ಪ್ರಾರ್ಥನೆ ಮತ್ತು ಸ್ತುತಿಯು ಮೌಖಿಕವಾಗಿ ಅಥವಾ ಮಾತಿನಲ್ಲಿ ವ್ಯಕ್ತಪಡಿಸುವ ವಿಶ್ವಾಸವಾಗಿದೆ.
ದೇವರು ಏನನ್ನಾದರೂ ಮಾಡಿದ ನಂತರ ಅವರಿಗೆ ಧನ್ಯವಾದಗಳನ್ನು ಸಲ್ಲಿಸುವುದಕ್ಕೆ ಹೆಚ್ಚಿನ ವಿಶ್ವಾಸದ ಅಗತ್ಯವಿಲ್ಲ ಆದಾಗ್ಯೂ, ನೀವು ದೇವರನ್ನು ಹೇಗೆ ತೋರಿಸುತ್ತೀರಿ/ಪ್ರಕಟಿಸುತ್ತೀರಿ ಎಂದರೆ; ಆತನು ನಿಮ್ಮ ಜೀವನದಲ್ಲಿ ಒಂದು ಮಹತ್ವದ ಸಾಧನೆಯನ್ನು/ತಿರುವನ್ನು ಮಾಡುತ್ತಾರೆ ಎಂಬ ವಿಶ್ವಾಸದಲ್ಲಿ, ಆತನಿಗೆ ಮುಂಚಿತವಾಗಿಯೇ ಧನ್ಯವಾದಗಳನ್ನು ಸ್ತುತಿಸ್ತೋತ್ರವನ್ನು ಅರ್ಪಿಸುವುದರ ಮೂಲಕವಾಗಿದೆ.
ವಿಶ್ವಾಸ ಎಂದರೆ ದೇವರು ಏನನ್ನಾದರೂ ಮಾಡಬಲ್ಲರು ಎಂದು ನಂಬುವುದಲ್ಲ. ವಿಶ್ವಾಸ ಎಂದರೆ ಅವರು ಏನನ್ನಾದರೂ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಅಲ್ಲ. ವಿಶ್ವಾಸ ಎಂದರೆ ಆತನು ಈಗಾಗಲೇ ಅದನ್ನು ಮಾಡಿ ಮುಗಿಸಿರುವುದಕ್ಕಾಗಿ ಮುಂಚಿತವಾಗಿಯೇ ದೇವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿದೆ.
ನೀವು ಆಶಿಸುತ್ತಿರುವುದನ್ನು ನೀವು ಪಡೆದ ನಂತರ ದೇವರಿಗೆ ಧನ್ಯವಾದ ಹೇಳಿದರೆ, ಅದು ಕೃತಜ್ಞತೆ ಅಥವಾ ಉಪಕಾರ ಸ್ಮರಣೆಯಾಗುತ್ತದೆ. ಆದರೆ ನೀವು ದೇವರಿಗೆ ಮುಂಚಿತವಾಗಿಯೇ ಧನ್ಯವಾದ ಸಲ್ಲಿಸಿದಾಗ, ಅದನ್ನು ವಿಶ್ವಾಸ ಎಂದು ಕರೆಯಲಾಗುತ್ತದೆ.
ನೀವು ದೇವರನ್ನು ಸ್ತುತಿಸಿದಾಗ ಅದು ನಿಮಗೆ ಬಲವನ್ನು ನೀಡುತ್ತದೆ, ನಿಮ್ಮ ಪ್ರಾರ್ಥನೆಗೆ ದೇವರು ಉತ್ತರಿಸಿದ್ದಕ್ಕಾಗಿ ನೀವು ಮುಂಚಿತವಾಗಿ ದೇವರಿಗೆ ಧನ್ಯವಾದ ಹೇಳಿದಾಗ, ಅದು ನಿಮ್ಮನ್ನು ಪ್ರೋತ್ಸಾಹಿಸುವುದಾಗಿದೆ.
ಯಾವಾಗಲೂ ದೂರುವ ಮೂಲಕ ನೀವು ವಿಶ್ವಾಸದಲ್ಲಿ ಬಲವಾಗಿ ನೆಲೆಗೊಳ್ಳುವುದಿಲ್ಲ. ಅದು ಎಷ್ಟು ಕೆಟ್ಟದಾಗಿದೆ ಎಂಬುದರ ಬಗ್ಗೆ ನೀವು ಮಾತನಾಡುತ್ತಿದ್ದರೆ ನೀವು ವಿಶ್ವಾಸದಲ್ಲಿ ದೃಢವಾಗಿ ಉಳಿಯುವುದಿಲ್ಲ; ಅದರ ಬದಲಿಗೆ ದೇವರನ್ನು ಸ್ತುತಿಸುವುದಕ್ಕಾಗಿ ಆಯ್ಕೆಮಾಡಿಕೊಳ್ಳಿ.
