ಪ್ರತಿ ದಿನವೂ ನಾವು ತತಕ್ಷಣವಾಗಿ ಭಾವನಾತ್ಮಕ ಪ್ರತಿಕ್ರಿಯೆಯನ್ನು ತೋರುವಂತೆ ವಿವಿಧ ಸನ್ನಿವೇಶಗಳನ್ನು ಎದುರಿಸುತ್ತೇವೆ.
ತಪ್ಪು ಅಥವಾ ಅನ್ಯಾಯವಾದಾಗ ಕೋಪ ಬರುವುದು ಮನುಷ್ಯನ ಸಹಜ ಸ್ವಭಾವವಾಗಿದ್ದರೂ, ಆ ನಕಾರಾತ್ಮಕ ಭಾವನೆಗಳನ್ನು ಬಿಡುಗಡೆ ಮಾಡಬೇಕೆಂದು(ಸ್ವತಂತ್ರಗೊಳಿಸು) ಮತ್ತು ಅದನ್ನು ಪ್ರೇರೇಪಿಸಿದವರನ್ನು ಕ್ಷಮಿಸಬೇಕೆಂದು ದೇವರು ಬಯಸುತ್ತಾರೆ – ದೇವರು ನಿಮಗಾಗಿ ಉದ್ದೇಶಿಸಲ್ಪಟ್ಟಿರುವ ಎಲ್ಲಾ ಆಶೀರ್ವಾದಗಳಿಗೆ ಇದು ಸಂಪೂರ್ಣವಾಗಿ ಯೋಗ್ಯವಾದುದ್ದಾಗಿದೆ.
ಮನುಷ್ಯನ ವಿವೇಕವು ಅವನ ಕೋಪವನ್ನು ಅಡ್ಡಿಮಾಡುತ್ತದೆ. ದೋಷವನ್ನು ಲಕ್ಷಿಸದೆ ಇರುವದು ಅವನಿಗೆ ಘನತೆಯಾಗಿದೆ.
ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಏಕೆಂದರೆ ಸಿಟ್ಟು ಅಥವಾ ಕೋಪವು ಸೈತಾನನಿಗೆ ನಿಮ್ಮ ಮೇಲೆ ಹಿಡಿತವನ್ನು ನೀಡುತ್ತದೆ.
ಕೋಪವನ್ನು ನಿಲ್ಲಿಸು; ಉರಿಯನ್ನು ಬಿಟ್ಟುಬಿಡು; ಹೇಗಾದರೂ ಕೇಡುಮಾಡದ ಹಾಗೆ ಕೋಪಿಸಿಕೊಳ್ಳ ಬೇಡ.
ಕೋಪ ಮತ್ತು ಇತರ ನಕಾರಾತ್ಮಕ ಭಾವನೆಗಳನ್ನು ನಾವು ಅನುಭವಿಸುತ್ತಿರುವ ಕ್ಷಣಗಳಲ್ಲಿ, ಅದನ್ನು ನಾವು ಗುರುತಿಸಬೇಕು ಮತ್ತು ಒಂದು ಹೆಜ್ಜೆ ಹಿಂದಕ್ಕೆ ಹೋಗಬೇಕು. ನಮ್ಮ ಭಾವನೆಗಳನ್ನು ದೇವರ ಬಳಿ ನಿವೇದಿಸಿ ಮತ್ತು ಯೇಸುವಿನ ಬಳಿಗೆ ಹಿಂತಿರುಗಿ. ನಾವು ಆತನ ಸಹಾಯವನ್ನು, ಆತನ ಕ್ಷಮೆಯನ್ನು ಕೇಳಬೇಕು, ಮತ್ತು ಆತನ ಮೂಲಕ ನಮ್ಮನ್ನು ಬದಲಿಸಲು ನಾವು ಅನುಮತಿಸಬೇಕು. ಪ್ರಮುಖ ವಿಷಯವೆಂದರೆ ಮೂಲ ದ್ರಾಕ್ಷಾಬಳ್ಳಿಯಲ್ಲಿ ನಾವು ನೆಲೆಗೊಳ್ಳಬೇಕು ಮತ್ತು ಆತನಿಂದ ನಾವು ಸಹಾಯ ಹೊಂದಲು ನಮ್ಮನ್ನು ನಾವು ಅನುಮತಿಸಬೇಕು.
ನಮ್ಮಲ್ಲಿ ಪ್ರತಿಯೊಬ್ಬರೂ ಇದನ್ನು ಮಾಡುವುದಾದರೆ, ನಾವು ದೇವರನ್ನು ಮೆಚ್ಚಿಸುವ ಮತ್ತು ಆತನಿಗೆ ಮಹಿಮೆಯನ್ನು ತರುವಂತಹ ನಡತೆಯನ್ನು ಹೊಂದಿರುವುದಲ್ಲದೆ, ಆಗಾಗ್ಗೆ ಹೆಚ್ಚಾಗಿ ನಾವು ನಮ್ಮ ಕೋಪವನ್ನು ಜಯಿಸಲು ಸಾಧ್ಯವಾಗುತ್ತದೆ.
ಪ್ರೀತಿ, ಶಾಂತಿ, ಸಹನೆ, ಆನಂದ, ವಿಶ್ವಾಸ, ಸ್ವಯಂ ನಿಯಂತ್ರಣ, ನಮ್ರತೆ ಮತ್ತು ಇನ್ನೂ ಹೆಚ್ಚಿನವುಗಳೊಂದಿಗೆ ನಿಮ್ಮ ಜೀವನದಲ್ಲಿ ಎದುರಾಗುವ ಅಡೆತಡೆಗಳಿಗೆ ಮತ್ತು ನಕಾರಾತ್ಮಕತೆಗೆ ಹೇಗೆ ನೀವು ಪ್ರತಿಕ್ರಿಯಿಸಬಹುದು ಎಂಬುದನ್ನು ಯೇಸುವಿನಿಂದ ಕಲಿಯಿರಿ. ನೀವು ಆತನ ಮಾತನ್ನು /ವಾಕ್ಯವನ್ನು ಹಾಗೂ ಆತನ ಆತ್ಮವನ್ನು ಸ್ವೀಕರಿಸಿದಾಗ ಇವೆಲ್ಲವೂ ನಿಮಗೆ ಅಥವಾ ಯಾರಿಗೇ ಆದರೂ ಸಾಧ್ಯವಾಗುತ್ತದೆ.
”ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢತೆಯನ್ನು ವೃದ್ಧಿಮಾಡುವನು…..”(ಜ್ಞಾನೋಕ್ತಿ 14:29)
April 1
In the same way, the Spirit helps us in our weakness. We do not know what we ought to pray for, but the Spirit himself intercedes for us with groans