ದೇವರು ನಿಮಗೆ ಮಾಡಿರುವ ಮಹತ್ತಾದ ಕಾರ್ಯಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವುದು/ಸ್ಮರಿಸುವುದು ಒಳ್ಳೆಯದು, ಆದರೂ ಕೂಡ, ನಿನ್ನೆಯ ಗೆಲುವುಗಳಿಂದ ನೀವು ಜೀವಿಸುವುದನ್ನು ದೇವರು ಬಯಸುವುದಿಲ್ಲ.
ಅವರು ನಿಮಗೆ ಹೊಸ ಪುರಾವೆಗಳನ್ನು(ಸಾಕ್ಷ್ಯ/ರುಜುವಾತು); ಮತ್ತು ಪ್ರತಿದಿನವೂ ನೂತನ ವಿಜಯಗಳನ್ನು ನೀಡುತ್ತಾರೆ, ಇದರಿಂದ ಆತನೇ ನಿಮ್ಮ ದೇವರು ಮತ್ತು ನಿಮ್ಮನ್ನು ಹೆಸರಿಡಿದು ಕರೆದಾತನು ಎಂದು ನೀವು ಅರಿಯುವಿರಿ.
ಕರ್ತನ ಕನಿಕರಗಳಿಂದಲೇ ನಾವು ನಾಶವಾಗಲಿಲ್ಲ,
ಆತನ ಅಂತಃಕರುಣೆಯು ಮುಗಿಯುವದಿಲ್ಲ.
ಅವು ಪ್ರತಿ ಮುಂಜಾನೆಯೂ ಹೊಸದಾಗಿರುವವು
ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು
“ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
“ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ. ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ…” (1 ಕೊರಿಂಥ 15:57-58)
March 13
Jabez cried out to the God of Israel, “Oh, that you would bless me and enlarge my territory! Let your hand be with me, and keep me from harm so