ಸ್ತುತಿಯು ನಿಮ್ಮನ್ನು ಬಲಶಾಲಿಯನ್ನಾಗಿಸುತ್ತದೆ, ನಿಮ್ಮನ್ನು ಮುಂದೆ ಸಾಗುವಂತೆ ಮಾಡುತ್ತದೆ; ಆಗಾಗ್ಗೆ ನಾವು ಯೋಚಿಸುತ್ತೇವೆ “ಸಮಸ್ಯೆ ತೀರಿದ ನಂತರ ನಾನು ದೇವರನ್ನು ಸ್ತುತಿಸುತ್ತೇನೆ, ಪರಿಹಾರವನ್ನು ನೋಡಿದ ನಂತರ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು. ನೀವು ಮುಂಚಿತವಾಗಿಯೇ ದೇವರಿಗೆ ಧನ್ಯವಾದ ಹೇಳದಿದ್ದರೆ, ದೇವರ ವಾಗ್ದಾನಕ್ಕಾಗಿ ಕಾಯಲು ನಿಮಗೆ ಶಕ್ತಿ / ಬಲ ಇರುವುದಿಲ್ಲ.
ಬೆಳಿಗ್ಗೆಯೇ ಎದ್ದು, “ದೇವರೇ ನನ್ನ ಕನಸುಗಳು ನನಸಾಗಿರುವುದಕ್ಕೆ, ಈ ಸಮಸ್ಯೆಗಳು ತಿರುವು ಪಡೆದುಕೊಂಡಿರುವುದಕ್ಕಾಗಿ ಧನ್ಯವಾದಗಳು , ಏಕೆಂದರೆ ಈ ಅಡೆತಡೆಗಿಂತ ನೀವು ದೊಡ್ಡವರಾಗಿದ್ದೀರಿ ” ಎಂದು ಹೇಳುವುದು ನಮ್ಮನ್ನು ಬಲಪಡಿಸುತ್ತದೆ.
ಪ್ರತಿ ಬಾರಿಯೂ ನೀವು ಚಿಂತೆ ಮಾಡುವಂತೆ ಪ್ರಚೋದಿಸಲ್ಪಟ್ಟಾಗ, ನಿಮ್ಮ ಪ್ರಾರ್ಥನೆಗೆ ಉತ್ತರವು ನಿಮ್ಮ ಹಾದಿಯಲ್ಲಿದೆ ಎಂದು ದೇವರಿಗೆ ಧನ್ಯವಾದ ಹೇಳಲು ನೆನಪಿನಲ್ಲಿಡಿ.
ನೀವು ಒಮ್ಮೆ ಪ್ರಾರ್ಥಿಸಿ, ಮತ್ತು ಆ ವಾಗ್ದಾನ ನೆರವೇರಲು, ನಿಮ್ಮನ್ನು ಗುಣಪಡಿಸಲು, ಸಂಬಂಧವನ್ನು ಪುನಃರ್ ಸ್ಥಾಪಿಸಲು ದೇವರನ್ನು ಕೇಳಿ, ಅಂದಿನಿಂದ ನೀವು ದೇವರನ್ನು ಮತ್ತೊಮ್ಮೆ ಕೇಳುವ ಅಗತ್ಯವಿಲ್ಲ. ನೀವು ಮೊದಲ ಬಾರಿ ಪ್ರಾರ್ಥಿಸಿದ ತಕ್ಷಣವೇ ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದಾರೆ. ಪ್ರತಿಬಾರಿಯೂ ನೀವು ಅದರ ಬಗ್ಗೆ ಯೋಚಿಸಿದಾಗಲೆಲ್ಲಾ, ನಿಮ್ಮ ಪ್ರಾರ್ಥನೆಗೆ ಉತ್ತರವು ಈಗಾಗಲೇ ನಿಮ್ಮ ಹಾದಿಯಲ್ಲಿದೆ ಎಂದು ನೀವು ದೇವರಿಗೆ ಧನ್ಯವಾದ ಹೇಳಬೇಕು.
ದೇವರು ತನ್ನ ವಾಗ್ದಾನವನ್ನು ನೆರೆವೇರಿಸಲು ಅಥವಾ ಜಾರಿಗೆ ತರಲು ಬಯಸುತ್ತಾರೆ, ಆದರೆ ಆ ಪುನಃರ್ಸ್ಥಾಪನೆ ನಡೆಯುವ ಮೊದಲು, ಸ್ವಸ್ಥತೆ ಹೊಂದಿಕೊಳ್ಳುವ ಮೊದಲು, ಕಾನೂನು ಪರಿಸ್ಥಿತಿ ತಿರುವನ್ನು ಪಡೆಯುವ ಮೊದಲು ಅವರಿಗೆ ಧನ್ಯವಾದ ಹೇಳುವ ಜನರನ್ನು ದೇವರು ಹುಡುಕುತ್ತಿದ್ದಾನೆ/ಅರಸುತ್ತಿದ್ದಾರೆ.
”ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢ ನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ…”(ಹಿಬ್ರಿಯ 11:1)
March 31
Now to him who is able to do immeasurably more than all we ask or imagine, according to his power that is at work within us, to him be glory