ದೇವರನ್ನು ಅರಸುವವರಿಗೆ/ಹುಡುಕುವವರಿಗೆ ಬೈಬಲಿನಲ್ಲಿ ಅನೇಕ ವಾಗ್ದಾನಗಳನ್ನು ದೇವರು ಮಾಡಿದ್ದಾರೆ.
ನನ್ನನ್ನು ಹುಡುಕುವಿರಿ; ಪೂರ್ಣ ಹೃದಯದಿಂದ ನನ್ನನ್ನು ಹುಡುಕುವಾಗ ನನ್ನನ್ನು ಕಂಡುಕೊಳ್ಳುವಿರಿ.
ನೀವು ನಿರಂತರವಾಗಿ ದೇವರನ್ನು ಹುಡುಕುವಾಗ, ನೀವು ನಿಜವಾಗಿಯೂ ಹೇಗೆ ಜೀವಿಸಬೇಕೆಂದು ಕಲಿಯಲು ಪ್ರಾರಂಭಿಸುತ್ತೀರಿ.
ಕರ್ತನನ್ನೂ ಆತನ ಬಲವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾಗಲೂ ಹುಡುಕಿರಿ.
ಸರಿಯಾದ ಉದ್ದೇಶಗಳೊಂದಿಗೆ ದೇವರನ್ನು ಹುಡುಕಿರಿ – ಆತನನ್ನು ಅರಿತುಕೊಳ್ಳಲು/ತಿಳಿದುಕೊಳ್ಳಲು ಬಯಸುವ ಉದ್ದೇಶದಿಂದಲೇ ಹೊರೆತು ಆತನಿಂದ ಏನನ್ನಾದರೂ ಪಡೆಯಲು ಬಯಸುವ ಉದ್ದೇಶದಿಂದಲ್ಲ.
ಸೃಷ್ಟಿಕರ್ತನನ್ನು, ಆಶೀರ್ವದಿಸುವಾತನನ್ನು , ವಿಮೋಚಕನನ್ನು, ಗುಣಪಡಿಸುವವನನ್ನು, ರಕ್ಷಕನಾದ ಆತನನ್ನು ನೀವು ಹುಡುಕುವಾಗ, ಉಳಿದವುಗಳೆಲ್ಲವೂ ನಿಮಗೆ ಸೇರಿಸಲ್ಪಡುತ್ತವೆ.
ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡುವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.
”ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು….”(ಮತ್ತಾಯ 6:33)
March 31
Now to him who is able to do immeasurably more than all we ask or imagine, according to his power that is at work within us, to him be glory