ಲ.”..
“ದೋಷವನ್ನು ಮುಚ್ಚುವವನು ಪ್ರೀತಿಯನ್ನು ಹುಡುಕುತ್ತಾನೆ, ಸಂಗತಿಯನ್ನು ಎತ್ತಿ ಆಡುವವನು ಸ್ನೇಹಿತರನ್ನು ಪ್ರತ್ಯೇಕಿಸುತ್ತಾನೆ…….”( ಜ್ಞಾನೋಕ್ತಿ 17:9)
March 13
Jabez cried out to the God of Israel, “Oh, that you would bless me and enlarge my territory! Let your hand be with me, and keep me from harm so