ಅಸ್ತಿತ್ವದಲ್ಲಿರುವ ಪ್ರತಿಯೊಂದು ಪರಮಾಣುವನ್ನು ಕ್ಷಣ ಕ್ಷಣಕ್ಕೂ ಕಾಪಾಡುವ ನಮ್ಮ ತಂದೆಯಾದ ದೇವರು, ಪಾಪ ಮತ್ತು ಸೈತಾನನ ಮೇಲೆ ನಮಗೆ ಅಧಿಕಾರವನ್ನು ನೀಡಿದ್ದಾರೆ.
ಈ ಸ್ಥಾನಮಾನ, ನಮಗೆ ನೀಡಲಾಗಿರುವ ಈ ಅಧಿಕಾರವು ವಿಶೇಷ ಹಕ್ಕನ್ನು(ಸವಲತ್ತನ್ನು) ನಮಗೆ ನೀಡುತ್ತದೆ ಮತ್ತು ಕ್ರಿಸ್ತ ಯೇಸುವಿನಲ್ಲಿರಿಸಿರುವ ನಮ್ಮ ವಿಶ್ವಾಸದಿಂದಾಗಿ ಇದು ನಮಗೆ ಸಾಧ್ಯವಾಗಿದೆ
ನೀವು ನಿಮ್ಮ ಸ್ವಂತ ಶಕ್ತಿಯಿಂದ ಅಂಧಕಾರ ಶಕ್ತಿಗಳನ್ನು (ಅಸ್ವಸ್ಥತೆ, ಭಯ, ಕೆಡುಕು, ಕೊರತೆ) ತಡೆದು ನಿಲ್ಲಿಸುತ್ತಿಲ್ಲ ಬದಲಾಗಿ ಕ್ರಿಸ್ತನಲ್ಲಿ ದೇವರು ನಿಮಗೆ ನೀಡಿಲಾಗಿರುವ ನಿಯೋಜಿತ ಅಧಿಕಾರದಿಂದ ನೀವು ಅವುಗಳನ್ನು ತಡೆಯುತ್ತಿದ್ದೀರಿ. ನೀವು ದೇವರ ಎಲ್ಲಾ ಶಕ್ತಿಯಿಂದ ಬೆಂಬಲಿತರಾಗಿದ್ದೀರಿ.
ಅದು ಎಷ್ಟು ಅದ್ಭುತವಾಗಿದೆ – ಸ್ವತಃ ಸರ್ವಶಕ್ತ ದೇವರೇ ನಿಮ್ಮ ಅಧಿಕಾರದ ಹಿಂದಿರುವ ಶಕ್ತಿಯಾಗಿದ್ದಾರೆ.
ಎಫೆಸಿ 6:10 ರಲ್ಲಿ ಹೇಳುತ್ತದೆ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ ಎಂದು, ಇದರರ್ಥ ದೇವರ ಅತ್ಯಧಿಕವಾದ ಶಕ್ತಿಯಿಂದ ಬೆಂಬಲಿತರಾಗಿ ನಿಮ್ಮ ಕೈಯಿಂದ ಸೈತಾನನನ್ನು ತಡೆ ಹಿಡಿದು ಅವನಿಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿ ಅವನ ಮುಂದೆಯೇ ನಿಮ್ಮ ಹೆಜ್ಜೆಯನ್ನು ಮುಂದಿಟ್ಟು ಹೋಗಬಹುದು.
ಲೂಕಾ 10:19 ರಲ್ಲಿ ಯೇಸು ಮಾತನಾಡುತ್ತಿರುವ ಅಧಿಕಾರವು ವಿವೇಚನಾರಹಿತ ಶಕ್ತಿಯ ಬಗ್ಗೆಯಲ್ಲ. ಇದು ಒಂದು ನಿಯೋಜಿತ ಶಕ್ತಿಯ ಬಗ್ಗೆ, ಒಬ್ಬ ಪೋಲಿಸ್ ಹೊಂದಿರುವ ಅಧಿಕಾರದಂತೆ. ಟ್ರಾಫಿಕ್ ಮುಂದೆ ಒಬ್ಬ ಪೋಲಿಸ್ ಹೆಜ್ಜೆ ಹಾಕಿದಾಗ ಮತ್ತು ಅದನ್ನು ನಿಲ್ಲಿಸಲು ಅವನ ಕೈಯನ್ನು ಮೇಲೆತ್ತಿ ಹಿಡಿದಾಗ, ಅವನು ತನ್ನ ಸ್ವಂತ ವಿವೇಚನಾಯುಕ್ತ ಶಕ್ತಿಯಿಂದ ಕಾರುಗಳು ಮತ್ತು ಟ್ರಕ್ಗಳನ್ನು ನಿಲ್ಲಿಸುತ್ತಿಲ್ಲ – ಸಮವಸ್ತ್ರವನ್ನು ಧರಿಸಿರುವದರಿಂದ ಬರುವ ನಿಯೋಜಿತ ಅಧಿಕಾರದಿಂದ ಅವನು ಅವುಗಳನ್ನು ನಿಲ್ಲಿಸುತ್ತಾನೆ. ಅವನು ಕಾನೂನಿನ ನಿಯಮದಿಂದ ಬೆಂಬಲಿತನಾಗಿದ್ದಾನೆ.
ಅದುವೇ ಕ್ರಿಸ್ತನಲ್ಲಿ ನಿಮಗಿರುವ ಅಧಿಕಾರವಾಗಿದೆ.
”ಇಗೋ, ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು….”(ಲೂಕಾ 10:19)
May 10
He who heeds discipline shows the way to life, but whoever ignores correction leads others astray. —Proverbs 10:17. Discipline is not only essential for us, but also for those who