ದೇವರು ನಮಗೆ ಪ್ರಾರ್ಥನೆಯ ಕೊಡುಗೆಯನ್ನು ನೀಡಿದಾಗ, ನಮ್ಮ ವಾಸ್ತವತೆಯನ್ನು(ಪ್ರಸ್ತುತ ಪರಿಸ್ಥಿತಿಯನ್ನು) ಬದಲಾಯಿಸುವ ಶಕ್ತಿಯನ್ನು ಅವರು ನಮಗೆ ಕೊಟ್ಟರು.
ದೇವರು ತನ್ನ ವಾಕ್ಯದ ಮೂಲಕ ಒಂದು ಪರಿಸ್ಥಿತಿಯ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನಾವು ಘೋಷಿಸುವಾಗ ಅಥವಾ ನಿವೇದಿಸುವಾಗ, ಬದಲಾವಣೆಯ ಪ್ರಕ್ರಿಯೆಯು ದೇವರ ಅದ್ಭುತ ಕಾರ್ಯ ಮಾಡುವ ಶಕ್ತಿಯನ್ನು ಅನಾವರಣಗೊಳಿಸಲು ಆರಂಭಿಸುತ್ತದೆ.
ನೀವು ಹೆಣಗಾಡುವಾಗ ದೇವರು ಚಲಿಸುವುದಿಲ್ಲ; ನೀವು ವಿಶ್ವಾಸದಿಂದ ಪ್ರಾರ್ಥಿಸಿದಾಗ ಅವರು ಚಲಿಸುತ್ತಾರೆ.
ದೇವರ ಕಾರ್ಯಗಳು ಎಂದಿಗೂ ನಿಮಗಿರುವ ಆತನ ಅಗತ್ಯತೆಗೆ ಅನುಗುಣವಾಗಿರುವುದಿಲ್ಲ, ಆದರೆ ಆತನ ಬಗ್ಗೆ ಇರುವ ನಿಮ್ಮ ಜ್ಞಾನಕ್ಕೆ ಅನುಗುಣವಾಗಿರುತ್ತದೆ.
”ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು….”(ಮತ್ತಾಯ 21:21-22)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross