ಎದ್ದೇಳಿ ಮತ್ತು ದೇವರಲ್ಲಿ ನೀವು ಯಾರಾಗಿದ್ದೀರಾ ಎಂದು ನೆನಪಿನಲ್ಲಿಡಿ.
ನೀವು ಶತ್ರುವಿನ ಬಲೆಗಳಿಂದ ತಪ್ಪಿಸಿಕೊಂಡಿದ್ದೀರಿ, ಕ್ರಿಸ್ತನ ಸ್ವಂತ ರಕ್ತದಿಂದ ವಿಮೋಚನೆಗೊಂಡು ಬಿಡುಗಡೆಗೊಂಡವರಾಗಿದ್ದೀರಿ.
ನಿಮಗೆ ಶತ್ರುವಿನ ಮೇಲೆ ಅಧಿಕಾರವಿದೆ, ಆದ್ದರಿಂದ ಅವನು ನಿಮಗೆ ಸುಳ್ಳು ಹೇಳುವುದನ್ನು ಅಥವಾ ಆತನು ನಿಮ್ಮನ್ನು ದಮನ ಮಾಡಲು ಮತ್ತು ಅಡ್ಡದಾರಿ ಹಿಡಿಯಲು ಪ್ರಯತ್ನಿಸುವುದನ್ನು ಒಪ್ಪಿಕೊಳ್ಳಬೇಡಿ.
ಚಿಕ್ಕಮಕ್ಕಳೇ, ನೀವು ದೇವರಿಗೆ ಸಂಬಂಧಪಟ್ಟವರಾಗಿದ್ದೀರಿ. ಅವರನ್ನು ಜಯಿಸಿದ್ದೀರಿ. ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ.
ಅವರು ಲೋಕಸಂಬಂಧಿಗಳಾಗಿದ್ದಾರೆ; ಈ ಕಾರಣದಿಂದ ಅವರು ಲೋಕಸಂಬಂಧವಾಗಿ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ.
ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ; ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ.
ದೇವರಿಗೆ ಸಂಬಂಧಪಡದವನು ನಮ್ಮ ಮಾತನ್ನು ಕೇಳುವದಿಲ್ಲ. ಇದು ಸತ್ಯದ ಆತ್ಮ, ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದುಕೊಳ್ಳುತ್ತೇವೆ.
ನಾನು ನಿಮಗೆ ನಿಜವಾಗಿ ಹೇಳುವದೇನಂದರೆ–ನೀವು ಭೂಮಿಯ ಮೇಲೆ ಯಾವದನ್ನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವದು(ನಿಷೇಧಿಸಿ, ಯುಕ್ತವಲ್ಲದ ಮತ್ತು ಕಾನೂನುಬಾಹಿರ ಎಂದು ಘೋಷಿಸಿ). ಮತ್ತು ನೀವು ಭೂಮಿಯ ಮೇಲೆ ಯಾವದನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವದು.(ಅನುಮತಿಸಿ, ಕಾನೂನುಬದ್ಧ ಎಂದು ಘೋಷಿಸಿ)
ನಾನು ನಿಮಗೆ ತಿರಿಗಿ ಹೇಳುವದೇನಂದರೆ –ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವ ವಿಷಯಕ್ಕಾದರೂ(ದೇವರ ಚಿತ್ತಕನುಗುಣವಾಗಿ) ಭೂಮಿಯ ಮೇಲೆ ಸಮ್ಮತಿಸಿದರೆ(ಅಂದರೆ, ಒಂದೇ ಮನಸ್ಸಿನಿಂದ, ಸಾಮರಸ್ಯದಿಂದ) ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದು.
ಯಾಕಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ(ನನ್ನ ಅನುಯಾಯಿಗಳಾಗಿ ಒಟ್ಟಿಗೆ ಸೇರುವುದು) ಎಲ್ಲಿ ಕೂಡಿಬರುತ್ತಾರೋ ಅವರ ಮಧ್ಯದಲ್ಲಿ ನಾನು ಇದ್ದೇನೆ ಅಂದನು.
”ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು….”(ಯೆಶಾಯ 60:1)
March 31
Now to him who is able to do immeasurably more than all we ask or imagine, according to his power that is at work within us, to him be glory