ಸರ್ವಶಕ್ತ ದೇವರ ಮಗುವಾಗಿ, ನೀವು ಆತನ ಒಳ್ಳೆಯತನದ ಪ್ರಬಲವಾದ ಹೊರಹೊಮ್ಮುವಿಕೆಯನ್ನು ಸ್ವೀಕರಿಸಲಿದ್ದೀರಾ ಎಂದರೆ ನೀವು ಆಶ್ಚರ್ಯಪಡಬೇಕಾಗಿಲ್ಲ.
ನೀವು ವಾಗ್ದಾನ, ಆಶೀರ್ವಾದದ ಭರವಸೆ ಮತ್ತು ಖಾತರಿಯನ್ನು ಹೊಂದಿದ್ದೀರ ಎಂದು ಪವಿತ್ರಗ್ರಂಥದಲ್ಲಿ ಹೇಳಲಾಗಿದೆ
ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ಆಶೀರ್ವಾದ ಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
ಕರ್ತನು ನನ್ನ ಕುರುಬನು(ನನ್ನನ್ನು ಪೋಷಿಸಲು, ಮಾರ್ಗದರ್ಶನ ಮಾಡಲು ಮತ್ತು ರಕ್ಷಿಸಲು); ನಾನು ಕೊರತೆಪಡೆನು.
ಆತನು ಹಸರುಗಾವಲುಗಳಲ್ಲಿ ನನ್ನನ್ನು ತಂಗುವಂತೆ ಮಾಡುತ್ತಾನೆ. ಶಾಂತವಾದ ನೀರುಗಳ ಪಕ್ಕದಲ್ಲಿ ನನ್ನನ್ನು ನಡಿಸುತ್ತಾನೆ.
ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ.
ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ.
ನನ್ನ ವೈರಿಗಳ ಎದುರಿನಲ್ಲಿ ನನ್ನ ಮುಂದೆ ಮೇಜನ್ನು ಸಿದ್ಧಮಾಡುತ್ತೀ; ನೀನು ನನ್ನ ತಲೆಯನ್ನು ಎಣ್ಣೆಯಿಂದ ಅಭಿಷೇಕಿಸುತ್ತೀ; ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.
ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು.
”ತನ್ನ ಮಹಿಮೆಗಾಗಿಯೂ ಗುಣಾತಿಶಯಕ್ಕಾಗಿಯೂ ನಮ್ಮನ್ನು ಕರೆದಾತನ ವಿಷಯವಾದ ಪರಿಜ್ಞಾನದ ಮೂಲಕವಾಗಿ ಆತನ ದೈವಶಕ್ತಿಯು ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ನಮಗೆ ದಯಪಾಲಿಸಿತು….”( 2 ಪೇತ್ರ 1:3)
March 31
Now to him who is able to do immeasurably more than all we ask or imagine, according to his power that is at work within us, to him be glory