ನೀವು ನಿಮ್ಮ ಮನಸ್ಸನ್ನು ನಿಯಂತ್ರಿಸಲು ಮತ್ತು ನಿಮ್ಮ ಆಲೋಚನೆಗಳನ್ನು ಹೇಗೆ ಮಾರ್ಗದರ್ಶಿಸಬೇಕು ಅಥವಾ ಮುನ್ನಡೆಸಬೇಕು ಎಂಬುದನ್ನು ನೀವು ಪ್ರಯತ್ನಿಸದಿದ್ದಾಗ, ನಿಮ್ಮ ಜೀವನದಲ್ಲಿ ನೀವು ಹೆಚ್ಚಿನ ಒತ್ತಡವನ್ನು ಹೊಂದಿರುತ್ತೀರಿ.
ದೇವರು ನಿಮಗಾಗಿ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳುವ ಆತಂಕವು ಸುಳ್ಳಾಗಿದೆ.
ಅವನಿಗೆ ಯಾವುದರಲ್ಲೂ ನಿಯಂತ್ರಣವಿಲ್ಲ ಮತ್ತು ನಾವು ಊಹಿಸುವುದಕ್ಕಿಂತ ಹೆಚ್ಚಿನದನ್ನು ಮಾಡಲು ಅವನಿಗೆ ಸಾಧ್ಯವಾಗುವುದಿಲ್ಲ ಎಂಬುದು ಸಹ ಸುಳ್ಳಾಗಿದೆ.
ನಾವು ಆತನನ್ನು ನಂಬದಂತೆ ಮಾಡುವುದೂ ಸುಳ್ಳಾಗಿದೆ.
ನಮ್ಮ ವಿಶ್ವಾಸವನ್ನು ಬೆಳವಣಿಗೆಯಾಗದಂತೆ ಮಾಡುವುದು ಸುಳ್ಳಾಗಿದೆ.
ನಿಮ್ಮ ಪ್ರಕರಣವನ್ನು ಇತ್ಯರ್ಥಗೊಳಿಸಲು ದೇವರು ಈಗಾಗಲೇ ಒಂದು ಮಾರ್ಗವನ್ನು ಹೊಂದಿದ್ದಾರೆ, ಆದ್ದರಿಂದ ಪ್ರತಿ ಬಾರಿ ನೀವು ಚಿಂತೆ ಮಾಡವಂತೆ ಒತ್ತಡ ಬಂದಾಗ, ಅದನ್ನು ಇನ್ನೊಂದು ಕಡೆಗೆ ತಿರುಗಿಸಿ ಮತ್ತು ನೀವು ವಿಶ್ರಾಂತಿಯ ಸ್ಥಳಕ್ಕೆ ತಲುಪಿತ್ತಿದ್ದೀರಿ ಎಂದು ದೇವರಿಗೆ ಸ್ತೋತ್ರ ಮಾಡಿ.
”ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳದಿರಲಿ ಇಲ್ಲವೆ ಅಂಜದಿರಲಿ”..
ಇಕ್ಕಟ್ಟಿನೊಳಗಿಂದ ಕರ್ತನಿಗೆ ಕೂಗಿದೆನು; ಕರ್ತನು ಉತ್ತರ ಕೊಟ್ಟು ನನ್ನನ್ನು ವಿಶಾಲ ಸ್ಥಳದಲ್ಲಿ ನಿಲ್ಲಿಸಿದನು.
ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
”ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ. ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ….”( ಫಿಲಿಪ್ಪಿ 4:6-8)
February 23
And let us consider how we may spur one another on toward love and good deeds. Let us not give up meeting together, as some are in the habit of